ರಾಜ್ಯ ಕಾಂಗ್ರೆಸ್ ಸರ್ಕಾರ ಪಾಪರ್ ಆಗಿದೆ ಎಂದು ಮಾಜಿ ಡಿಸಿಎಂ ಹಾಗೂ ಶಾಸಕ ಡಾ.ಸಿ.ಎನ್. ಅಶ್ವತ್ಥ ನಾರಾಯಣ್ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಅಪಕೀರ್ತಿಯ ಮಾಡೆಲ್ ಕರ್ನಾಟಕ ಮಾಡೆಲ್ ಆಗಿದೆ. ಅಭಿವೃದ್ಧಿ, ಆಡಳಿತದಲ್ಲಿ ಸರ್ಕಾರ ವಿಫಲವಾಗಿದೆ ಎಂದು ಕುಟುಕಿದ್ದಾರೆ.
ರಾಜ್ಯಪಾಲರು ಭಾಷಣದಲ್ಲಿ ಕರ್ನಾಟಕ ಮಾಡೆಲ್ ಜನಪ್ರಿಯವಾಗಿದೆ ಎಂದು ಉಲ್ಲೇಖಿಸಿದ್ದಾರೆ. ದೇಶದಲ್ಲೇ ಅಳವಡಿಸಿಕೊಳ್ಳಲಾಗ್ತಿದೆ ಎಂದು ಹೇಳಿದ್ದಾರೆ. ಸರ್ಕಾರದಲ್ಲಿ ಅವ್ಯವಸ್ಥೆ, ಭ್ರಷ್ಟಾಚಾರ ಆಡಳಿತ, ಬರದ ನಿರ್ವಹಣೆ ವಿಫಲ, ಫೈಲ್ಗಳ ವಿಲೇವಾರಿ ಆಗ್ತಿಲ್ಲ. ಗ್ಯಾರಂಟಿಗಳ ಅನುಷ್ಠಾನ ಅವರು ಹೇಳಿದ ಮಟ್ಟಕ್ಕೆ ಅನುಷ್ಠಾನ ಆಗಿಲ್ಲ ಎಂದು ಟೀಕಿಸಿದ್ದಾರೆ.
ಶಕ್ತಿ ಯೋಜನೆಯಿಂದ ವಿದ್ಯಾರ್ಥಿಗಳಿಗೆ ತೊಂದರೆ ಆಗಿದೆ. ಬಸ್ಗಳ ಸಂಖ್ಯೆ ಕಡಿಮೆ ಆಗಿದೆ. NDRF ಗೈಡ್ ಲೈನ್ಸ್ ನಲ್ಲಿ ರಾಜ್ಯಕ್ಕೆ ಸಿಗಬೇಕಾದ ಹಣ ಸಿಗುತ್ತದೆ. ಇವರು ಎಷ್ಟು ಹಣ ಬಿಡುಗಡೆ ಮಾಡಿದ್ದಾರೆ..? ಎಷ್ಟು ಹಣ ಖರ್ಚು ಮಾಡಿದ್ದಾರೆ..? ಕೇಂದ್ರದಿಂದ ರಾಜ್ಯಕ್ಕೆ NDRF ಹಣ ಸಿಗುತ್ತದೆ. ಸರ್ಕಾರ ಪಾಪರ್ ಆಗಿದೆ. ರೈತರಿಗೆ ಹಣ ಬಿಡುಗಡೆ ಆಗಿಲ್ಲ. ಹಣಕಾಸಿನ ಬಗ್ಗೆ ಶ್ವೇತಪತ್ರ ಬಿಡುಗಡೆ ಮಾಡಲಿ. ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಅಶ್ವತ್ಥ ನಾರಾಯಣ್ ಹರಿಹಾಯ್ದಿದ್ದಾರೆ.