ಬೆಂಗಳೂರು: ಅಯೋಧ್ಯೆ ದರ್ಶನಕ್ಕೆ ಬೆಂಗಳೂರಿನಿಂದ ವಿಶೇಷ ರೈಲು ಹೊರಟಿದೆ. ಅಯೋಧ್ಯೆ ಶ್ರೀರಾಮ ದರ್ಶನ ಅಭಿಯಾನದಡಿ ಬಿಜೆಪಿ ಕಾರ್ಯಕರ್ತರು ದರ್ಶನಕ್ಕೆ ತೆರಳುತ್ತಿದ್ದಾರೆ.
ಬೈಯಪ್ಪನಹಳ್ಳಿಯ ಸರ್ ಎಂ. ವಿಶ್ವೇಶ್ವರಯ್ಯ ರೈಲು ನಿಲ್ದಾಣದಿಂದ ಸಂಸದ ಪಿಸಿ ಮೋಹನ್ ಪ್ರವಾಸಕ್ಕೆ ಚಾಲನೆ ನೀಡಿದ್ದಾರೆ. ಬೆಂಗಳೂರಿನ 3 ಲೋಕಸಭಾ ಕ್ಷೇತ್ರಗಳ 1450 ಮಂದಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾರೆ
ಇಂದು ಬೆಳಗ್ಗಿನ ಜಾವ 3:40ಕ್ಕೆ ಹೊರಟ ರೈಲು ಫೆ.16ರ ಮಧ್ಯಾಹ್ನ ಅಯೋಧ್ಯೆ ಧಾಮವನ್ನು ತಲುಪಲಿದೆ. ಫೆ. 17ರ ಬೆಳಗ್ಗೆ ರೈಲು ಅಯೋಧ್ಯೆ ಧಾಮದಿಂದ ಹೊರಟು ಫೆ.20ರ ಬೆಳಗ್ಗೆ ಬೆಂಗಳೂರು ತಲುಪಲಿದೆ.