ಲಕ್ನೋ:- ಅದು ಜ್ಞಾನಮಂದಿರ ಮರ್ರೆ. ಪ್ರವೇಶಕ್ಕೂ ಮುನ್ನ ಕೈ ಮುಗಿದು ಹೋಗುವ ಪುಣ್ಯಸ್ಥಳ. ಮಕ್ಕಳು ಚೆನ್ನಾಗಿ ಓದಿ ಒಳ್ಳೆಯ ಜೀವನ ರೂಪಿಸಿಕೊಳ್ಳಲಿ ಅಂತ ಸ್ಕೂಲ್, ಕಾಲೇಜಿಗೆ ಪೋಷಕರು ಕಳಿಸ್ತಾರೆ. ಆದ್ರೆ ವಿದ್ಯಾರ್ಥಿಗಳು ಮಾಡೋದೇನು. ಇಲ್ಲೊಂದು ದೃಶ್ಯ ನೀವ್ ನೋಡ್ಬಿಟ್ರೆ ನಿಜಕ್ಕೂ ಕ್ಯಾಕರಿಸಿ ಉಗಿತ್ತೀರಿ. ಫುಲ್ ಸ್ಟೋರಿ ಇಲ್ಲಿದೆ ನೋಡಿ. ಹೌದು, ಕಾಲೇಜು ಕ್ಯಾಂಪಸ್ನಲ್ಲೇ ಲಿಪ್ ಕಿಸ್ ಮಾಡುತ್ತಿದ್ದ ಸ್ಟೂಡೆಂಟ್ಸ್ ವರ್ತನೆ ವಿರುದ್ಧ ನೆಟ್ಟಿಗರು ಗರಂ ಆಗಿದ್ದಾರೆ.
ಯುವಕ ಮತ್ತು ಯುವತಿ ಕಾಲೇಜು ಕ್ಯಾಂಪಸ್ನಲ್ಲಿ ಮೈ ಮರೆತು ಲಿಪ್ ಕಿಸ್ ಮಾಡುವುದರಲ್ಲಿ ಮಗ್ನವಾಗಿದೆ. ಜತೆಗೆ ಯುವಕ ಆಕೆಯ ಬಟ್ಟೆಯನ್ನು ಮೇಲೆ ಸರಿಸಿ ಎಲ್ಲೆಲ್ಲೋ ಸ್ಪರ್ಶಿಸುತ್ತಿರುವುದು ಕಂಡು ಬಂದಿದೆ. ಒಂದು ಹಂತದಲ್ಲಿ ಯುವತಿಯೇ ಮುಂದೆ ಹೋಗಿ ಯುವಕನ ತುಟಿಯನ್ನು ಚುಂಚಿಸುತ್ತಾ ಮೈಮರೆಯುತ್ತಾಳೆ. ಈ ದೃಶ್ಯವನ್ನು ಮರೆಯಲ್ಲಿ ನಿಂತು ನೋಡುತ್ತಿದ್ದ ಕೆಲವು ವಿದ್ಯಾರ್ಥಿಗಳು ಸೆರೆ ಹಿಡಿದ್ದಾರೆ.
ಹಾಡಹಗಲೇ ಈ ಜೋಡಿ ರೊಮ್ಯಾನ್ಸ್ ಮಾಡುತ್ತ ಮೈಮರೆತಿರುವ ಘಟನೆ ನಡೆದಿದ್ದು ಉತ್ತರ ಪ್ರದೇಶದ ನೋಯ್ಡಾದ ಪ್ರತಿಷ್ಠಿತ ವಿಶ್ವವಿದ್ಯಾಲಯವೊಂದರಲ್ಲಿ. ಕಳೆದ ವರ್ಷ ನಡೆದಿದೆ ಎನ್ನಲಾದ ಈ ವಿಡಿಯೊ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಮತ್ತೊಮ್ಮೆ ಸದ್ದು ಮಾಡುತ್ತಿದೆ. ಜನಬ್ ಖಾನ್ ಎನ್ನುವವರು ಈ ವಿಡಿಯೊವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು ಈಗಾಗಲೇ 1.5 ಲಕ್ಕಕ್ಕಿಂತ ಅದಿಕ ಮಂದಿ ವೀಕ್ಷಿಸಿದ್ದಾರೆ. ʼʼವಿಶ್ವ ವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳ ವರ್ತನೆ ಗಮನಿಸಿ. ವಿದ್ಯಾರ್ಥಿಗಳು ಕಲಿಕೆಯ ಬದಲು ಅಶ್ಲೀಲತೆಯಲ್ಲಿ ತೊಡಗಿಸಿಕೊಂಡಿರುವುದನ್ನು ನೋಡಿ. ಇದು ನೋಯ್ಡಾದ ಪ್ರತಿಷ್ಠಿತ ವಿಶ್ವವಿದ್ಯಾನಿಯಲವೊಂದರಲ್ಲಿ ಕಂಡು ಬಂದ ದೃಶ್ಯʼʼ ಎಂದು ಅವರು ಬರೆದುಕೊಂಡಿದ್ದಾರೆ.
1.33 ನಿಮಿಷಗಳ ಈ ವಿಡಿಯೊ ನೋಡಿ ಹಲವರು ಈ ವಿದ್ಯಾರ್ಥಿಗಳ ವರ್ತನೆಗೆ ಅಸಹ್ಯ ಪಟ್ಟುಕೊಂಡಿದ್ದಾರೆ. ಕೆಲವರಂತೂ ಛೀಮಾರಿ ಹಾಕಿದ್ದಾರೆ. ಬಹುತೇಕರು ಕಿಡಿ ಕಾರಿದ್ದಾರೆ. ತಮ್ಮಂತೆ ಮಕ್ಕಳು ಕಷ್ಟಪಡಬಾರದು ಎನ್ನುವ ಉದ್ದೇಶದಿಂದ ಬಹುತೇಕ ಪಾಲಕರು ತಮ್ಮ ಹೊಟ್ಟೆ ಬಟ್ಟೆ ಕಟ್ಟಿ ಅವರಿಗೆ ಉನ್ನತ ಶಿಕ್ಷಣ ನೀಡಲು ಮುಂದಾಗುತ್ತಾರೆ. ಕಾಲೇಜಿಗೆ ಕಳುಹಿಸುತ್ತಾರೆ. ಆದರೆ ಮಕ್ಕಳು ಕಾಲೇಜಿಗೆ ಬಂದು ಹೀಗೆ ವರ್ತಿಸುತ್ತಾರೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