ಆದಾಯ ಹೆಚ್ಚಿಸಿಕೊಳ್ಳಲು ಜಾಹೀರಾತು ನಿಯಮ ತಿದ್ದುಪಡಿಗೆ ಬಿಬಿಎಂಪಿ ಮುಂದಾಗಿದೆ.
ಅನಧಿಕೃತ ಜಾಹೀರಾತಿಗೆ ಕಡಿವಾಣ ಹಾಕಲು, ಗ್ಯಾರಂಟಿ ಯೋಜನೆಗೆ ಹಣ ಸರಿದೂಗಿಸಲು ಹಾಗೂ ಸರ್ಕಾರದ ಖಜಾನೆ ಭರ್ತಿ ಮಾಡಲು ಜಾಹೀರಾತು ನಿಯಮ ತಿದ್ದುಪಡಿ ಮಾಡಿ ಹೊಸ ಜಾಹೀರಾತು ನಿಯಮ ಜಾರಿಗೆ ತರುವುದಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ.
ಶುಕ್ರವಾರ ರಂದು ಪಾಲಿಕೆಯ ಕೇಂದ್ರ ಕಚೇರಿಯಲ್ಲಿ ಪಾಲಿಕೆ ಹಿರಿಯ ಅಧಿಕಾರಿಗಳು ಹಾಗೂ ಸರ್ಕಾರದ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆದಿದ್ದು, ಅಂದುಕೊಂಡಂತೆ ಎಲ್ಲವೂ ನಡೆದರೆ ಕೆಲವೆ ದಿನಗಳಲ್ಲಿ ಹೊಸ ಜಾಹಿರಾತು ನಿಯಮ ಜಾರಿಗೆ ಬರಲಿದೆ.
ಮಾಡುತ್ತಿರುವ ಜಾಹೀರಾತು ಪ್ರದರ್ಶನವನ್ನು ಹೈಕೋರ್ಟ ನಿಷೇಧಿಸಲಾಗಿದೆ. ಆದರೂ ಕೂಡ ಬಿಬಿಎಂಪಿ ವ್ಯಾಪ್ತಿಯಲ್ಲಿ ಆಯ್ದ ಭಾಗಗಳಲ್ಲಿ ಜಾಹೀರಾತು ಪ್ರದರ್ಶನಕ್ಕೆ ಅನುಮತಿ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ ಅಂತ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿಳಿಸಿದರು. ಸಾರ್ವಜನಿಕ ಸ್ಥಳದಲ್ಲಿ ಜಾಹೀರಾತು ಪ್ರದರ್ಶನಕ್ಕೆ ಖಾಸಗಿಯವರಿಗೆ ಅನುಮತಿಸುವುದರಿಂದ ಬಿಬಿಎಂಪಿಯ ಆದಾಯ ವೃದ್ಧಿಯಾಗಲಿದೆ.
ಬಿಬಿಎಂಪಿ ಜಾಹೀರಾತು ನಿಯಮ 2019 ಜಾರಿಯಾದರೆ ಬಿಬಿಎಂಪಿಗೆ 1000 ಕೋಟಿ ರೂ. ಆದಾಯ ಬರುವ ನಿರೀಕ್ಷೆ ಹೊಂದಲಾಗಿದೆ. ಹೊಸ ಜಾಹೀರಾತು ಕಾಯ್ದೆಯಲ್ಲಿ ಕೆಲ ಮಾನದಂಡಗಳು ಇದ್ದು 60 ಅಡಿ ರಸ್ತೆಗಳು ಹಾಗೂ ಕಮರ್ಷಿಯಲ್ ಜಾಗಗಳಲ್ಲಿ ಕೆಲವೆಡೆಗೆ ಜಾಹಿರಾತುಗೆ ಅವಕಾಶ ನೀಡಲಾಗುವುದು. ಹಳೆಯ ಬಾಕಿ ಇಟ್ಟುಕೊಂಡವರು ಆ ಹಣ ಕಟ್ಟಿದ ಮೇಲೆಯೇ ಟೆಂಡರ್ನಲ್ಲಿ ಅವಕಾಶ ನೀಡಲಾಗುವುದು. ಇಲ್ಲದಿದ್ದರೆ ಅಂತಹವರಿಗೆ ಟೆಂಡರ್ನಲ್ಲಿ ಅವಕಾಶ ಇಲ್ಲ. ಮೆಟ್ರೋ ಹೊರಗೆ ಬಿಬಿಎಂಪಿ ಮತ್ತು ನಮ್ಮ ಮೆಟ್ರೋ ಸಹಭಾಗಿತ್ವದಲ್ಲಿ ಜಾಹೀರಾತು ಅಳವಡಿಕೆಗೆ ಪ್ರತ್ಯೇಕ ಪ್ಯಾಕೇಜ್ ಎಂದು ಹೇಳಿದರು.