ಬೆಂಗಳೂರು: ನಮ್ಮ ಮೆಟ್ರೋ ಕಾಮಗಾರಿ ವೇಳೆ ಮತ್ತೊಂದು ಎಡವಟ್ಟು ನಡೆದಿದ್ದು, ಮೆಟ್ರೋ ಸುರಂಗ ಮಾರ್ಗ ನಿರ್ಮಾಣದ ವೇಳೆ ರಸ್ತೆ ಕುಸಿದು ಬಿದ್ದ ಘಟನೆ ಬೆಂಗಳೂರಿನ ಚಿನ್ನಯ್ಯನಪಾಳ್ಯದ ಬಳಿ ನಡೆದಿದೆ. ಬೆಂಗಳೂರಿನ ಚಿನ್ನಯ್ಯನಪಾಳ್ಯದ ಸಮೀಪ ಟಿಡಿಎಂ ನೆಲಮಾರ್ಗದ ಕಾಮಗಾರಿ ವೇಳೆ ರಸ್ತೆ ಕುಸಿದು ಬಿದ್ದಿದೆ. ರಸ್ತೆ ಕುಸಿದ ಪರಿಣಾಮ ಪಕ್ಕದಲಿದ್ದ ಮಸೀದಿ ಬಿರುಕು ಬಿಟ್ಟಿದೆ.
ಮಸೀದಿ ಗೋಡೆಗೆ ತಡೆಯಾಗಿ ಕಬ್ಬಿಣದ ಜಾಕ್ ಗಳನ್ನ ಸಪೋರ್ಟ್ ನೀಡಲಾಗಿದೆ. ಸದ್ಯ ಮಣ್ಣು ಕುಸಿದಿರುವ ಜಾಗಕ್ಕೆ ಕಾಂಕ್ರಿಟ್ ತುಂಬಿಸಲಾಗಿದೆ. ಸಿಮೆಂಟ್ ಮಿಶ್ರಣ ಹಾಕಿ ಬಿದ್ದ ಬಿರುಕು ಸರಿಪಡಿಸಲಾಗುತ್ತಿದೆ. ಸದ್ಯ ಸಿಬ್ಬಂದಿ ರಸ್ತೆಯನ್ನ ಬಂದ್ ಮಾಡಿದ್ದಾರೆ. ಕಾಳೇನಾ ಅಗ್ರಹಾರದಿಂದ ನಾಗವಾರದವರೆಗೆ ಒಟ್ಟು 21 ಕಿ.ಮೀ ಸುರಂಗ ಮಾರ್ಗ ಕೊರೆಯಲಾಗುತ್ತಿದೆ. ಸುರಂಗ ಮಾರ್ಗ ಕೊರೆಯುವಾಗ ನಿನ್ನೆ ಸಂಜೆ 6:30ರ ಸುಮಾರಿಗೆ ಇದ್ದಕ್ಕಿದ್ದಂತೆ ರಸ್ತೆ ಕುಸಿದು ಬಿದ್ದಿದೆ