ಬೆಂಗಳೂರು:- ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರ ನಿರ್ಮಾಣಕ್ಕೆ ವ್ಯಾಪಕ ಸಿದ್ಧತೆಗಳು ನಡೆಯುತ್ತಿದ್ದು, ಇಡೀ ದೇಶ ಸಂಭ್ರಮಾಚರಣೆಯಲ್ಲಿ ತೊಡಗಿರುವಾಗ ಶ್ರೀರಾಮಚಂದ್ರ ಮಾಂಸಹಾರಿ ಎಂಬುದು ಸೇರಿದಂತೆ ವಿವಿಧ ರೀತಿಯಲ್ಲಿ ಅಪ ಪ್ರಚಾರ ಮಾಡಲಾಗ್ತಿದೆ. ಹೀಗಾಗಿ ಈ ಕೆಟ್ಟ ಉದ್ದೇಶವನ್ನ ಕೈಬಿಡಬೇಕು ಎಂದು ಉತ್ತರ ಪ್ರದೇಶದ ಆನಂದಧಾಮ್ ಪೀಠದ ಗುರೂಜಿ ರಿತೇಶ್ವರ್ ಅಸಮಧಾನ ಹೊರ ಹಾಕಿದ್ದಾರೆ.
ರಾಮಮಂದಿರದ ನಂತರ ಕೃಷ್ಣಮಂದಿರ ನಿರ್ಮಾಣ ಮಾಡುವುದು ನಮ್ಮ ಗುರಿಯಾಗಿದ್ದು, ಮುಂದಿನ 442 ದಿನಗಳಲ್ಲಿ ಮಥುರೆಯಲ್ಲಿ ಕೃಷ್ಣ ಮಂದಿರ ತಲೆ ಎತ್ತಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಬೆಂಗಳೂರಿನಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಹಲವು ಹಂತಗಳ ಚುನಾವಣೆಗಳು ನಿರಂತರವಾಗಿ ನಡೆಯತ್ತವೆ. ಇದೇ ರೀತಿ ಸದ್ಯದಲ್ಲಿಯೇ ಲೋಕಸಭಾ ಚುನಾವಣೆಯೂ ಎದುರಾಗಲಿದೆ. ಇದು ಕೂಡ ಉತ್ತಮ ಬೆಳವಣಿಗೆಯಲ್ಲವೇ?. ರಾಷ್ಟ್ರೀಯ ವಾದ, ಸಾಂಸ್ಕೃತಿಕ ಮೌಲ್ಯ ಮತ್ತು ರಾಷ್ಟ್ರೀಯ ಹಿತಾಸಕ್ತಿಯುಳ್ಳ ಪಕ್ಷ ಗೆದ್ದು ಅಧಿಕಾರಕ್ಕೆ ಬಂದರೆ ತಪ್ಪೇನು?. ರಾಮಮಂದಿರ ಈ ದೇಶದ ಆತ್ಮ. ರಾಜಕೀಯ ಪಕ್ಷಗಳು ಯಾಕೆ ಚುನಾವಣೆಗೆ ಹೆದರಿಕೊಂಡಿವೆ.
ರಾಮಮಂದಿರದಿಂದ ಉತ್ತರ ಪ್ರದೇಶದ ಆರ್ಥಿಕತೆಯಲ್ಲಿ ಮಹತ್ವದ ಬದಲಾವಣೆಯಾಗುತ್ತಿದ್ದು, ಉದ್ಯೋಗ ಕೂಡ ದೊರೆಯುತ್ತಿದೆ. ಶ್ರೀ ರಾಮಮಂದಿರದಿಂದ ಏಕತೆ ಮೂಡಿದ್ದು, ಎಲ್ಲವೂ ಒಳ್ಳೆಯದಾಗುತ್ತದೆ ಎನ್ನುವ ಮೂಲಕ ದೇಶದಲ್ಲಿ ಮತ್ತೊಮ್ಮೆ ಬಿಜೆಪಿ ಆಳ್ವಿಕೆ ಬಗ್ಗೆ ಭವಿಷ್ಯ ನುಡಿದಿದ್ದಾರೆ.