ಬೆಂಗಳೂರು: SSLC, PUC ಪರೀಕ್ಷೆ ವೇಳಾಪಟ್ಟಿ ಶಿಕ್ಷಣ ಇಲಾಖೆ ಬಿಡುಗಡೆಗೊಳಿಸಿದ್ದು ಮಾರ್ಚ್ 1ರಿಂದ ಪರೀಕ್ಷೆ ಆರಂಭಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಭಿಗಿ ಭದ್ರತೆ ನಡೆಸಲು ಈಗಿನಿಂದಲೇ ತಯಾರಿ ನಡೆಸಲಾಗುತ್ತಿದೆ.
SSLC, PUC ಪರೀಕ್ಷೆ ವೇಳ ಪಟ್ಟಿ ಶಿಕ್ಷಣ ಇಲಾಖೆ ಬಿಡುಗಡೆಗೊಳಿಸಿದ್ದು ಈ ಹಿನ್ನೆಲೆ ಇಲಾಖೆ ಭರ್ಜರಿ ತಯಾರಿ ನಡೆಸುತ್ತಿದ್ದು, ಯಾವುದೇ ಅಕ್ರಮ ನಡೆದಂತೆ ಫುಲ್ ಟೈಟ್ ಸೆಕ್ಯುರಿಟಿಗೆ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ.
ಫಲಿತಾಂಶ ಹೆಚ್ಚಳ ದೃಷ್ಟಿಯಿಂದ ಕಳೆದ ವರ್ಷದಂತೆ ಈ ವರ್ಷ ಮೂರು ಬಾರಿ ಪರೀಕ್ಷೆ ನಡೆಸಲಾಗಿದ್ದು ಮೂರು ಪರೀಕ್ಷೆಯಲ್ಲಿ ಕಠಿಣವಾಗಿ ಪ್ರೆಶ್ನೆ ಪತ್ರಿಕೆ ಇರಲಿದ್ದು, ವಿದ್ಯಾರ್ಥಿಗಳು ಈಗಿನಿಂದಲೇ ಅಭ್ಯಾಸ ಮಾಡಿಕೊಳ್ಳಲು ಶಿಕ್ಷಣ ಇಲಾಖೆ ಮನವಿ ಮಾಡಲಾಗಿದೆ.
ಇನ್ನೂ ವಿದ್ಯಾರ್ಥಿಗಳು ಮೂರು ಪರೀಕ್ಷೆಯಲ್ಲಿ ಭಾಗಿಯಾಗಬಹುದು ಮೊದಲ ಪರೀಕ್ಷೆ ಫಲಿತಾಂಶ ಸಮಾಧಾನವಾಗದಿದ್ದರೆ ಮತ್ತೆರಡು ಪರೀಕ್ಷೆ ಬರೆದಿದ್ರು ನಡೆಯುತ್ತೆ ರಿಪಿಟರ್ಸ್ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಅವಕಾಶ ಮಾಡಿಕೊಡಲಾಗಿದ್ದು, ಗ್ರೆಸ್ ಮಾಕ್ರ್ಸ ಗೆ ಅವಕಾಶ ಮಾಡಿಕೊಡಲಾಗಿದೆ ಈ ಬಗ್ಗೆ ಶಿಕ್ಷಣ ಇಲಾಖೆ ನಿರ್ದೇಶಕ ಗೋಪಾಲ ಕೃಷ್ಣರಿಂದ ಮಾಹಿತಿ ಲಭ್ಯವಾಗಿದೆ.