ಬೆಂಗಳೂರು: ಪೋಷಕರೇ, ರಾಜಧಾನಿಯ ಬೀದಿಯಲ್ಲಿ ನಿಮ್ಮ ಮಕ್ಕಳನ್ನು ಆಡಲು ಬಿಡುವವರು ನೀವಾದರೆ ಕಟ್ಟೆಚ್ಚರ ವಹಿಸಿ. ಯಾಕೆಂದ್ರೆ ರಸ್ತೆಯಲ್ಲಿ ಬರೋರನ್ನ ಹರಿದು ಮುಕ್ಕೋಕೆ ಬೀದಿನಾಯಿಗಳು ಕಾಯ್ತಾ ಇರರ್ತವೆ. ಹೌದು ರಾಜಧಾನಿಯಲ್ಲಿ ಬೀದಿ ನಾಯಿಗಳ ಹಾವಳಿ ಮಿತಿ ಮೀರಿದ್ದು, ದಿನಕ್ಕೆ ಸರಾಸರಿ 60 ರಿಂದ 70 ಮಂದಿ ಮೇಲೆ ಅಟ್ಯಾಕ್ ಮಾಡುತ್ತಿವೆ ಅಂತೆ ಪಾಲಿಕೆಯೇ ರಿಪೋರ್ಟ್ ಬಿಡುಗಡೆ ಮಾಡಿದೆ.ಇವರಲ್ಲೂ ಮಕ್ಕಳೇ ಅಧಿಕವಾಗಿರೋದು ಆತಂಕ ಹುಟ್ಟಿಸಿದೆ. ಹಾಗಾದ್ರೆ ಕಳೆದ ಕೆಲ ವರ್ಷಗಳಲ್ಲಿ ನಗರದಲ್ಲಿ ನಾಯಿಗಳಿಂದ ಅಟ್ಯಾಕ್ ಆದವರ ಸಂಖ್ಯೆ ಎಷ್ಟಿದೆ ಗೊತ್ತಾ, ಇಷ್ಟು ಇದ್ರೂ ಪಾಲಿಕೆ ಏನ್ಮಾಡ್ತಿದೆ ಬನ್ನಿ ತೋರಿಸ್ತಿವಿ..
ರಾಜಧಾನಿ ಬೆಂಗಳೂರಿನಲ್ಲಿ ದಿನೇ ದಿನೇ ಬೀದಿನಾಯಿಗಳ ಹಾವಳಿ ಹೆಚ್ಚಾಗ್ತಿದೆ. ಬೀದಿನಾಯಿಗಳ ಹಾವಳಿಯಿಂದ ಎಷ್ಟೋ ಮಕ್ಕಳು ಬಲಿಯಾಗಿದ್ದಾರೆ. ಆದ್ರೂ ಬಿಬಿಎಂಪಿ ಈ ಬಗ್ಗೆ ತಲೆನೇ ಕೆಡೆಸಿಕೊಂಡಿಲ್ಲ. ನಗರದ ಪಾರ್ಕ್ ನಲ್ಲೂ ನಾಯಿ ಕಾಟ.. ಬೀದಿಯಲ್ಲೂ ಶ್ವಾನಗಳ ಹಾವಾಳಿ ಮಿತಿ ಮೀರಿದೆ. ಬೀದಿನಾಯಿಗಳ ಉಪಟಳಕ್ಕೆ ಈಗಾಗಲೇ ಬೆಂಗಳೂರಿಗರು ಬೆದರಿ ಹೋಗಿದ್ದಾರೆ. ವರ್ಷದಿಂದ ವರ್ಷಕ್ಕೆ ಹೆಚ್ಚಾಗ್ತಿರೋ ಈ ಸಂತತಿಯ ವೇಗ ಕಡಿಮೆ ಮಾಡಲು ಪಾಲಿಕೆ ಕೋಟ್ಯಾಂತರ ರೂಪಾಯಿ ಖರ್ಚು ಮಾಡುತ್ತೆ. ಆದ್ರೆ ಆ ಕೋಟಿ ಕೋಟಿ ಹಣ ಯಾರ ಜೇಬು ಸೇರುತ್ತಿದೆ ಅನ್ನೋ ಪ್ರಶ್ನೆ ಶುರುವಾಗಿದೆ.
ಹೌದು..ಕಳೆದ ಮೂರು ವರ್ಷಗಳಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ 59285 ಮಂದಿಗೆ ನಾಯಿ ಕಚ್ಚಿದೆ. ಇತ್ತೀಚಿಗೆ ಅಂತೂ ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ರಸ್ತೆಯಲ್ಲಿ ನಡೆದು ಹೋಗುವವರ ಮೇಲೆ ಎರಗುವ ಶ್ವಾನಗಳಿಂದ ಜನರು ಭಯಭೀತರಾಗಿದ್ದಾರೆ. ಬೀದಿ ನಾಯಿಗಳ ಹಾವಳಿ ತಪ್ಪಿಸಲು ಬಿಬಿಎಂಪಿ ಎಷ್ಟೇ ಸರ್ಕಸ್ಸ್ ಮಾಡಿದ್ರೂ ಜನರ ಮೇಲೆ ನಾಯಿಗಳು ಅಟ್ಯಾಕ್ ಮಾಡ್ತಿವೆ. ಹಾಗಾದ್ರೆ ಯಾವೆಲ್ಲಾ ವರ್ಷದಲ್ಲಿ ಎಷ್ಟೆಷ್ಟು ಮಂದಿಗೆ ನಾಯಿ ಕಚ್ಚಿದೆ ಅನ್ನೋದನ್ನ ನೋಡೋದಾದ್ರೆ..
