ಜಿಲ್ಲಾಧಿಕಾರಿಯಾಗಿದ್ದಾಗ ರೋಹಿಣಿ ಸಿಂಧೂರಿ ವಾಸವಿದ್ದ ಅತಿಥಿ ಗೃಹದಲ್ಲಿಸಾಮಗ್ರಿಗಳು ನಾಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಅವರ ವೇತನದಲ್ಲಿಯೇ ಮೊತ್ತವನ್ನು ಕಡಿತಗೊಳಿಸುವಂತೆ ಸರ್ಕಾರದ ಕಾರ್ಯದರ್ಶಿಗೆ ಆಡಳಿತ ತರಬೇತಿ ಸಂಸ್ಥೆ (ಎಟಿಐ) ಮನವಿ ಮಾಡಿದೆ.
ಅತಿಥಿ ಗೃಹದಲ್ಲಿಕಾಣೆಯಾಗಿರುವ ಸಾಮಗ್ರಿಗಳ ಮೊತ್ತ ಸುಮಾರು 77,296 ರೂ. ಗಳನ್ನು ರೋಹಿಣಿ ಸಿಂಧೂರಿ ಅವರ ವೇತನದಲ್ಲಿದ್ದ ಕಡಿತಗೊಳಿಸಿ ಡಿಡಿ ಮೂಲಕ ಮೈಸೂರಿನ ಆಡಳಿತ ತರಬೇತಿ ಸಂಸ್ಥೆ ಮಹಾನಿರ್ದೇಶಕರ ಹೆಸರಿಗೆ ಕಳುಹಿಸುವಂತೆ ಸಂಸ್ಥೆಯ ಜಂಟಿ ನಿರ್ದೇಶಕರು ರಾಜ್ಯ ಸರ್ಕಾರ ದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.
ಏನಿದು ಪ್ರಕರಣ?
ರೋಹಿಣಿ ಸಿಂಧೂರಿ ಮೈಸೂರಿಗೆ ಜಿಲ್ಲಾಧಿಕಾರಿಯಾಗಿ ವರ್ಗವಾಗಿ ಬಂದ ನಂತರ 2020 ಅಕ್ಟೋಬರ್ 2ರಿಂದ ನವೆಂಬರ್ 14ರ ತನಕ ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯ ಆವರಣದಲ್ಲಿರುವ ಅತಿಥಿ ಗೃಹದಲ್ಲಿವಾಸ್ತವ್ಯ ಇದ್ದರು. ಅತಿಥಿಗೃಹವನ್ನು ತೆರವುಧಿಗೊಳಿಸಿದಾಗ ಅಲ್ಲಿದ್ದ ಬೆಲೆಬಾಳುವ ವಸ್ತುಗಳು ಇರಲಿಲ್ಲ. ಇದರಿಂದಾಗಿ ರೋಹಿಣಿ ಸಿಂಧೂರಿ ಅವರು ಕಾರ್ಯನಿರ್ವಹಿಸುತ್ತಿದ್ದ ಜಿಲ್ಲಾಧಿಕಾರಿ ಕಚೇರಿಗೆ 2020ರ ಡಿಸೆಂಬರ್ 16, 2021ರ ಜನವರಿ 8 ಹಾಗೂ ಅದೇ ವರ್ಷ ಏಪ್ರಿಲ್ 12ರಂದು ಪತ್ರ ಬರೆದು ಸಂಸ್ಥೆಯ ಸಾಮಗ್ರಿಗಳನ್ನು ಹಿಂತಿರುಗಿಸುವಂತೆ ಸೂಚನೆ ನೀಡಲಾಗಿತ್ತು. ಆದರೆ, ರೋಹಿಣಿ ಸಿಂಧೂರಿ ಯಾವುದೇ ಮಾಹಿತಿ ನೀಡಿರಲಿಲ್ಲ.
ಜಿಲ್ಲಾಧಿಕಾರಿಗಳ ವಸತಿ ಗೃಹದಲ್ಲಿಸಂಸ್ಥೆಯ ಸಾಮಗ್ರಿಗಳು ಇದ್ದಲ್ಲಿಹಿಂತಿರುಗಿಸುವಂತೆಜಿಲ್ಲಾಧಿಕಾರಿಗಳ ವಸತಿ ಗೃಹದಲ್ಲಿಸಂಸ್ಥೆಯ ಸಾಮಗ್ರಿಗಳು ಇದ್ದಲ್ಲಿಹಿಂತಿರುಗಿಸುವಂತೆ ಕೋರಿ 2022ರ ನವೆಂಬರ್ 30ರಂದು ಮತ್ತೊಂದು ಪತ್ರ ಬರೆಯಲಾಗಿತ್ತು. ಇದಕ್ಕೆ “ಜಿಲ್ಲಾಧಿಕಾರಿಗಳ ವಸತಿ ಗೃಹದಲ್ಲಿ ಯಾವುದೇ ಸಾಮಗ್ರಿಗಳು ಇರುವುದಿಲ್ಲ,” ಎಂದು ಉತ್ತರಿಸಲಾಗಿತ್ತು. ರೋಹಿಣಿ ಸಿಂಧೂರಿ ಹಿಂದೂ ಧಾರ್ಮಿಕ ಹಾಗೂ ಧರ್ಮಾದಾಯ ದತ್ತಿಗಳ ಇಲಾಖೆಯಲ್ಲಿಆಯುಕ್ತರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಅತಿಥಿಗೃಹದ ಸಾಮಗ್ರಿಗಳನ್ನು,
ಸಂಸ್ಥೆಗೆ ಹಿಂತಿರುಗಿಸುವಂತೆ ಇಲ್ಲವೇ ನಾಪತ್ತೆಯಾಗಿರುವ ಸಾಮಾಗ್ರಿಗಳ ಮೊತ್ತವನ್ನು ಆಡಳಿತ ತರಬೇತಿ ಸಂಸ್ಥೆಗೆ ಪಾವತಿ ಮಾಡುವಂತೆ ಸೂಚಿಸಲಾಗಿತ್ತು. 2023ರ ಜನವರಿ 15ರಂದು ಈ ಪತ್ರ ಸ್ವೀಕೃತವಾಗಿದ್ದರೂ ಸಿಂಧೂರಿ ಅವರಿಂದ ಯಾವುದೇ ಉತ್ತರ ಬಂದಿರಲಿಲ್ಲ. ಈಗ ಆಡಳಿತ ತರಬೇತಿ ಸಂಸ್ಥೆ ಆಡಳಿತ ವಿಭಾಗದ ಜಂಟಿ ನಿರ್ದೇಶಕರು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ವೇತನದಲ್ಲಿಕಡಿತಗೊಳಿಸುವಂತೆ ಕೋರಿದ್ದಾರೆ.
ರೋಹಿಣಿ ಸಿಂಧೂರಿ ಅವರು ಜಿಲ್ಲಾಧಿಕಾರಿಯಾಗಿದ್ದಾಗಲೇ ಸಾಮಗ್ರಿ ನಾಪತ್ತೆ ಪ್ರಕರಣ ಸಾಕಷ್ಟು ಸುದ್ದಿಯಾಗಿತ್ತು. ಶಾಸಕ ಸಾ.ರಾ.ಮಹೇಶ್ ಅವರು ವಿಧಾನ ಸಭಾ