ಕನ್ನಡದ ಹುಡುಗಿ ನಟಿ ಶ್ರೀಲೀಲಾ ಟಾಲಿವುಡ್ನಲ್ಲಿ ಸಖತ್ ಡಿಮ್ಯಾಂಡ್ ಕ್ರಿಯೇಟ್ ಮಾಡಿದ್ದಾರೆ. ಚಿತ್ರರಂಗ್ಕಕೆ ಎಂಟ್ರಿಕೊಟ್ಟ ಕೆಲವೇ ಕೆಲವು ವರ್ಷಗಳಲ್ಲಿ ಸ್ಟಾರ್ ನಟರ ಜೊತೆ ನಟಿಸುವ ಮೂಲಕ ಸಖತ್ ಆಫರ್ ಗಿಟ್ಟಿಸಿಕೊಂಡಿದ್ದಾರೆ. ಹೀಗಿರುವಾಗ ಗೋಲ್ಡನ್ ಚಾನ್ಸ್ವೊಂದನ್ನು ನಟಿ ಮಿಸ್ ಮಾಡಿಕೊಂಡಿದ್ದಾರೆ.
‘ಗುಂಟೂರು ಖಾರಂ’ ಸಿನಿಮಾ ಸಕ್ಸಸ್ ಆದ್ರೂ ಶ್ರೀಲೀಲಾಗೆ ಲಕ್ ಕೈಕೊಟ್ಟಂತಿದೆ, ಮೆಗಾಸ್ಟಾರ್ ಚಿರಂಜೀವಿ ಪುತ್ರ, ಆರ್ ಆರ್ ಆರ್ ಖ್ಯಾತಿಯ ಸ್ಟಾರ್ ನಟ ರಾಮ್ ಚರಣ್ ಜೊತೆ ಡ್ಯುಯೇಟ್ ಹಾಡುವ ಅವಕಾಶವನ್ನು ನಟಿ ಶ್ರೀಲೀಲಾ ಮಿಸ್ ಮಾಡಿಕೊಂಡಿದ್ದಾರೆ.
ರಾಮ್ ಚರಣ್ ನಟನೆಯ 16ನೇ ಸಿನಿಮಾವನ್ನು ಬುಚ್ಚಿ ಬಾಬು ಸನಾ ನಿರ್ದೇಶನ ಮಾಡಲಿದ್ದಾರೆ. ಈ ಚಿತ್ರದಲ್ಲಿ ನಟ ಶಿವರಾಜ್ ಕುಮಾರ್ ಕೂಡ ಕಾಣಿಸಿಕೊಳ್ತಿದ್ದಾರೆ. ಈ ಸಿನಿಮಾದಲ್ಲಿ ರಾಮ್ ಚರಣ್ಗೆ ಜೋಡಿಯಾಗಿ ಶ್ರೀಲೀಲಾ ನಟಿಸ್ತಾರೆ ಎಂದು ಹೇಳಲಾಗಿತ್ತು. ಈ ಬಗ್ಗೆ ನಟಿಯ ಜೊತೆ ಚಿತ್ರತಂಡ ಮಾತುಕತೆ ಕೂಡ ನಡೆಸಿತ್ತು. ಆದರೆ ಏಕಾಏಕಿ ಶ್ರೀಲೀಲಾ ಜಾಗಕ್ಕೆ ನಟಿ ಜಾನ್ವಿ ಕಪೂರ್ ಎಂಟ್ರಿಕೊಟ್ಟಿದ್ದಾರೆ.
ಬಾಲಯ್ಯ, ಮಹೇಶ್ ಬಾಬುರಂತಹ ಸ್ಟಾರ್ಗಳ ಜೊತೆ ನಟಿಸಿರುವ ಲೀಲಾಗೆ ರಾಮ್ ಚರಣ್ ಜೊತೆ ನಟಿಸಿದ್ರೆ ಕೆರಿಯರ್ಗೆ ಬಿಗ್ ಬ್ರೇಕ್ ಸಿಗುತ್ತಿತ್ತು. ಆದರೆ ಕಾರಣಾಂತರಗಳಿಂದ ಶ್ರೀಲೀಲಾ ಆಫರ್ ಜಾನ್ವಿ ಪಾಲಾಗಿದೆ. ಈಗಾಗಲೇ ಜಾನ್ವಿ ಹಾಗೂ ರಾಮ್ ಚರಣ್ ದೇವರ ಸಿನಿಮಾದಲ್ಲಿ ಒಂದಾಗಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಶ್ರೀಲೀಲಾ ಬಂಪರ್ ಆಫರ್ ಕೈ ಬಿಟ್ಟುಹೋಗಿದೆ.