ಬೆಂಗಳೂರು :- ಮಂಡ್ಯದಲ್ಲಿ ಹಿಂದೂ ಮುಸ್ಲಿಂ ನಡುವೆ ಗಣೇಶ ವಿಸರ್ಜನೆ ವೇಳೆ ಸಂಭವಿಸಿದ ಗಲಾಟೆ ಕೇಸ್ ಗೆ ಸಂಭವಿಸಿದಂತೆ ಜಿ ಪರಮೇಶ್ವರ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಗಣೇಶ ಮೂರ್ತಿ ವಿಸರ್ಜನೆಯ ವೇಳೆ ಆಕಸ್ಮಿಕವಾಗಿ ಕಲ್ಲು ತೂರಾಟ ನಡೆದಿದೆ.
ಇದು ಸಣ್ಣ ಘಟನೆಯಾಗಿದ್ದು ಕೋಮು ಗಲಭೆ ಎಂದು ಹೇಳುವುದು ತಪ್ಪಾಗುತ್ತದೆ ಎಂದರು.
ನಾಗಮಂಗಲದಲ್ಲಿ ನಿನ್ನೆ ಘಟನೆ ನಡೆಯಬಾರದಿತ್ತು. ಸಣ್ಣ ಪ್ರಮಾಣದಲ್ಲಿ ಆಗಿ ಮುಗಿದಿದ್ದು, ಯಾರೂ ಗಾಯಗೊಂಡಿಲ್ಲ. ಆಕಸ್ಮಿಕವಾಗಿ ಅಲ್ಲಿ ಹೋಗುವಾಗ ಕಲ್ಲು ಹಾಕಿದ್ದಾರೆ. ಇವರು ಕಲ್ಲು ಹಾಕಿದ್ದಾರೆ. ಈ ಪ್ರಕರಣಕ್ಕೆ ಜಾಸ್ತಿ ಪ್ರಚಾರ ನೀಡುವುದು ಬೇಡ ಎಂದು ಹೇಳಿದರು.