ಕಿರಿಕ್ ಪಾರ್ಟಿ ಚಿತ್ರದ ಮೂಲಕ ಸಿನಿ ಜರ್ನಿ ಆರಂಭಿಸಿದ ನಟಿ ರಶ್ಮಿಕಾ ಮಂದಣ್ಣ ಸದ್ಯ ದಕ್ಷಿಣ ಭಾರತದ ಸ್ಟಾರ್ ನಟಿಯಾಗಿ ಮಿಂಚುತ್ತಿದ್ದಾರೆ. ಬಾಲಿವುಡ್ ನಲ್ಲೂ ಮಿಂಚು ಹರಿಸುತ್ತಿರೋ ಈಕೆ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸ್ಟಾರ್ ನಟರು ಕೂಡ ಈಕೆಯೇ ತಮ್ಮ ಸಿನಿಮಾದ ನಾಯಕಿಯಾಗ್ಬೇಕು ಎಂದು ದುಂಬಾಲು ಬಿದ್ದಿದ್ದಾರೆ. ಈ ಮಧ್ಯೆ ಸ್ಟಾರ್ ನಟರೊಬ್ಬರು ರಶ್ಮಿಕಾಗಾಗಿ 25 ಕೆಜಿ ತೂಕ ಹೆಚ್ಚಿಸಿಕೊಳ್ಳಲು ಮುಂದಾಗಿದ್ದಾರೆ.
ಯೆಸ್. ರಶ್ಮಿಕಾಗಾಗಿ 25 ಕೆಜಿ ತೂಕ ಹೆಚ್ಚಿಸಿಕೊಳ್ಳಲು ನಟ ವಿಕ್ಕಿ ಕೌಶಲ್ ಮುಂದಾಗಿದ್ದಾರೆ. ವಿಕ್ಕಿ ಕೌಶಲ್ ಚಿತ್ರರಂಗಕ್ಕೆ ಬಂದು ಹಲವು ವರ್ಷಗಳು ಕಳೆದಿವೆ. ಈ ವೇಳೆ ಹಲವು ರೀತಿಯ ಪಾತ್ರಗಳನ್ನು ಮಾಡಿ ಸೈ ಎನಿಸಿಕೊಂಡಿರುವ ವಿಕ್ಕಿ ಕೌಶಲ್ ರಶ್ಮಿಕಾ ಮಂದಣ್ಣ ಜೊತೆ ನಟಿಸಲು 25 ಕೆಜಿ ತೂಕ ಹೆಚ್ಚಿಸಿಕೊಳ್ಳಲು ಮುಂದಾಗಿದ್ದಾರೆ.
ವಿಕ್ಕಿ ಕೌಶಲ್ ಒಂದೇ ರೀತಿಯ ಪಾತ್ರಗಳಿಗೆ ಕಟ್ಟು ಬಿದ್ದವರಲ್ಲ. ಪೋಷಕ ಪಾತ್ರವಾಗಲೀ, ಹೀರೋ ಆಗಿ ಮಿಂಚೋದಾಗಿರಲಿ, ವಿಕ್ಕಿ ಕೌಶಲ್ ನಟಿಸಿ ಪಾತ್ರಗಳಿಗೆ ನ್ಯಾಯ ಒದಗಿಸುತ್ತಾರೆ. ಈಗ ಅವರು ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ವಿಕ್ಕಿ ಕೌಶಲ್ ಅವರು ಛತ್ರಪತಿ ಶಿವಾಜಿ ಮಗ ಛತ್ರಪತಿ ಸಾಂಬಾಜಿ ಮಹರಾಜ್ ಪಾತ್ರ ಮಾಡುತ್ತಿದ್ದಾರೆ. ಈ ಪಾತ್ರಕ್ಕಾಗಿ ಅವರು ಇನ್ನೂ ದಪ್ಪ ಆಗಬೇಕಿದೆ. ಈ ಕಾರಣಕ್ಕೆ 25 ಕೆಜಿ ತೂಕ ಹೆಚ್ಚಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ.
5-10 ಕೆಜಿ ದೇಹದ ತೂಕ ಹೆಚ್ಚಿಸಿಕೊಳ್ಳುವುದು ದೊಡ್ಡ ವಿಚಾರ ಅಲ್ಲ. ಆದರೆ, ಒಮ್ಮೆಲೆ 25 ಕೆಜಿ ಹೆಚ್ಚಿಸಿಕೊಳ್ಳಬೇಕು ಎಂದರೆ ಅದು ಸುಲಭದ ವಿಚಾರ ಅಲ್ಲವೇ ಅಲ್ಲ. ಒಂದೊಮ್ಮೆ ವಿಕ್ಕಿ ಕೌಶಲ್ ಅವರು 25 ಕೆಜಿ ತೂಕ ಹೆಚ್ಚಿಸಿಕೊಂಡಿದ್ದು ಹೌದಾದಲ್ಲಿ ಅವರು ಮತ್ತಷ್ಟು ದಪ್ಪವಾಗಿ ಕಾಣಲಿದ್ದಾರೆ. ಅವರನ್ನು ಹಿಂದೆಂದೂ ನೋಡಿರದ ರೀತಿಯಲ್ಲಿ ಕಾಣಿಸಿಕೊಳ್ಳಲಿದ್ದು ವಿಕ್ಕಿ ಹಾಗೂ ರಶ್ಮಿಕಾ ಮಂದಣ್ಣ ಜೋಡಿಯನ್ನು ತೆರೆ ಮೇಲೆ ನೋಡಲು ಅಭಿಮಾನಿಗಳು ಕಾಯ್ತಿದ್ದಾರೆ.