ಚೆನ್ನಾಗಿ ಓಡಾಡಿಕೊಳ್ಳುತ್ತಿದ್ದೆ ಆದರೆ ಇಂದು ಇದ್ದಕ್ಕಿದ್ದಂತೆ ಕಾಲುಗಳು ಊದಿಕೊಳ್ಳಲು ಶುರುವಾಗಿ ಬಿಟ್ಟಿದೆ, ಹಿಂದೆಲ್ಲಾ ಈ ರೀತಿ ನನಗೆ ಎಂದೂ ಆಗುತ್ತಿರಲಿಲ್ಲ ಎನ್ನುವ ಮಾತು ನೀವೂ ಕೂಡ ಕೇಳಿರಬಹುದು.
ಆದರೆ ಒಂದಂತೂ ಸತ್ಯ ಕಾಲುಗಳಲ್ಲಿ ಊತ ಕಂಡು ಬರುವುದಕ್ಕೂ, ಬಿಪಿ ಶುಗರ್ಗೆ ಯಾವುದೇ ಸಂಬಂಧವಿಲ್ಲ.
ಹಾಗಂತ ಇದನ್ನು ಅಲ್ಲಗಳೆಯು ವಂತೆಯೂ ಇಲ್ಲ. ಯಾಕೆಂದ್ರೆ ಮಧುಮೇಹ ಸಮಸ್ಯೆ ಇದ್ದವರಿಗೂ ಕೂಡ ಕೆಲವೊಮ್ಮೆ, ಈ ರೀತಿ ಆಗುವುದು ಇದೆ. ಇನ್ನು ಕೆಲವರಲ್ಲಿ ಹೆಚ್ಚು ಹೊತ್ತು ನಿಂತುಕೊಂಡರೆ, ಹೆಚ್ಚು ಹೊತ್ತು ಕುಳಿತುಕೊಂಡರೆ, ಕಾಲುಗಳು ಇದ್ದಕ್ಕಿದ್ದಂತೆ ಊದಿಕೊಳ್ಳುವ ಸಮಸ್ಯೆ ಎದುರಾಗುತ್ತದೆ.
- ಸಾಸಿವೆ ಎಣ್ಣೆ ಬೆಲೆಯಲ್ಲಿ ದುಬಾರಿ ಆದರೂ ಕೂಡ, ಕೆಲ ವೊಂದು ಆರೋಗ್ಯ ಸಮಸ್ಯೆಗಳಿಗೆ, ಬಹಳ ಒಳ್ಳೆಯದು ಎಂದು ಹಲವಾರು ಬಾರಿ ಸಾಬೀತಾಗಿದೆ.
- ಪ್ರಮುಖವಾಗಿ ಕಾಲುಗಳಲ್ಲಿ ಇದ್ದಕ್ಕಿದ್ದಂತೆ ಊದಿಕೊಳ್ಳು ತ್ತಿದ್ದರೆ, ಸಾಸಿವೆ ಎಣ್ಣೆಯನ್ನು ಉಗುರು ಬೆಚ್ಚಗೆ ಬಿಸಿ ಮಾಡಿ, ಪ್ರತಿ ದಿನವೂ ಕಾಲಿನ ಊದಿ ಕೊಂಡಿರುವ ಭಾಗಕ್ಕೆ ಮಸಾಜ್ ಮಾಡುವುದರಿಂದ ಕಾಲುಗಳಲ್ಲಿ ರಕ್ತ ಸಂಚಾರ ಹೆಚ್ಚಾಗಿ, ಕಾಲುಗಳ ಊತವು ಕಡಿಮೆ ಆಗುತ್ತಾ ಹೋಗುತ್ತದೆ.
- ಶತಮಾನಗಳಿಂದ ಬಳಕೆಯಲ್ಲಿರುವ ಎಪ್ಸಮ್ ಸಾಲ್ಟ್ ನಿಂದ ಆರೋಗ್ಯಕ್ಕೆ ಸಾಕಷ್ಟು ಲಾಭಗಳಿವೆ ಇದು ಉಪ್ಪಿನ ರೂಪದಲ್ಲಿದ್ದರೂ ಕೂಡ, ಅಡುಗೆಗೆ ಬಳಸುವ ಉಪ್ಪಿ ಗಿಂತ ಬಹಳ ಭಿನ್ನವಾಗಿದೆ.
- ಸಾಮಾನ್ಯವಾಗಿ ನೋಡಲು ಉಪ್ಪಿನಂತೆಯೇ ಕಂಡು ಬಂದರೂ ಕೂಡ, ಇದರಲ್ಲಿ ಅಡಗಿರುವ ಉಪಯೋ ಗಗಳು ಹಾಗೂ ರುಚಿ ಸಾಕಷ್ಟು ಭಿನ್ನವಾಗಿರುತ್ತದೆ.
