ಬೆಳಗಾವಿ: ಅಪರಿಚಿತನೋರ್ವ ಕರ್ನಾಟಕ–ಮಹಾರಾಷ್ಟ್ರ ಸಾರಿಗೆ ಬಸ್ಗಳ ಮೇಲೆ ಕಲ್ಲೆಸಿದ್ದು, ಓರ್ವ ಪ್ರಯಾಣಿಕನಿಗೆ ಗಾಯವಾಗಿದೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೆನಕನಹೊಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಬೆಳಗಾವಿ ಎಸ್ಪಿ ಭೀಮಾಶಂಕರ ಗುಳೇದ್ ದೌಡಾಯಿಸಿ ಪರಿಶೀಲನೆ ಮಾಡಿದರು
ಬೆನಕನಹೊಳಿ ಗ್ರಾದ ಬಳಿ ಕೆಎ-42, F-962 ಸಂಖ್ಯೆಯ NWKRTC ಹುಕ್ಕೇರಿ – ಬೆಳಗಾವಿ ತಡೆರಹಿತ ಬಸ್ ಮೇಲೆ ಕಲ್ಲೆಸಿದಿದ್ದು, ಬಸ್ನಲ್ಲಿದ್ದ ಪ್ರಯಾಣಿಕ ರಮೇಶ್ ಚಿವಟೆ(55) ಎಂಬುವರಿಗೆ ಗಾಯವಾಗಿದೆ. ಇನ್ನು ಸ್ಥಳಕ್ಕೆ ಎಸ್ಪಿ ಭೀಮಾಶಂಕರ ಗುಳೇದ್ ಆಗಮಿಸಿದ್ದುಮ ಪರಿಶೀಲನೆ ನಡೆಸಿದ್ದಾರೆ.