ಬೆಂಗಳೂರು: ಬಿಜೆಪಿಯ ಬಂಡಾಯ ಶಮನಕ್ಕೆ ರಾಜ್ಯಾಧ್ಯಕ್ಷ ವಿಜಯೇಂದ್ರ ಸರ್ಕಸ್ ಮೇಲೆ ಸರ್ಕಸ್ ಮಾಡ್ತಿದ್ದಾರೆ. ಪಕ್ಷದ ವಿರುದ್ದ ಮುನಿಸಿಕೊಂಡಿದ್ದ ಮಾಜಿ ಸಚಿವ MTB ನಾಗರಾಜ್ ಮನೆಗೆ ತೆರಳಿ ಅಸಮಾಧಾನ ಶಮನ ಮಾಡುವಲ್ಲಿ ಯಶಸ್ವಿಯಾಗಿದ್ರೆ ಇತ್ತ ಸೋಮಣ್ಣ, ಸಿಟಿ ರವಿ ದೊಡ್ಡಗೌಡ್ರನ್ನ ಭೇಟಿಯಾಗಿರೋದು ಊಹಾಪೋಹಗಳಿಗೆ ವೇದಿಕೆಯಾಗಿದೆ. ರೆಬಲ್ ಯತ್ನಾಳ್, ಲಿಂಬಾಳಿ ವಿಚಾರಕ್ಕೆ ಮರಿಹುಲಿ ತಲೆನೇ ಹಾಕದಿರೋದು ಲೋಕಸಭಾ ಬಂಡಾಯಕ್ಕೆ ಪುಷ್ಠಿ ಕೊಡುವಂತಿದೆ..
2023 ರ ವಿಧಾನಸಭಾ ಚುನಾವಣೆಗೂ ಮುನ್ನ ಶುರುವಾದ ರಾಜ್ಯ ಬಿಜೆಪಿಯ ಬಂಡಾಯದ ಬಾವುಟ ಲೋಕಸಭಾ ಚುನಾವಣೆ ಹತ್ತಿರ ಬರ್ತಿದ್ರು ಇನ್ನು ಶಮನವಾಗ್ತಿಲ್ಲ. ಅದ್ರಲ್ಲೂ ಯಡಿಯೂರಪ್ಪ ಪುತ್ರ ಬಿವೈ ವಿಜಯೇಂದ್ರ ರಾಜ್ಯಾಧ್ಯಕ್ಷ ರಾದ್ಮೇಲಂತು ಬಂಡಾಯದ ಭಾವುಟ ದೊಡ್ಡಮಟ್ಟದಲ್ಲಿ ಹಾರಾಡ್ತು. ಅದನ್ನ ಶಮನ ಮಾಡಲು ಮರಿಹುಲಿ ಸರ್ಕಸ್ ಮೇಲೆ ಸರ್ಕಸ್ ಮಾಡ್ತಿದ್ದಾರೆ ಕಳೆದ ಕೆಲವು ದಿನಗಳಿಂದ ಅಸಮಾಧಾನಿತರ ಮನೆಗೆ ಹೋಗ್ತಿರುವ ವಿಜಯೇಂದ್ರ ಇಂದು ಪಕ್ಷದ ವಿರುದ್ಧ ಮುನಿಸಿಕೊಂಡಿದ್ದ ಮಾಜಿ ಸಚಿವ MTB ನಾಗರಾಜ್ ಮನೆಗೆ ತೆರಳಿ ಮನವೊಲಿಸುವ ಕೆಲಸ ಮಾಡಿದ್ದಾರೆ….
ಮಾಜಿ ಸಚಿವ MTB ನಾಗರಾಜ್ ಮನೆಗೆ ತೆರಳಿದ ವಿಜಯೇಂದ್ರ ಸುಮಾರು 1 ಗಂಟೆಗಳ ಕಾಲ ಮಾತುಕತೆ ನಡೆಸಿದ್ರು. ಭೇಟಿ ಬಳಿಕ ಮಾತನಾಡಿದ ವಿಜಯೇಂದ್ರ ಎಂಟಿಬಿ ನಾಗರಾಜ್ ವ್ಯಕ್ತಿಯಲ್ಲ ಶಕ್ತಿ. ಎಂ.ಟಿಬಿ ನಾಗರಾಜ್ ಅವರು ನಿಮ್ಮೊಟ್ಟಿಗೆ ನಿಲ್ಲುತ್ತೇವೆ ಎಂದು ಭರವಸೆ ನೀಡಿದ್ದಾರೆ , ಅವರನ್ನು ಭೇಟಿ ಮಾಡಿ ತುಂಬಾ ಸಂತೋಷ ಆಗಿದೆ. ಅವರ ಮಾರ್ಗದರ್ಶನವನ್ನು ಪಕ್ಷ ತೆಗೆದುಕೊಳ್ಳುತ್ತದೆ ಚಿಕ್ಕಬಳ್ಳಾಪುರ ಕ್ಷೇತ್ರ ಗೆಲ್ಲಲು
ತಯಾರಿ ಮಾಡಿಕೊಂಡಿದ್ದೇವೆ ಎಂದ್ರು…
ವಿಜಯೇಂದ್ರ ಭೇಟಿ ಬಳಿಕ ಮಾತನಾಡಿದ MTB ನಾಗರಾಜ್ ಲೋಕಸಭಾ ಚುನಾವಣೆಗೆ ಹೆಚ್ಚಿನ ಅಭ್ಯರ್ಥಿಗಳನ್ನ ಗೆಲ್ಲಿಸಿಕೊಳ್ಳುವ ನಿಟ್ಟಿನಲ್ಲಿ ಸಂಕಲ್ಪ ಮಾಡಿದ್ದಾರೆ ವಿಜಯೇಂದ್ರ. ಅದರ ಭಾಗವಾಗಿ ಸೌಹಾರ್ದಯುತವಾಗಿ ಭೇಟಿಯಾಗಿದ್ದಾರೆ ನಾನು ಕೂಡ ಅವರಿಗೆ ಆಶಿರ್ವಾದ ಮಾಡಿದ್ದೇನೆ, ಮುಂದಿನ ಪಾರ್ಲಿಮೆಂಟ್ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬರಲಿ. ಜವಬ್ದಾರಿ ಬಗ್ಗೆ ಚರ್ಚೆ ಮಾಡಿದ್ದೇವೆ ತಾವು ಚಿಕ್ಕಬಳ್ಳಾಪುರ ಕ್ಷೆತ್ರದಿಂದ ಸ್ಪರ್ಧೆ ಮಾಡಬೇಕು ಅಂತ ತೀರ್ಮಾನ ಮಾಡಿದ್ರೆ ನಾನು ಸಿದ್ಧ ಎಂದು ತಿಳಿಸಿದ್ರು MTB….
