ಹೈದರಾಬಾದ್;- ಕೇಂದ್ರದ ಸರ್ವಾಧಿಕಾರಿ ಸರ್ಕಾರ ಕಿತ್ತೊಗೆಯಲು ಶ್ರಮಿಸಿ ಎಂದು ಕಾರ್ಯಕರ್ತರಿಗೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸಲಹೆ ನೀಡಿದ್ದಾರೆ.
ಕಾರ್ಯಕರ್ತರು ತಾಳ್ಮೆಯಿಂದ ಇರಬೇಕು, ಪಕ್ಷದ ಹಿತಕ್ಕೆ ಹಾನಿಯಾಗುವ ರೀತಿಯಲ್ಲಿ ನಾಯಕರ ವಿರುದ್ಧ ಮಾಧ್ಯಮಗಳಿಗೆ ಯಾವುದೇ ರೀತಿಯ ಹೇಳಿಕೆ ನೀಡಬಾರದು. ಸೈದ್ಧಾಂತಿಕ ಸ್ಪಷ್ಟತೆಯೊಂದಿಗೆ ಜನರ ಸಮಸ್ಯೆಗಳ ಬಗ್ಗೆ ಗಮನ ಕೇಂದ್ರೀಕರಿಸಿ, ಯಾವುದೇ ಕಾರಣಕ್ಕೂ ಬಿಜೆಪಿ ತೋಡುವ ಖೆಡ್ಡಾಕ್ಕೆ ಬೀಳಬೇಡಿ ಎಂದು ಪಕ್ಷದ ಮಾಜಿ ಅಧ್ಯಕ್ಷ, ಲೋಕಸಭಾ ಸದಸ್ಯ ರಾಹುಲ್ ಗಾಂಧಿ ಕಿವಿಮಾತು ಹೇಳಿದರು. ಡಿಎಂಕೆಯ ಇಬ್ಬರು ನಾಯಕರು ಸನಾತನ ಧರ್ಮ ಕುರಿತು ನೀಡಿದ ಹೇಳಿಕೆ ಬಳಸಿಕೊಂಡು ಇಂಡಿಯಾ ಕೂಟದ ವಿರುದ್ಧ ಬಿಜೆಪಿ ಪ್ರಚಾರ ಮಾಡುತ್ತಿರುವ ಹಿನ್ನೆಲೆಯಲ್ಲಿ ರಾಹುಲ್ ಎಚ್ಚರಿಕೆಯ ಈ ಸಲಹೆ ನೀಡಿದ್ದಾರೆ.