ವಿಶ್ವದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿಯವರ ಮಗ ಅನಂತ್ ಅಂಬಾನಿಯ ಮದುವೆ ಸಾಕಷ್ಟು ಅದ್ದೂರಿಯಾಗಿ ನಡೆದಿದೆ. ಕೋಟಿ ಕೋಟಿ ಖರ್ಚು ಮಾಡಿ ಅಂಬಾನಿ ಮಗನ ಮದುವೆ ಮಾಡಿದ್ದಾರೆ. ಅನಂತ್ ಹಾಗೂ ರಾಧಿಕಾ ಮದುವೆಗೆ ಸಿನಿಮಾ ರಂಗದ ದಿಗ್ಗಜರು, ಕ್ರಿಕೆಟ್ ತಾರೆಯರು, ರಾಜಕೀಯ ಮುಖಂಡರು ಸೇರಿದಂತೆ ಸಾಕಷ್ಟು ಮಂದಿ ಆಗಮಿಸಿದ್ದರು. ಈ ಮಧ್ಯೆ ಅದ್ದೂರಿ ಮದುವೆಯಲ್ಲಿ ನಟಿಯೊಬ್ಬರ ಮುನಿಸಿಕೊಂಡು ನಿಂತಿರುವ ಫೋಟೋವೊಂದು ಸಖತ್ ವೈರಲ್ ಆಗಿದೆ.
ಬಾಲಿವುಡ್ ಚಿತ್ರರಂಗದ ಮುಂದಿನ ನಾಯಕಿ ಶನಯಾ ಕಪೂರ್ ಅದ್ಯಾರದ್ದೋ ಜೊತೆ ವಾದ ಮಾಡಿಕೊಂಡಿದ್ದಾರೆ. ಮುಖ ಊದಿಸಿಕೊಂಡು ನಿಂತಿದ್ದರು. ಈ ವಿಚಾರ ಈಗ ಜಗಜ್ಜಾಹೀರಾಗಿದೆ. ಶನಾಯಾ ಕಪೂರ್ ವಿಡಿಯೋ ವೈರಲ್ ಆಗಿದೆ.
ಹೀಗೆ ಮುನಿಸಿಕೊಂಡು ನಿಂತಿರುವ ಶನಯಾ ಕಪೂರ್ ಸ್ಟಾರ್ ನಟ ಅನಿಲ್ ಕಪೂರ್ ಸಹೋದರ ಸಂಜಯ್ ಕಪೂರ್ ಅವರ ಮುದ್ದಿನ ಮಗಳು. ಆಲಿಯಾ ಭಟ್.. ಜಾಹ್ನವಿ ಕಪೂರ್.. ಸಾರಾ ಅಲಿ ಖಾನ್.. ರಂತೆಯೇ ತಾನು ಹೀರೋಯಿನ್ ಆಗಲು ಅಣಿಯಾಗುತ್ತಿರುವ ಶನಯಾ, ಕೋಟ್ಯಾಧಿಪತಿಯ ಮದುವೆಯಲ್ಲಿ ತಕರಾರು ತೆಗೆದಿದ್ದಾರೆ. ಶನಯಾ ಅವರ ಈ ಅಸಹನೆ..ಅಸಮಾಧಾನಕ್ಕೆ ನಿಖರವಾದ ಕಾರಣವೇನು ಎನ್ನುವುದು ಗೊತ್ತಿಲ್ಲ. ತನ್ನ ಬ್ಯಾಗ್ನ್ನೂ ಭದ್ರತಾ ಸಿಬ್ಬಂದಿ ಪರಿಶೀಲಿಸಿದ್ದಕ್ಕೆ ಶನಯಾ ಕೋಪ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಅನಂತ್ ಮತ್ತು ರಾಧಿಕಾ ಅವರ ಮದುವೆಯ ಪ್ರಿ ವೆಡ್ಡಿಂಗ್ನಲ್ಲಿಯೂ ಶನಯಾ ಗ್ಲಾಮ್ ದೇಸಿ ಲುಕ್ಗಳು ವೈರಲ್ ಆಗಿತ್ತು. ಇದೀಗ ಶನಯಾ ಟ್ರೋಲ್ಗೆ ಗುರಿಯಾಗಿದ್ದಾರೆ. ʻʻಶನಯಾ ಬ್ಯಾಕ್ ಚೆಕ್ ಮಾಡಿದ್ದಕ್ಕಾಗಿ ಸಿಟ್ಟಾಗಿದ್ದಾರೆʼʼಎಂದು ಅನೇಕ ಕಮೆಂಟ್ ಮಾಡಿದ್ದಾರೆ. ಅಂಬಾನಿ ಮದುವೆಯಲ್ಲಿ ಗುಲಾಬ್ ಜಾಮೂನು ಕದ್ದು, ತನ್ನ ಬ್ಯಾಗ್ನಲ್ಲಿ ಇಟ್ಟುಕೊಂಡಿರಬಹುದು ಎಂದು ಕೆಲವರು ಹೇಳಿದರೆ ಇನ್ನೂ ಕೆಲವರು ಚಮಚ ಕಳ್ಳಿ ಎಂದು ಕಾಲೆಳೆಯುತ್ತಿದ್ದಾರೆ.
ಶನಾಯಾ ಇನ್ನೂ ಯಾವುದೇ ಸಿನಿಮಾ ಮಾಡಿಲ್ಲ. ಕೆಲವರು ಇನ್ನೂ ಸಿನಿಮಾ ಮಾಡದೆಯೇ ಈ ರೀತಿ ದರ್ಪ ತೋರುತ್ತಿದ್ದಾರೆ ಎಂದು ಕಮೆಂಟ್ ಮಾಡುತ್ತಿದ್ದಾರೆ. ಶೀಘ್ರದಲ್ಲೇ ಮೋಹನ್ ಲಾಲ್ ಜೊತೆಗೆ ವೃಷಭದಲ್ಲಿ ತೆರೆಯ ಮೇಲೆ ಮಿಂಚಲಿದ್ದಾರೆ. ಅಷ್ಟೊಂದು ಹಣ ಖರ್ಚು ಮಾಡಿ ಮಾಡಲಾದ ಮದುವೆಯಲ್ಲಿ ಕೆಲವು ನೀತಿ-ನಿಯಮಗಳಿರುತ್ತಾವೆ, ಅದನ್ನು ಅರ್ಥ ಮಾಡಿಕೊಳ್ಳದೇ ಭದ್ರತಾ ಸಿಬ್ಬಂದಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದರೆ ಏನೂ ಪ್ರಯೋಜನ ಎಂದು ಶನಯಾ ಅವರನ್ನು ತರಾಟೆ ತೆಗೆದುಕೊಳ್ಳುತ್ತಿದ್ಧಾರೆ.