2018-19- 38978
2019-20-42818
2020-21-18629
2021-22-17610
2022-23-22945
ಬಿಬಿಎಂಪಿ ಪಶುಸಂಗೋಪನೆ ಇಲಾಖೆ ನೀಡಿರೋ ಮಾಹಿತಿ ಪ್ರಕಾರ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಪ್ರತಿ ವರ್ಷವೂ ನಾಯಿ ದಾಳಿ ಪ್ರಕರಣ ಹೆಚ್ಚಾಗ್ತಿದೆ. 2018-19- ರಲ್ಲಿ 38978 ಮಂದಿಗೆ ನಾಯಿ ಕಚ್ಚಿದ್ರೆ 2019-20-42818 ಮಂದಿ, 2020-21-ರಲ್ಲಿ 18629, 2021-22-17610ಮಂದಿಗೆ ಹಾಗೂ 2022-23 ರಲ್ಲಿ 22945 ನಾಯಿ ಕಚ್ಚಿದೆ. 2022-23 ರ ಸಾಲಿನಲ್ಲಿ ಪಶ್ಚಿಮ ಹಾಗೂ ಪೂರ್ವ ವಲಯದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಜನರಿಗೆ ಕಚ್ಚಿದೆ ಅನ್ನೋದು ಬಿಬಿಎಂಪಿ ದಾಖಲೆಗಳು ಹೇಳ್ತಿವೆ. ಆದ್ರೆ ನಾಯಿಗಳ ಕಡಿತ ಬಗ್ಗೆ ಬಿಬಿಎಂಪಿ ಹೇಳೋದೇ ಬೇರೆ.
ಪಾಲಿಕೆ ಹೇಳ್ತಿರೋ ಪ್ರಕಾರ ರಾತ್ರಿ ವೇಳೆಯೇ ಅತಿ ಹೆಚ್ಚು ದಾಳಿಗಳು ನಡೆದಿವೆ. ರಾತ್ರಿ ವೇಳೆ ಓಡಾಡುವ ಜನರ ಮೇಲೆ ನಾಯಿಗಳು ಎಗರುತ್ತಿದ್ದು, ರಸ್ತೆ ಬದಿಯಲ್ಲಿರುವ ನಿರ್ಗತಿಕರನ್ನೂ ಬಿಡದೆ ಕಾಡುತ್ತಿವೆ.ವಾಹನದಲ್ಲಿ ತೆರಳುವವರಿಗೂ ಇವು ಕಾಟ ಕೊಡುತ್ತಿದ್ದು, ದ್ವಿಚಕ್ರ ವಾಹನ ಸವಾರರನ್ನು ಅಟ್ಟಿಸಿಕೊಂಡು ಹೋಗುತ್ತವೆ. ನಾಯಿಗಳನ್ನು ತಪ್ಪಿಸಲು ಹೋಗಿ ಬೈಕ್ ಸವಾರರು ಬಿದ್ದು ಗಾಯ ಮಾಡಿಕೊಂಡ ಪ್ರಕರಣಗಳು ಸಾಕಷ್ಟು ನಡೆದಿವೆ. ನಾಯಿಗಳ ಕಾಟಕ್ಕೆ ಮುಕ್ತಿ ನೀಡುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.ಬಿಬಿಎಂಪಿ ವ್ಯಾಪ್ತಿಯಲ್ಲಿ 3.09 ಲಕ್ಷಕ್ಕೂ ಅಧಿಕ ಬೀದಿ ನಾಯಿಗಳಿವೆ. ನಾಯಿಗಳ ಹಾವಳಿ ತಡೆಯಲು ವರ್ಷಕ್ಕೆ 3ರಿಂದ 5 ಕೋಟಿ ಖರ್ಚು ಮಾಡಲಾಗುತ್ತಿದೆ. ಇವುಗಳ ಸಂತಾನಹರಣ ಶಸ್ತ್ರಚಿಕಿತ್ಸೆ ಹಾಗೂ ನಾಯಿಗಳಿಗೆ ರೇಬಿಸ್ ಲಸಿಕೆ ಹಾಕುವುದಕ್ಕೆಂದು ಕೋಟಿಗಟ್ಟಲೆ ಖರ್ಚು ತೋರಿಸಲಾಗುತ್ತಿದೆ. ಕಳೆದ ಮೂರು ವರ್ಷಗಳಲ್ಲಿ 1,81,585 ನಾಯಿಗಳಿಗೆ ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂಬ ಲೆಕ್ಕವಿದೆ. ಆದರೂ ನಾಯಿಗಳು ಮರಿ ಹಾಕುವ ಸಂಖ್ಯೆಯಲ್ಲಿ ಇಳಿಕೆಯಾಗಿಲ್ಲ.ಹೆಜ್ಜೆ ಹೆಜ್ಜೆಗೂ ಗುರ್ ಎನ್ನುವ ನಾಯಿಗಳು ಸಹಜವಾಗಿಯೇ ಸಾರ್ವಜನಿಕರಲ್ಲಿಭೀತಿ ಸೃಷ್ಟಿಸುತ್ತಿವೆ. ಬೀದಿ ನಾಯಿಗಳ ಹಾವಳಿಯಿಂದ ಜನರು ರೋಸಿ ಹೋಗಿದ್ದಾರೆ. ನಾಯಿ ದಾಳಿ ತಡೆಯೋಕೆ ಆಗದ ಪಾಲಿಕೆ ಜನರನ್ನ ಹೇಗೆ ರಕ್ಷಣೆ ಮಾಡುತ್ತೆ ಅನ್ನೋದು ಜನರ ಪ್ರಶ್ನೆ. ಇನ್ನಾದ್ರೂ ಇದಕ್ಕೆ ಕಡಿವಾಣ ಹಾಕುತ್ತಾ ಅನ್ನೋದನ್ನ ನೋಡಬೇಕು.