ಇಂದು ಝೇವಿಯರ್ ಶಾಲೆ ಮಾನ್ವಿಯಲ್ಲಿ ನಡೆದ ಪೂರ್ವ ಪ್ರಾಥಮಿಕ ತರಗತಿಯ ಯು.ಕೆ.ಜಿ ಮಕ್ಕಳ ಕಲಿಕಾ ವರ್ಷದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅಂಬೇಡ್ಕರ್ ನಗರ ಸರ್ಕಾರಿ ಶಾಲಾ ಶಿಕ್ಷಕರಾದ ಶ್ರೀ ಮತಿ ಬೇಬಿ ಸುನೀತಾ ಕುರ್ಡಿಯವರು ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ನೆರೆದ ಪಾಲಕರನ್ನು ಉದ್ದೇಶಿಸಿ ಮಾತನಾಡುತ್ತಾ ಮಗುವಿನ ಪೂರ್ವ ಪ್ರಾಥಮಿಕ ಹಂತದಿಂದಲೇ ಅವರಲ್ಲಿ ಕಲಿವಿನ ಸಂವೇದನೆಗಳನ್ನು ಉದ್ದೀಪನ ಗೊಳಿಸಿದಾಗ ಮುಂದಿನ ಉತ್ತಮ ಗುಣಮಟ್ಟದ ಕಲಿಕೆಯ ಆಶಯ ನೆರೆವೇರುತ್ತದೆ.
ಈ ನಿಟ್ಟಿನಲ್ಲಿ ಝೇವಿಯರ್ ಶಾಲೆಯ ಕಾರ್ಯ ಶ್ಲಾಘನಾರ್ಹ, ಶೈಕ್ಷಣಿಕವಾಗಿ ಹಿಂದುಳಿದ ಈ ಭಾಗದಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ಬಳಸಿ ವಿದ್ಯಾರ್ಥಿಗಳನ್ನು ತರಬೇತುಗೊಳಿಸುತ್ತಿರುವುದು ಅಭಿನಂದನಾರ್ಹ ಎಂದು ಆಶಿಸಿದರು.
ಇದೇ ವೇಳೆ ಝೇವಿಯರ್ ಶಾಲೆಯ ಪ್ರಾಚಾರ್ಯರಾದ ವಂದನೀಯ ಫಾದರ್ ವಿಲ್ಸನ್ ಬೆನ್ನಿಸ್ ರವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಪುಟಾಣಿ ಮಕ್ಕಳಲ್ಲಿ ಭವಿಷ್ಯದ ಕನಸನ್ನು ಬಿತ್ತುವುದಕ್ಕಿಂತ ಕಲಿಕೆಯನ್ನು ಆನಂದದಾಯಕಗೊಳಿಸುವುದು ಮುಖ್ಯ ಇದನ್ನು ಪಾಲಕರು ಮನದಟ್ಟು ಮಾಡಿಕೊಂಡಲ್ಲಿ ಪೂರ್ವ ಪ್ರಾಥಮಿಕ ಹಂತದಲ್ಲಿ ಮಕ್ಕಳ ಮನಸ್ಸನ್ನು ಕಲಿವಿನ ಕಡೆ ಸೆಳೆಯಲು ಸಾಧ್ಯವೆಂದು ತಿಳಿಸಿದರು.
ವೇದಿಕೆಯಲ್ಲಿ ಝೇವಿಯರ್ ಶಾಲೆಯ ಉಪಪ್ರಾಚಾರ್ಯ ಶ್ರೀ ಬಸವರಾಜ್, ಪೂರ್ವ ಪ್ರಾಥಮಿಕ ವಿಭಾಗದ ಸಯೋಜಕರಾದ ಶ್ರೀ ಮತಿ ಸುಷ್ಮಾ ಸ್ಲ್ಯಾನಿ ಪ್ರಾಥಮಿಕ ವಿಭಾಗದ ಸಂಯೋಜಕರುಗಳಾದ ಸಿಸ್ಟರ್.ಫಿಲೋಮಿನಾ ಲೀಮಾ, ಶ್ರೀಮತಿ ಸುನೀತಾ ಬಾಯಿ ಉಪಸ್ಥಿತರಿದ್ದರು.
ನೆರೆದ ಪಾಲಕ ಸಮೂಹದ ಪರವಾಗಿ ಶ್ರೀ ಶೇಕ್ ಸತ್ತಾರ್ ಅವರು ಮಾತನಾಡುತ್ತಾ ಸಮಾರೋಪದಲ್ಲಿ ಪಾಲ್ಗೊಂಡ ಯು.ಕೆ.ಜಿ ಮಕ್ಕಳನ್ನು ಹಾಗೂ ಝೇವಿಯರ್ ಶಿಕ್ಷಕ ಸಮೂಹವನ್ನು ಅಭಿನಂದಿಸಿದರು.
ಶಿಕ್ಷಕರಾದ ಶ್ರೀಮತಿ ಪ್ರೇಮಲತಾ, ಕು||ರಾಧಾ ಕಾರ್ಯಕ್ರಮ ನಿರೂಪಿಸಿದರು ಹಾಗೂ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನು ಶ್ರೀಮತಿ ಸುನಂದಾ ನಡೆಸಿಕ್ಕೊಟ್ಟರು. ಕೊನೆಯಲ್ಲಿ ಸಿಸ್ಟರ್ ಫಿಲೋಮಿನಾ ರವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.
