ಅಯೋಧ್ಯೆ: ಜನವರಿ 22ರಂದು ಭಗವಾನ್ ರಾಮ ನಮಗೆಲ್ಲರಿಗೂ ದರ್ಶನವನ್ನು ನೀಡಲಿದ್ದಾನೆ. ಅಯೋಧ್ಯೆಯ ರಾಮ ಮಂದಿರದ ‘ಪ್ರಾಣ ಪ್ರತಿಷ್ಠಾ’ ಸಮಾರಂಭಕ್ಕೆ ನನ್ನನ್ನು ಆಹ್ವಾನಿಸಿರುವುದು ನನ್ನ ಅದೃಷ್ಟ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಪ್ರಧಾನ ಮಂತ್ರಿ ಜನಜಾತಿ ಆದಿವಾಸಿ ನ್ಯಾಯ ಮಹಾ ಅಭಿಯಾನ ಅಡಿಯಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ – ಗ್ರಾಮೀಣ ಫಲಾನುಭವಿಗಳನ್ನು ವೀಡಿಯೋ ಕಾನ್ಫರೆನ್ಸ್ ಮೂಲಕ ಮೋದಿಯವರು ಮಾತನಾಡುತ್ತಾ ಈ ರೀತಿಯಾಗಿ ಹೇಳಿದ್ದಾರೆ.
ಇನ್ನೇನು ಕೆಲವು ದಿನಗಳ ನಂತರ ಅಂದರೆ ಜನವರಿ 22 ರಂದು ಭಗವಾನ್ ರಾಮನು ತನ್ನ ಭವ್ಯವಾದ ದೇವಾಲಯದಲ್ಲಿ ನಮಗೆ ದರ್ಶನವನ್ನು ನೀಡುತ್ತಾನೆ. ಪ್ರಾಣ ಪ್ರತಿಷ್ಠಾ ಸಮಾರಂಭಕ್ಕೆ ಮುಂಚಿತವಾಗಿ ನಾನು 11 ದಿನಗಳ ವಿಶೇಷ ಅನುಷ್ಠಾನವನ್ನು ಪ್ರಾರಂಭಿಸಿದ್ದೇನೆ. ಮಾತಾ ಶಬರಿ ಇಲ್ಲದೆ ಭಗವಾನ್ ರಾಮನ ಕಥೆ ಅಪೂರ್ಣ ಎಂದು ಪ್ರಧಾನಿ ತಿಳಿಸಿದರು.