ಬೆಂಗಳೂರು: ಇಂದು ದೇಶಾದ್ಯಂತ 78 ನೇ ಸ್ವಾತಂತ್ರತ್ಸೋವದ ಸಂಭ್ರಮದ ಸಡಗರ ಹಾಗೆ ರಾಜ್ಯಾದ್ಯಂತ ಸ್ವಾತಂತ್ರತ್ಸೋವ ಆಚರಣೆ ಮಾಡಲಿದ್ದು ರಾಜ್ಯ ಸರ್ಕಾರದಿಂದ ರಾಜ್ಯಮಟ್ಟದ ಆಚರಣೆಗೆ ಸಿದ್ಧತೆ ನಡೆಸಲಾಗಿದ್ದು ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಸಕಲ ಸಿದ್ಧತೆ ನಡೆದಿದ್ದು ಸಿಎಂ ಸಿದ್ದರಾಮಯ್ಯ ಅವರು ಬೆಳಿಗ್ಗೆ 9 ಗಂಟೆಗೆ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಲಿದ್ದಾರೆ.
ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಕೆ.ಎಸ್.ಆರ್.ಪಿ, ಸಿ.ಆರ್.ಪಿ.ಎಫ್, ಬಿ.ಎಸ್.ಎಫ್, ಸಿ.ಎ.ಆರ್, ಗೋವಾ ಪೊಲೀಸ್, ಕೆ.ಎಸ್.ಐ.ಎಸ್.ಎಫ್, ಟ್ರಾಫಿಕ್ ಪೊಲೀಸ್, ಮಹಿಳಾ ಪೊಲೀಸ್, ಹೋಂ ಗಾರ್ಡ್ಸ್, ಟ್ರಾಪಿಕ್ ವಾರ್ಡನ್, ಅಗ್ನಿ ಶಾಮಕ ದಳದ ಸಿಬ್ಬಂದಿ,ಡಾಗ್ ಸ್ಕ್ವಾಡ್ ಬ್ಯಾಂಡ್ ಸೇರಿದಂತೆ 35 ತುಕುಡಿಗಳಲ್ಲಿ ಸುಮಾರು 1,150 ಮಂದಿ ಭಾಗಿ
ಮೈದಾನದ ಸುತ್ತ ಭದ್ರತೆಗಾಗಿ 10 ಡಿಸಿಪಿ, 09 ಎಸಿಪಿ, 112 ಪಿಎಸ್ಐ 510 ಮಹಿಳಾ ಸಿಬ್ಬಂದಿಯನ್ನು ನಿಯೋಜಿಸಿದ್ದು, 100 ಸಿಸಿ ಕ್ಯಾಮೆರಾಗಳ ವ್ಯವಸ್ಥೆ ಹಾಗೂ ಎರಡು ಬ್ಯಾಗೇಜ್ ಸ್ಕ್ಯಾನರ್ ಅಳವಡಿಸಲಾಗಿದೆ. 2 ಅಗ್ನಿ ಶಾಮಕ ವಾಹನ, ಎರಡು ಅಂಬುಲೈನ್ಸ್, 1 ಕ್ಷಿಪ್ರ ಕಾರ್ಯಾಚರಣೆ ಪಡೆ ಹಾಗೂ ಸ್ವಾನ ದಳಗಳನ್ನು ನಿಯೋಜನೆ ಮೈದಾನದ ಸುತ್ತ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಿದ ಪೊಲೀಸ್ ಇಲಾಖೆ