ಇಂದೋರ್: ಬೇರ್ಪಟ್ಟ ಪತಿಯಿಂದ ವಿಚ್ಛೇದನ ಕೋರಿ ಆರು ಕೋಟಿ ರೂಪಾಯಿ ಜೀವನಾಂಶಕ್ಕೆ ಬೇಡಿಕೆ ಇಟ್ಟಿದ್ದ ಮಹಿಳೆಯ ವಿರುದ್ಧ ಮಧ್ಯಪ್ರದೇಶ ಪೊಲೀಸರು ಬೆದರಿಕೆಯ ಪ್ರಕರಣವನ್ನು ದಾಖಲಿಸಿದ್ದಾರೆ.
ಭನ್ವಾರ್ಕುವಾ ಪೊಲೀಸ್ ಠಾಣೆಯ ಡಿಸಿಪಿ ರಾಜೇಶ್ ಸಿಂಗ್ ಮಾತನಾಡಿ, ಭನ್ವಾರ್ಕುವಾನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸಿಸುವ ರಾಮ್ ರಜಪೂತ್ ಅವರು ಲಲಿತ್ ಪುರದಲ್ಲಿ ವಾಸಿಸುವ ಪತ್ನಿ ತನಗೆ ಆರು ಕೋಟಿ ರೂಪಾಯಿ ಜೀವನಾಂಶ ನೀಡುವಂತೆ ಬೆದರಿಕೆ ಹಾಕುತ್ತಿದ್ದಾರೆ ಎಂದು ದೂರು ದಾಖಲಿಸಿದ್ದಾರೆ.
ಇಬ್ಬರ ನಡುವೆ ವಿಚ್ಛೇದನ ಪ್ರಕರಣ ನಡೆಯುತ್ತಿದೆ. ದೂರಿನ ಆಧಾರದ ಮೇಲೆ ಪತ್ನಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 384, 507 ಮತ್ತು 509 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.