ಮೊದಲ ಸಿನಿಮಾದಲ್ಲೇ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡ ನಟ ನಾಗ ಶೌರ್ಯ. ರಾತ್ರೋ ರಾತ್ರಿ ಸ್ಟಾರ್ ಆಗಿ ಮಿಂಚಿದ ನಾಗಶೌರ್ಯ ಇತ್ತೀಚೆಗೆ ಸಖತ್ ಸೈಲೆಂಟ್ ಆಗಿದ್ದಾರೆ. ಕಳೆದ ನಾಲ್ಕೈದು ವರ್ಷಗಳಿಂದ ಸಿನಿಮಾಗಳು ಸೋಲುತ್ತಿದ್ದರಿಂದ ಇದೀಗ ಸಿನಿಮಾಗೆ ಬ್ರೇಕ್ ತೆಗೆದುಕೊಂಡು ಮದುವೆ ಆಗಿದ್ದಾರೆ.
ಬ್ಯಾಕ್ ಟು ಬ್ಯಾಕ್ ಸೋಲಿನ ಕಾರಣದಿಂದಾಗಿ ನಾಗಶೌರ್ಯ ಸೈಲೆಂಟ್ ಆಗಿದ್ದಾರೆ. ಹೇಗಾದರು ಮಾಡಿ ಹಿಟ್ ಸಿನಿಮಾ ಮಾಡಬೇಕು ಎಂದು ಸಖತ್ ವರ್ಕೌಟ್ ಮಾಡ್ತಿದ್ದಾರೆ. ಸಿಕ್ಸ್ ಪ್ಯಾಕ್ ಮಾಡಿಕೊಂಡಿದ್ರೆ ಸಿನಿಮಾಗಳು ಮಾತ್ರ ಮಕಾಡೆ ಮಲಗುತ್ತಿವೆ.
ಇದೀಗ ನಾಗಶೌರ್ಯ ತಮ್ಮ ಖಾಸಗಿ ವಿಚಾರಕ್ಕೆ ಸುದ್ದಿಯಾಗಿದ್ದಾರೆ. ನಾಗ ಶೌರ್ಯ ಅವರ ತಾಯಿ ಉಷಾ ಖಾಸಗಿ ಚಾನೆಲ್ ಒಂದರಲ್ಲಿ ನಡೆಸಲಾದ ಸಂದರ್ಶನದಲ್ಲಿ ತಮ್ಮ ಮಗನ ಬಗ್ಗೆ ಭಾವುಕವಾಗಿ ಮಾತನಾಡಿದ್ದಾರೆ.
ಮದುವೆ ತನಕ ನಿಮ್ ಜೊತೆ ಇರ್ತೀನಿ, ಆಮೇಲೆ ದೂರ ಹೋಗುತ್ತೀನಿ ಎಂದು ಶೌರ್ಯ ಹೇಳಿದ್ದನ್ನು ನೆನಪಿಸಿಕೊಂಡು ಕಣ್ಣೀರು ಹಾಕಿದ್ದಾರೆ. ಈ ವಿಚಾರ ಇದೀಗ ಚಿತ್ರರಂಗದಲ್ಲಿ ಭಾರೀ ಸದ್ದು ಮಾಡುತ್ತಿದೆ.
ನಾಗಶೌರ್ಯ ಅವರ ತಾಯಿ ಉಷಾ ಅವರು ತೆಲುಗು ಚಿತ್ರರಂಗದಲ್ಲಿ ಪ್ರೊಡಕ್ಷನ್ ಕಂಪನಿ ಹಾಗೂ ರೆಸ್ಟೋರೆಂಟ್ ಒಂದನ್ನು ಆರಂಭಿಸಿ ಈ ಉದ್ಯಮದಲ್ಲಿ ಯಶಸ್ಸು ಗಳಿಸಿದ್ದಾರೆ. ಇವರ ರೆಸ್ಟೋರೆಂಟ್ಗೆ ಒಳ್ಳೆ ಹೆಸರು ಇದೆ.
ಶೌರ್ಯ ಅವರ ತಾಯಿ ಉಷಾ ಖಾಸಗಿ ಚಾನೆಲ್ ಒಂದರಲ್ಲಿ ನಡೆಸಲಾದ ಸಂದರ್ಶನದಲ್ಲಿ ತಮ್ಮ ಮಗನ ಬಗ್ಗೆ ಭಾವುಕವಾಗಿ ಮಾತನಾಡಿದ್ದಾರೆ. ಮದುವೆಯಾದ ತಕ್ಷಣ, ಪ್ರತ್ಯೇಕ ಕುಟುಂಬಗಳನ್ನು ಪ್ರಾರಂಭಿಸಿದ. ಮತ್ತು ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ನಾಗ ಶೌರ್ಯ 2011ರಲ್ಲಿ ‘ಕ್ರಿಕೆಟ್ ಗರ್ಲ್ಸ್ ಮತ್ತು ಬಿಯರ್’ ಚಿತ್ರದ ಮೂಲಕ ನಟನಾಗಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದಾರೆ. ಪ್ರವೀಣ್ ಸತ್ತಾರು ನಿರ್ದೇಶನದ ಚಂದಮಾಮ ಕಥೆಗಳು ಚಿತ್ರ ಅವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿತು. ಈ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಕೂಡ ಸಿಕ್ಕಿತ್ತು. ತೆಲುಗು ಚಿತ್ರರಂಗದಲ್ಲಿ ನಾಗ ಶೌರ್ಯ ಅವರು ಸಾಕಷ್ಟು ಜನಪ್ರಿಯತೆ ಗಳಿಸಿದ್ದಾರೆ. 2011ರಿಂದಲೂ ಅವರು ಬಣ್ಣದ ಲೋಕದಲ್ಲಿ ಸಕ್ರಿಯರಾಗಿದ್ದಾರೆ. ನಟನೆ ಮಾತ್ರವಲ್ಲದೇ ಸಿನಿಮಾ ನಿರ್ಮಾಣದಲ್ಲೂ ತೊಡಗಿಕೊಂಡಿದ್ದಾರೆ.
