ಸುಡಾನ್ನಲ್ಲಿ ಸಶಸ್ತ್ರ ಪಡೆ ಮತ್ತು ಅರೆಸೇನಾ ಪಡೆಯ ನಡುವೆ ಮುಂದುವರಿದಿರುವ ಭೀಕರ ಯುದ್ಧದಿಂದ ಕಂಗೆಟ್ಟು ಸುರಕ್ಷಿತ ದೇಶಕ್ಕೆ ಪಲಾಯನ ಮಾಡುವ ಪ್ರಯತ್ನದಲ್ಲಿದ್ದ ವೇಳೆ ದೋಣಿ ಮುಳುಗಿ ಮಕ್ಕಳು, ಮಹಿಳೆಯರ ಸಹಿತ 25 ಮಂದಿ ನೈಲ್ ನದಿಯಲ್ಲಿ ಮುಳುಗಿ ಮೃತಪಟ್ಟಿರುವುದಾಗಿ ವರದಿಯಾಗಿದೆ.
ಆಗ್ನೇಯ ಸುಡಾನ್ನ ಸೆನ್ನಾರ್ ರಾಜ್ಯದಿಂದ ದೋಣಿಯಲ್ಲಿ ಹೊರಟಿದ್ದ ಸುಮಾರು 25 ನಾಗರಿಕರು ಬ್ಲೂ ನೈಲ್ ನದಿಯಲ್ಲಿ ದೋಣಿ ಮುಳುಗಿ ಮೃತಪಟ್ಟಿದ್ದಾರೆ. ಈ ದುರಂತದಲ್ಲಿ ಒಂದು ಕುಟುಂಬ ಸರ್ವನಾಶವಾಗಿದೆ ಎನ್ನಲಾಗುತ್ತಿದೆ.
ಮೃತರಲ್ಲಿ ಮಹಿಳೆಯರು ಮತ್ತು ಮಕ್ಕಳ ಸಂಖ್ಯೆ ಅಧಿಕವಾಗಿದೆ. ಸೇನೆ ಮತ್ತು ಅರೆಸೇನಾ ಪಡೆಯ ನಡುವಿನ ಸಂಘರ್ಷದಿಂದ ಕಂಗೆಟ್ಟಿರುವ ಸುಡಾನ್ ಪ್ರಜೆಗಳು ಅಪಾಯವನ್ನು ಲೆಕ್ಕಿಸದೆ ಸುರಕ್ಷಿತ ಸ್ಥಳವನ್ನು ಅರಸುತ್ತಾ ವಲಸೆ ಹೋಗುತ್ತಿದ್ದಾರೆ ಎಂದು ಸ್ಥಳೀಯ ಸ್ವಯಂಸೇವಾ ಸಂಸ್ಥೆಯೊಂದು ವರದಿ ಮಾಡಿದೆ.