ಮಳೆಗಾಲ ಬಂತೆಂದರೆ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತದೆ. ಸೊಳ್ಳೆಯ ಕಡಿತದಿಂದ ಡೆಂಗ್ಯೂ ಜ್ವರ ಕಾಣಿಸಿಕೊಳ್ಳುತ್ತದೆ. ಮತ್ತೊಂದೆಡೆ ಡೆಂಗ್ಯೂ ಜ್ವರದ 3 ದಿನಗಳಿಂದ 14 ದಿನಗಳ ವರೆಗೆ ಇರುತ್ತದೆ.
ಈ ಕಾರಣದಿಂದಾಗಿ ರೋಗಿಗಳಲ್ಲಿ ತೀವ್ರಜ್ವರ, ತಲೆನೋವು, ಸ್ನಾಯುಗಳ ನೋವು ಈ ರೀತಿಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
ವೈದ್ಯಕೀಯ ಚಿಕಿತ್ಸೆಯ ಜೊತೆಗೆ ಡೆಂಗ್ಯೂ ಜ್ವರ ಶೀಘ್ರದಲ್ಲಿ ಗುಣಮುಖವಾಗಬೇಕೆಂದರೆ ನೀವು ಈ ಕೆಲವೊಂದು ಆಹಾರಗಳನ್ನು ಸೇವಿಸುವುದನ್ನು ತಪ್ಪಿಸಬೇಕು. ಈ ಮೂಲಕ ಜ್ವರದಿಂದ ವೇಗವಾಗಿ ಗುಣಮುಖವಾಗಬಹುದು.
ಮಸಾಲೆಯುಕ್ತ ಆಹಾರಗಳು
ಡೆಂಗ್ಯೂ ರೋಗಿಗಳು ಮಸಾಲೆಯುಕ್ತ ಆಹಾರದಿಂದ ದೂರವಿರಬೇಕು. ಈ ಆಹಾರಗಳು ಡೆಂಗ್ಯೂ ರೋಗಿಗೆ ಸಮಸ್ಯೆ ತಂದೊಡ್ಡಬಹುದು. ಹೇಗೆಂದರೆ ಮಸಾಲೆಯುಕ್ತ ಆಹಾರ ಸೇವನೆಯಿಂದ ವ್ಯಕ್ತಿಯ ಹೊಟ್ಟೆಯಲ್ಲಿ ಅಸಿಡಿಟಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
ಕಾಫಿ
ಈ ಸಮಯದಲ್ಲಿ ದೇಹದಲ್ಲಿ ಜಲಸಂಚಯನವನ್ನು ಹೆಚ್ಚಿಸಲು ಆರೋಗ್ಯಕರ ಪಾನೀಯ ಮತ್ತು ಹಣ್ಣಿನ ರಸಗಳನ್ನು ಸೇವಿಸಿ ಮತ್ತು ಕೆಫಿನ್ ಪಾನೀಯಗಳಿಂದ ದೂರವಿರಿ ಏಕೆಂದರೆ ಅವು ಹೃದಯ ಬಡಿತ, ಆಯಾಸ ಮತ್ತು ಸ್ನಾಯು ನೋವಿನ ಸಮಸ್ಯೆಯನ್ನು ಹೆಚ್ಚಿಸಬಹುದು.
ಮಾಂಸಾಹಾರಿ ಆಹಾರ
ಡೆಂಗ್ಯೂ ರೋಗಿಗಳು ಸಹ ಮಾಂಸಹಾರವನ್ನು ಸೇವಿಸಬಾರದು ಏಕೆಂದರೆ ಈ ಆಹಾರಗಳು ಬಹಳಷ್ಟು ಮಸಾಲೆಗಳನ್ನು ಹೊಂದಿರುತ್ತದೆ ಮತ್ತು ಇದು ಸುಲಭವಾಗಿ ಜೀರ್ಣವಾಗುವುದಿಲ್ಲ. ಅಲ್ಲದೆ ಮಾಂಸಹಾರ ಸೇವನೆಯಿಂದ ಜ್ವರ ಮತ್ತಷ್ಟು ಉಲ್ಬಣಗೊಳ್ಳುವ ಸಾಧ್ಯತೆಯಿದೆ.
ಎಣ್ಣೆಯುಕ್ತ ಆಹಾರಗಳು
ಎಣ್ಣೆಯುಕ್ತ ಆಹಾರವನ್ನು ತ್ಯಜಿಸಿ ಆರೋಗ್ಯಕರ ಆಹಾರವನ್ನು ಸೇವಿಸುವುದು ಉತ್ತಮ. ಎಣ್ಣೆಯುಕ್ತ ಆಹಾರಗಳು ಹೆಚ್ಚಿನ ಕೊಬ್ಬನ್ನು ಹೊಂದಿರುತ್ತವೆ, ಇದು ಅಧಿಕ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಉಂಟಾಗಲು ಕಾರಣವಾಗಬಹುದು.
ಕಡ್ಡಾಯವಾಗಿ ಸೇವನೆ ಮಾಡಬೇಕಾದ ಆಹಾರಗಳು
ಎಳನೀರು
ಡೆಂಗ್ಯೂ ಜ್ವರದ ಸಮಯದಲ್ಲಿ ಎಳನೀರು ಕುಡಿಯುವುದು ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಎಳನೀರು ಅಗತ್ಯ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ಇದು ದೇಹದಲ್ಲಿ ನೀರಿನಾಂಶದ ಕೊರತೆಯನ್ನು ನೀಗಿಸುವುದರ ಜೊತೆಗೆ ಅಗತ್ಯ ಪೋಷಕಾಂಶಗಳನ್ನು ಸಹ ಒದಗಿಸುತ್ತದೆ.
ಪಪ್ಪಾಯಿ ಎಲೆ ರಸ
ಪಪ್ಪಾಯಿ ಎಲೆಗಳಲ್ಲಿ ಪಾಪೈನ್ ಮತ್ತು ಚೈಮೊಪಪೈನ್ ನಂತಹ ಕಿಣ್ವಗಳು ಕಂಡುಬರುತ್ತವೆ. ಅವುಗಳು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಹೊಟ್ಟೆಯುಬ್ಬರ ಸಮಸ್ಯೆಯನ್ನು ಸಹ ತಡೆಯುತ್ತದೆ. ಇದಲ್ಲದೆ ಅವುಗಳು ಪ್ಲೇಪ್ಲೆಟ್ ಸಂಖ್ಯೆಯನ್ನು ತ್ವರಿತವಾಗಿ ಹೆಚ್ಚಿಸುತ್ತದೆ.
ಕಿವಿ ಹಣ್ಣು
ಕಿವಿಯಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಎ, ಇ ಜೊತೆಗೆ ಪೊಟ್ಯಾಸಿಯಂ ಸಮೃದ್ಧವಾಗಿದೆ. ಇದು ಅಧಿಕ ರಕ್ತದೊತ್ತಡ ಮತ್ತು ನಿಯಂತ್ರಿಸುತ್ತದೆ. ಆರೋಗ್ಯಕರ ಕಂಪು ರಕ್ತಕಣಗಳ ಉತ್ಪತ್ತಿಗೆ ಸಹಾಯಕವಾಗಿದೆ.