ಬೆಂಗಳೂರು: ಎಸ್ ಟಿ ಸೋಮಶೇಖರ್ ದ್ರೋಹ ಬಗೆದಿದ್ದಾರೆ ಪಕ್ಷಕ್ಕೆ ಮೋಸ ಮಾಡಿದ್ರೆ ತಾಯಿಗೆ ಮೋಸ ಮಾಡಿದ ರೀತಿ ಈ ರೀತಿ ಪದೇ ಪದೆ ಮೋಸ ಮಾಡೋದನ್ನ ಜನ ಸಹಿಸಲ್ಲ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಕಿಡಿ ಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಿಂದ ಬಂದು ಯಡಿಯೂರಪ್ಪ ನವರು ಸಚಿವರನ್ನಾಗಿ ಮಾಡಿದ್ದರು ಎಸ್ ಟಿ ಸೋಮಶೇಖರ್ ದ್ರೋಹ ಬರೆದಿದ್ದಾರೆ ಪಕ್ಷಕ್ಕೆ ಮೋಸ ಮಾಡಿದ್ರೆ ತಾಯಿಗೆ ಮೋಸ ಮಾಡಿದ ರೀತಿ ಅವರನ್ನ ಯಾವುದೇ ಕಾರಣಕ್ಕೂ ಜನ ಕ್ಷಮೆ ಕೊಡಲ್ಲ ಇದು ರಾಜಕೀಯವಾಗಿ ಸೂಸೈಡ್ ಮಾಡಿಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಸೋಮಶೇಖರ್ ಅವರೇ ನಿನ್ನೆ ಕರೆ ಮಾಡಿದ್ರು. ದ್ರೋಹ ಬಗೆಯಲ್ಲ ಅಂತ ಹೇಳಿದ್ರು. ಸೋಮಶೇಖರ್ ಅವರು ಡಿ.ಕೆ. ಶಿವಕುಮಾರ್ ಜೊತೆಗೆ, ಸಿದ್ದರಾಮಯ್ಯ ಜೊತೆಗೆ ಓಡಾಡುವಾಗಲೇ ಗುಮಾನಿ ಇತ್ತು. ಜನ ಅವರನ್ನು ಕ್ಷಮಿಸಲ್ಲ ಎಂದು ಹೇಳಿದರು. ಕಾನೂನಾತ್ಮಕವಾಗಿ ಅವರ ಮೇಲೆ ಕ್ರಮ ತೆಗದುಕೊಳ್ಳುತ್ತೇವೆ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ್ ತಿಳಿಸಿದ್ದಾರೆ.