ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮ್ಸಿಂಘೆ ನೇತೃತ್ವದ ಸರಕಾರವು ಚುನಾವಣೆಗಳನ್ನು ವಿಳಂಬ ಮಾಡಿ ದೇಶದ ನಾಗರಿಕರ ಮೂಲಭೂತ ಹಕ್ಕುಗಳನ್ನು ಉಲ್ಲಂ ಸಿದೆ ಎಂದು ಅಲ್ಲಿನ ಸುಪ್ರೀಂ ಕೋರ್ಟ್ ಸರಕಾರವನ್ನು ತರಾಟೆ ತೆಗೆದುಕೊಂಡಿದೆ. ಅಲ್ಲದೆ ಬಹುಕಾಲದಿಂದ ಮುಂದೂಡುತ್ತಿರುವ ಸ್ಥಳೀ ಯ ಸಂಸ್ಥೆಗಳ ಚುನಾವಣೆಯನ್ನು ಶೀಘ್ರವೇ ನಡೆಸುವಂತೆ ಆದೇಶ ನೀಡಿದೆ.
340ಕ್ಕೂ ಅಧಿಕ ಸ್ಥಳೀಯ ಸಂಸ್ಥೆ ಗಳಿಗೆ ಕಳೆದ ವರ್ಷದಿಂದಲೂ ಚುನಾವಣೆ ಮುಂದೂ ಡಲಾಗುತ್ತಿರುವುದನ್ನು ಪ್ರಶ್ನಿಸಿ ವಿಪಕ್ಷಗಳು, ಸಿವಿಲ್ ಸೊಸೈಟಿ ಗುಂಪುಗಳು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಪೀಠ ಈ ಹೇಳಿಕೆಯನ್ನು ನೀಡಿದೆ.
ಈ ವೇಳೆ ಚುನಾವಣೆ ಆಯೋಗ ದ ಸದಸ್ಯರು ಹಾಗೂ ಅಧ್ಯಕ್ಷ ರನಿಲ್ ವಿಕ್ರಮ್ಸಿಂಘೆ ಚುನಾವಣೆ ನಡೆಸುವಲ್ಲಿ ವಿಫಲರಾಗಿ ನಾಗರಿಕರ ಹಕ್ಕು ಉಲ್ಲಂಘಿಸಿದ್ದಾರೆ ಎಂಬುದನ್ನು ಗಮನಿಸಿದೆ.