- ಮೊದಲಿಗೆ ಒಂದು ದೊಡ್ಡ ಟಬ್ನಲ್ಲಿ ನಿಮ್ಮ ಎರಡೂ ಕಾಲುಗಳು ಮುಳುಗುವಷ್ಟು ಉಗುರು ಬೆಚ್ಚಗಿನ ನೀರನ್ನು ಇಟ್ಟುಕೊಂಡು, ಅದಕ್ಕೆ ಸರಿಸುಮಾರು ಅರ್ಧ ಕಪ್ ಎಪ್ಸಂ ಸಾಲ್ಟ್ ಮಿಶ್ರಣ ಮಾಡಿಕೊಳ್ಳಿ.
- ಇನ್ನು ನಿಮ್ಮ ಎರಡೂ ಕಾಲುಗಳನ್ನು ಸುಮಾರು ಹದಿ ನೈದು ನಿಮಿಷಗಳವರೆಗೆ ಆದರೂ ಈ ನೀರಿನಲ್ಲಿ ಅದ್ದಿ ಇಟ್ಟುಕೊಳ್ಳಿ. ಹೀಗೆ ಪ್ರತಿದಿನ ಮಾಡುತ್ತಾ ಬಂದರೆ ಬಹಳ ಬೇಗನೇ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳಬಹುದು.
- ಹರಳೆಣ್ಣೆಯಲ್ಲಿ ಸಿಗುವಂತಹ ಆರೋಗ್ಯಕಾರಿ ಅಂಶಗಳು ಹೆಚ್ಚಿ ನವರಿಗೆ ತಿಳಿದಿಲ್ಲ! ಯಾಕೆಂದರೆ ಇದರ ಬಳಕೆ ಮಾಡುವ ಜನರು ತುಂಬಾ ಕಡಿಮೆ ಎಂದೇ ಹೇಳ ಬಹುದು. ಆದರೆ ಆದರೆ ಈ ಎಣ್ಣೆಯು ನಮ್ಮ ಆರೋಗ್ಯ ಹಾಗೂ ಚರ್ಮದ ಆರೈಕೆಯ ವಿಷ್ಯದಲ್ಲಿ ಪ್ರಮುಖ ಪಾತ್ರ ವಹಿಸುವುದು.
- ಪ್ರಮುಖವಾಗಿ ಈ ಎಣ್ಣೆಯಲ್ಲಿ ಆಂಟಿ ಇನ್ಫಾಮೇಟರಿ ಗುಣ ಲಕ್ಷಣಗಳು ಹೆಚ್ಚಾಗಿ ಕಂಡು ಬರುವುದ ರಿಂದ, ಕಾಲುಗಳಲ್ಲಿ ಊತದ ಸಮಸ್ಯೆ ಇದ್ದವರು, ಈ ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ, ನಯವಾಗಿ ಪ್ರತಿದಿನ ಮಸಾಜ್ ಮಾಡುತ್ತಾ ಬರುವುರಿಂದ, ಈ ಸಮಸ್ಯೆ ಕ್ರಮೇಣವಾಗಿ ದೂರವಾಗುತ್ತಾ ಹೋಗುತ್ತದೆ.
- ವೈದ್ಯರೇ ಹೇಳುವ ಪ್ರಕಾರ ದೇಹದಲ್ಲಿ ಮೆಗ್ನೀಷಿಯಂ ಕಡಿಮೆಯಾದಾಗ, ಇನ್ನಿತರ ರೀತಿಯಲ್ಲಿ ಆರೋಗ್ಯಕ್ಕೆ ಸಮಸ್ಯೆಗಳು ಕಾಡಲು ಶುರುವಾಗುತ್ತದೆ.
- ಹೀಗಾಗಿ ಮೆಗ್ನೀಷಿಯಂ ಅಂಶ ಹೆಚ್ಚಿರುವ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಸೇವನೆ ಮಾಡಬೇಕು.
- ಉದಾಹರಣೆಗೆ ಹೇಳುವುದಾದರೆ, ನೆನೆಸಿಟ್ಟ ಬಾದಾಮಿ, ಗೋಡಂಬಿ, ಸೂರ್ಯಕಾಂತಿ ಬೀಜಗಳು, ಕುಂಬಳಕಾಯಿ ಬೀಜಗಳು, ಬಾಳೆಹಣ್ಣು, ದ್ವಿದಳ ಧಾನ್ಯಗಳನ್ನು ಸೇವನೆ ಮಾಡುವ ಅಭ್ಯಾಸ ಮಾಡಿಕೊಳ್ಳಬೇಕು.
- ಇದರಿಂದ ಕಾಲುಗಳಲ್ಲಿ ಕಂಡುಬರುವ ರಕ್ತನಾಳಗಳಲ್ಲಿ ರಕ್ತ ಸಂಚಾರ ಸರಿಯಾಗಿ ಪೂರೈಕೆಯಾಗಿ, ಪಾದಗಳಲ್ಲಿ ಕಂಡು ಬರುವ ಊದಿಕೊಳ್ಳುವ ಸಮಸ್ಯೆ ಕ್ರಮೇಣವಾಗಿ ನಿಯಂತ್ರಣಕ್ಕೆ ಬರುತ್ತದೆ.