ಚಾಮರಾಜನಗರ: ಜಿಲ್ಲೆಯ ಯಳಂದೂರು ತಾಲೂಕಿನ ಹೊನ್ನೂರು ಗ್ರಾಮದಲ್ಲಿ ಇಂದು ಚಾಮುಂಡೇಶ್ಚರಿ ದೇವಿಗೆ ವಿಶೇಷ ಪೂಜೆ ಕೈಂಕಾರ್ಯ ನಡೆಯಿತು.
ಪ್ರತೀ ವರ್ಷದಂತೆ ಈ ವರ್ಷವೂ ಕೂಡ ಹೊನ್ನೂರು ಗ್ರಾಮದಲ್ಲಿ ನವರಾತ್ರಿ ಅಂಗವಾಗಿ 9 ದಿನಗಳಿಂದಲೂ ತಾಯಿ ಶ್ರೀ ಚಾಮುಂಡೇಶ್ವರಿದೇವಿಗೆ ವಿಶೇಷ ಪೂಜೆ ಕೈಂಕರ್ಯ ನಡೆಸಿಕೊಂಡು ಬರಲಾಗಿತ್ತು.
ಆಯುಧಪೂಜೆ ಹಬ್ಬದ ದಿನವಾದ ಶುಕ್ರವಾರದಂದು ಇಂದು ಭಕ್ತಾಧಿಗಳು ಸಡಗರ ಸಂಭ್ರಮದಿಂದ ಆಯುಧಗಳಿಗೆ ಹಾಗೂ ವಾಹನಗಳಗೆ ಬಾಳೆಕಂದು ಮಾವಿನಸೊಪ್ಪು ಹಾಗು ಹೂವಿನಿಂದ ಅಲಂಕರಿಸಿ ಪೂಜೆಗೈದರು.
ನಂತರ ಸಂಜೆ 5 ಗಂಟೆಯಲ್ಲಿ ಗ್ರಾಮದಲ್ಲಿರುವ ಮಂಟಪದಲ್ಲಿ ಚಾಮುಂಡೇಶ್ಚರಿ ದೇವಿಗೆ ವಿಶೇಷವಾಗಿ ಅಲಂಕರಿಸಿ ಪೂಜೆಗೈಯಲಾಯ್ತು.
ಈ ವೇಳೆ ಮಹಿಳೆಯರು ಯುವಕ ಯುವತಿಯರು ಸೇರಿದಂತೆ ಗ್ರಾಮಸ್ಥರು ಹಾಗೂ ತಾಲೂಕಿನ ವಿವಿದೆಡೆಯಿಂದ ಭಕ್ತರು ಆಗಮಿಸಿ ಭಕ್ತಿಯ ಪರಾಕಾಷ್ಟೆಯಲ್ಲಿ ಮಿಂದರು.