ನಟ ಇಶಾನ್ ಜೊತೆ ಸಿನಿಮಾ ಮಾಡಲು ಕ್ಯೂನಲ್ಲಿ ನಿಂತ ಸ್ಟಾರ್ ನಿರ್ದೇಶಕರು

ಚಲನಚಿತ್ರ

ಪವನ್ ಒಡೆಯರ್ ಮತ್ತು ಇಶಾನ್ ಕಾಂಬಿನೇಶನ್ ನಲ್ಲಿ ರೆಡಿಯಾಗಿರೋ ‘ರೆಮೋ’ ಸಿನಿಮಾ ರಿಲೀಸ್ ಗೂ ಮೊದಲು ಸಖತ್ ಸೌಂಡ್ ಮಾಡುತ್ತಿದೆ. ಸೆಟ್ಟೇರಿದ ದಿನದಿಂದಲೂ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿರೋ ರೆಮೋ ಸಿನಿಮಾ ನವೆಂಬರ್ 25ರಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ.

ರೆಮೋ ಸಿನಿಮಾ ಬಿಡುಗಡೆಗೂ ಮುನ್ನವೇ ಚಿತ್ರದ ನಟ ಇಶಾನ್ ಗೆ ಸ್ಟಾರ್ ನಿರ್ದೇಶಕರಿಂದ ಆಫರ್ ಬರ್ತಿದೆಯಂತೆ. ‘ರೆಮೋ’ ಚಿತ್ರದ ಬಳಿಕ ಇಶಾನ್ ಸಿನಿಮಾ ರಂಗದಲ್ಲಿ ಭರವಸೆ ಮೂಡಿಸುವುದು ಕನ್ಪಾರ್ಮ್ ಆಗಿದೆ.

ಇಶಾನ್ ನಟನೆಯ, ‘ರೆಮೋ’ ಚಿತ್ರದ ಹಾಡು, ಟೀಸರ್, ಟ್ರೇಲರ್ ಎಲ್ಲವನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಜೊತೆಗೆ ನಟ ಇಶಾನ್ ನಟನೆ, ಲುಕ್, ಪರ್ಸನಾಲಿಟಿ, ಸ್ಕ್ರೀನ್ ಅಪಿಯರೆನ್ಸ್ ಎಲ್ಲವೂ ಪ್ರೇಕ್ಷಕರ ಜೊತೆಗೆ ಚಂದನವನದ ಸ್ಟಾರ್ ನಿರ್ದೇಶಕರನ್ನೂ ಇಂಪ್ರೆಸ್ ಮಾಡಿದೆ. ಇದ್ರಿಂದಾಗಿ ಇಶಾನ್ ಜೊತೆ ಸಿನಿಮಾ ಮಾಡಲು ಚಂದನವನದ ಖ್ಯಾತ ನಿರ್ದೇಶಕರು ಸರತಿ ಸಾಲಿನಲ್ಲಿ ನಿಂತಿದ್ದಾರೆ.

ನಿರ್ದೇಶಕ ಚೇತನ್ ಕುಮಾರ್ ಈಗಾಗ್ಲೆ ಇಶಾನ್ ಜೊತೆ ಹೊಸ ಸಿನಿಮಾ ಘೋಷಿಸಿದ್ದಾರೆ. ಜೊತೆಗೆ ಭಜರಂಗಿ ಖ್ಯಾತಿಯ ಎ ಹರ್ಷ, ರ್ಯಾಂಬೋ ಖ್ಯಾತಿಯ ಅನಿಲ್ ಹಾಗೂ ಯುವ ರಾಜ್ ಕುಮಾರ್ ಮೊದಲ‌ ಸಿನಿಮಾ ಘೋಷಿಸಿದ್ದ ಪುನೀತ್ ರುದ್ರನಾಗ್ ಇಶಾನ್ ಜೊತೆ ಸಿನಿಮಾ ಮಾಡಲು ರೆಡಿಯಾಗಿದ್ದಾರೆ. ಈ ಬಗ್ಗೆ ನಾಯಕ ಇಶಾನ್ ಜೊತೆ ಒಂದು ಸುತ್ತಿನ ಮಾತುಕತೆಯನ್ನು ನಡೆಸಿದ್ದು, ಇಶಾನ್ ಕಾಲ್ ಶೀಟ್ ಗಾಗಿ ಕಾಯುತ್ತಿದ್ದಾರೆ ಎನ್ನಲಾಗ್ತಿದೆ. ಸದ್ಯ ರೆಮೋ ಪ್ರಚಾರ ಕಾರ್ಯದಲ್ಲಿ ತೊಡಗಿರುವ ಇಶಾನ್ ಸಿನಿಮಾ ಬಿಡುಗಡೆಯ ನಂತರ ಹೊಸ ಸಿನಿಮಾಗಳ ಬಗ್ಗೆ ಅಪ್ಡೇಟ್ ನೀಡಲಿದ್ದಾರೆ.