ತೈವಾನ್ ನ ಕರಾವಳಿ ಪ್ರದೇಶದಲ್ಲಿ ಇಂದು ಬೆಳಗ್ಗೆ 7.4 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು ಯಾವುದೇ ಸಾವು ನೋವುಗಳಾದ ಬಗ್ಗೆ ವರದಿಯಾಗಿಲ್ಲ.
ರಾಜಧಾನಿ ತೈಪೆ ಸೇರಿದಂತೆ ಪೂರ್ವ ತೈವಾನ್ನ ಹಲವು ಭಾಗಗಳಲ್ಲಿ ಭೂಕಂಪನ ಸಂಭವಿಸಿದೆ. ಪೂರ್ವ ತೈವಾನ್, ತೈಪೆ, ಓಕಿನಾವಾ ಸೇರಿದಂತೆ ಹಲವಾರು ಪ್ರದೇಶಗಳ ಕಟ್ಟಡಗಳು ಕುಸಿದಿದ್ದು, ಯಾವುದೇ ಅನಾಹುತದ ಬಗ್ಗೆ ವರದಿಗಳು ಲಭ್ಯವಾಗಿಲ್ಲ. ಕಟ್ಟಡ ಕುಸಿದಿರುವ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.
ಭೂಮಿಯ ಮೇಲ್ಮೈಯಿಂದ ಸುಮಾರು 16 ಕಿ.ಮೀ ಆಳದಲ್ಲಿ ತೈಪೆಯ ಸಮೀಪ ಕಂಪನದ ಕೇಂದ್ರ ಬಿಂದು ದಾಖಲಾಗಿದೆ ಎಂದು ತೈವಾನ್ ಹವಮಾನ ಇಲಾಖೆ ವರದಿ ಮಾಡಿದೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ದಕ್ಷಿಣ ಜಪಾನ್ ಮತ್ತು ಫಿಲಿಪೈನ್ಸ್ ದ್ವೀಪಗಳಿಗೆ ಸುನಾಮಿ ಎಚ್ಚರಿಕೆ ನೀಡಲಾಗಿದೆ.