ಬೆಂಗಳೂರು ;- ರಾಜಧಾನಿ ಬೆಂಗಳೂರಿನ ಕಚೇರಿಯಲ್ಲಿ ಜೆಡಿಎಸ್ ರಾಜ್ಯಮಟ್ಟದ ವಕ್ತಾರರ ಸಭೆ ಜರುಗಿದೆ. ಹೆಚ್.ಡಿ.ಕುಮಾರಸ್ವಾಮಿಯವರ ನೇತೃತ್ವದಲ್ಲಿ ಸಭೆ ಜರುಗಿದ್ದು, ಜೆಡಿಎಸ್ ಪಕ್ಷ ಮತ್ತೆ ತಳಹದಿಯಿಂದ ಸಂಘಟಿಸಲು ಹೆಚ್ ಡಿ ಕುಮಾರಸ್ವಾಮಿ ಸೂಚನೆ ನೀಡಿದ್ದಾರೆ.
ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ರಾಜ್ಯಕ್ಕೆ ಕೊಟ್ಟ ಕೊಡುಗೆ, ಸೇವೆಗಳ ಬಗ್ಗೆ ಮತ್ತಷ್ಟು ಜನರಿಗೆ ತಲುಪಿಸಬೇಕು. ಜೊತೆಗೆ ಮಾಜಿ ಸಿಎಂ, ಜೆಡಿಎಸ್ ನಾಯಕ ಹೆಚ್.ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಸಾಲಮನ್ನ ಹಾಗೂ ಇನ್ನಿತರ ಎಲ್ಲಾ ವಿಚಾರಗಳು ಪ್ರಚಾರ ಮಾಡಿ. ಹಾಗೂ ಜೆಡಿಎಸ್ ಪಕ್ಷದ ಮುಂದಿನ ನಿಲುವುಗಳು ಸ್ಪಷ್ಟತೆಯಿಂದ ಜನರ ಮನಸ್ಸಿಗೆ ತಲುಪಿಸಿ ಎಂದು ಸಭೆಯಲ್ಲಿ ಸೂಚನೆ ಕೊಟ್ಟಿದ್ದಾರೆ.
ಸಭೆಯಲ್ಲಿ ಜೆಡಿಎಸ್ ಎಂಎಲ್ಸಿ ಟಿ.ಎ ಶರವಣ, ಮಾಜಿ ಎಂಎಲ್ಸಿ ಶ್ರೀಕಂಠೇಗೌಡ, ವಕ್ತಾರರಾದ ಚರಣ್ಗೌಡ, ನಸ್ಮಾ, ದೇವರಾಜು, ಅಶ್ವಿನ್ ಕುಮಾರ್ ಸೇರಿದಂತೆ ಮತ್ತಿತರರು ಭಾಗಿಯಾಗಿದರು.