ಸಿಯೋಲ್: ಉತ್ತರ ಕೊರಿಯಾದ ಉನ್ನತ ಅಧಿಕಾರಿಗಳು ದೇಶದ ಪ್ರಥಮ ಗೂಢಚರ್ಯೆ ಉಪಗ್ರಹ ಉಡಾವಣೆಯ ವೈಫಲ್ಯ ಈ ವರ್ಷದ ಅತ್ಯಂತ ಗಂಭೀರ ಲೋಪ ಎಂದು ಕರೆದಿದ್ದು ಇದಕ್ಕೆ ಜವಾಬ್ದಾರರಾದವರನ್ನು ಕಠಿಣ ಶಬ್ದಗಳಿಂದ ದೂಷಿಸಿದ್ದಾರೆ ಎಂದು ಸರ್ಕಾರಿ ಸ್ವಾಮ್ಯದ ಮಾಧ್ಯಮಗಳು ವರದಿ ಮಾಡಿದೆ.
ಮೇ ತಿಂಗಳ ಕೊನೆಯಲ್ಲಿ ಮಿಲಿಟರಿ ಗುಪ್ತಚರ ಉಪಗ್ರಹವನ್ನು ಹೊತ್ತಿದ್ದ ಉತ್ತರ ಕೊರಿಯಾದ ರಾಕೆಟ್ ಉಡಾವಣೆಗೊಂಡ ಕೆಲವೇ ಹೊತ್ತಿನಲ್ಲಿ ಪತನಗೊಂಡಿತ್ತು. ಇದು ಅಮೆರಿಕ ಮತ್ತು ದಕ್ಷಿಣ ಕೊರಿಯಾದ ಮೇಲೆ ನಿಗಾ ಇರಿಸಲು ಬಾಹ್ಯಾಕಾಶ ಆಧರಿತ ಕಣ್ಗಾವಲು ವ್ಯವಸ್ಥೆಯನ್ನು ಸ್ಥಾಪಿಸುವ ಉತ್ತರ ಕೊರಿಯಾದ ಅಧ್ಯಕ್ಷ ಕಿಮ್-ಜಾಂಗ್-ವುನ್ ಅವರ ಮಹತ್ವಾಕಾಂಕ್ಷೆಗೆ ಹಿನ್ನಡೆ ಉಂಟು ಮಾಡಿತ್ತು.