ಸದ್ಯ ವಿಜಯೇಂದ್ರ ಮುಂದೆ ಸಾಲು ಸಾಲು ಸವಾಲುಗಳಿವೆ ಪಕ್ಷದ ವಿರುದ್ಧ ಮುನಿಸಿಕೊಂಡಿರುವ ರೆಬಲ್ ಶಾಸಕರಾದ ವಿ.ಸೋಮಣ್ಣ, ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಲಿಂಬಾವಳಿ ಅವರನ್ನು ಮನವೊಲಿಸೋದೇ ದೊಡ್ಡ ಸಾಹಸವಾಗಿದೆ. ವಿಜಯೇಂದ್ರ ಅವರನ್ನ ಪರೋಕ್ಷವಾಗಿ ಟೀಕಿಸುತ್ತಾ ಬಂದಿರುವ ರಬಲ್ ಗಳ ಮನೆಗೆ ಹೋಗುವ ಮನಸ್ಸೇ ಮಾಡ್ತಿಲ್ಲ ವಿಜಯೇಂದ್ರ. ಆ ನಾಯಕರು ಸಹ ವಿಜಯೇಂದ್ರ ಬಗ್ಗೆ ತಲೆಯನ್ನು ಕೆಡಿಸಿಕೊಳ್ತಿಲ್ಲ. ಇನ್ನು ಸೋಮಣ್ಣ ವಿಚಾರವಾಗಿ ಮಾತನಾಡಿದ ವಿಜಯೇಂದ್ರ
ಪಕ್ಷದಲ್ಲಿ ಸಂಪೂರ್ಣವಾಗಿ ಎಲ್ಲವೂ ಸರಿ ಹೋಗಿದೆ ಎಂದು ಹೇಳಲ್ಲ, ಸಾಕಷ್ಟು ಬದಲಾವಣೆ ಆಗಲಿದೆ ಸೋಮಣ್ಣ ಹಿರಿಯರಿದ್ದಾರೆ ಪಕ್ಷದ ಬೆಳವಣಿಗೆಗೆ ಅವರ ಕೊಡುಗೆ ಕೂಡ ಸಾಕಷ್ಟಿದೆ. 45 ವರ್ಷಗಳ ಸುದೀರ್ಘ ಅನುಭವ ಇರುವಂತ ರಾಜಕಾರಣಿ ಅವ್ರು. ಎರಡು ಕಡೆ ಸ್ಪರ್ಧಿಸಿ ಗೆಲವು ಸಾಧಿಸುತ್ತೇನೆಂಬ ವಿಶ್ವಾಸ ಇದ್ದಂತವರಿಗೆ ಎರಡುಕಡೆ ಸೋಲಾದ್ರೆ ನೋವಾಗುವುದು ಸಾಮಾನ್ಯ. ಸೋಲಿಗೆ ಬೇರೆ ಕಾರಣ ಇರಬಹುದು ಇಬ್ಬರು ಕುಳಿತು ಮಾತನಾಡುತ್ತೇವೆ ಅಂತ ಸೊಮಣ್ಣ ಪರವಾಗಿ ಬ್ಯಾಟ್ ಬೀಸಿದ್ದಾರೆ ವಿಜಯೇಂದ್ರ…
ಈ ಮಧ್ಯೆ ದೊಡ್ಡಗೌಡ್ರನ್ನ ಸೋಮಣ್ಣ ಭೇಟಿಯಾದ್ರೆ, ಕುಮಾರಸ್ವಾಮಿ ಯನ್ನ ಸಿಟಿ ರವಿ ಭೇಟಿಯಾಗಿರೋದು ವಿಜಯೇಂದ್ರ ಗೆ ಮತ್ತಷ್ಟು ಟೆನ್ಷನ್ ತಂದೊಡ್ಡಿದೆ. ತುಮಕೂರು ಕ್ಷೇತ್ರದ ಮೇಲೆ ಕಣ್ಣಿಟ್ಟಿರುವ ಸೋಮಣ್ಣ ಟಿಕೆಟ್ ಕೈತಪ್ಪಿದ್ರೆ ಕಾಂಗ್ರೆಸ್ ಗೆ ಹಾರೋದಂತೂ ಪಕ್ಕಾ, ಲೋಕಸಮರದ ವೇಳೆಗೆ ಎಲ್ಲಾಬಂಡಾಯ ಶಮನವಾಗದಿದ್ರೆ ವಿಧಾನಸಭೆಯಲ್ಲಿ ಆದ ಸ್ಥಿತಿಯೇ ರಿಪೀಟ್ ಎನ್ನುತ್ತಿವೆ ರಾಜಕೀಯ ಲೆಕ್ಕಾಚಾರಗಳು…..