ಕಿಚ್ಚ ಸುದೀಪ್ ನಟನೆಯ ಜೊತೆಗೆ ಸಮಾಜ ಸೇವೆಗಳನ್ನು ಮಾಡುತ್ತಿದ್ದಾರೆ. ಸಮಾಜ ಸೇವೆಯ ಮೂಲಕ ಹಲವರಿಗೆ ಮಾದರಿ ಆಗಿರುವ ಸುದೀಪ್ ಇದೀಗ ಮತ್ತೊಂದು ಹೆಜ್ಜೆ ಇಟ್ಟಿದ್ದಾರೆ. ಸದ್ಯ ಸುದೀಪ್ ‘ಕಿಚ್ಚ ಸುದೀಪ್ ಕೇರ್ ಫೌಂಡೇಶನ್’ ಎಂಬ ಹೊಸ ಚಾರಿಟೇಬಲ್ ಟ್ರಸ್ಟ್ ಆರಂಭಿಸಲಾಗಿದೆ.
ಸುದೀಪ್ ಅವರ ಅಳಿಯ ಸಂಚಿತ್ ಸಂಜೀವ್ ಈ ಫೌಂಡೇಶನ್ ಲೋಗೋ ಹಾಗೂ ಟೀ ಶರ್ಟ್ನ ಇತ್ತೀಚೆಗೆ ಬಿಡುಗಡೆ ಮಾಡಿದರು. ಈ ಮೂಲಕ ಸಮಾಜುಮುಖಿ ಕೆಲಸ ಮಾಡಲು ಸುದೀಪ್ ಅವರು ಮತ್ತೊಂದು ಹೆಜ್ಜೆ ಇಟ್ಟಿದ್ದಾರೆ.
ಸುದೀಪ್ ಅವರು ಈಗಾಗಲೇ ‘ಕಿಚ್ಚ ಸುದೀಪ ಚಾರಿಟೆಬಲ್ ಸೊಸೈಟಿ’ ಹೊಂದಿದ್ದಾರೆ. ಇದರ ಅಡಿಯಲ್ಲಿ ಅವರು ಶಾಲೆಗಳನ್ನು ದತ್ತು ಪಡೆದು ಅದರ ಏಳ್ಗೆಗಾಗಿ ದುಡಿಯುತ್ತಿದ್ದಾರೆ. ಕಷ್ಟದಲ್ಲಿರುವ ಮಕ್ಕಳಿಗೆ ಸ್ಕಾಲರ್ಶಿಪ್ ಕೂಡ ಇದರ ಮೂಲಕ ನೀಡಲಾಗುತ್ತಿದೆ. ಕೊವಿಡ್ ಸಂದರ್ಭದಲ್ಲಿ ಕಷ್ಟದಲ್ಲಿರುವ ಕನ್ನಡದ ಹಿರಿಯ ಕಲಾವಿದರು ಹಾಗೂ ತಂತ್ರಜ್ಞರಿಗೆ ದಿನಸಿ ಸಾಮಗ್ರಿ ನೀಡಿದ್ದರು. ಈಗ ಸುದೀಪ್ ಅವರು ‘ಕಿಚ್ಚ ಸುದೀಪ್ ಕೇರ್ ಫೌಂಡೇಶನ್’ ಮೂಲಕ ಮತ್ತೊಂದು ಹೆಜ್ಜೆ ಇಟ್ಟಿದ್ದಾರೆ.
ಸದ್ಯ ಆರಂಭಿಸಿರುವ ‘ಕಿಚ್ಚ ಸುದೀಪ್ ಕೇರ್ ಫೌಂಡೇಶನ್’ ಮೂಲಕ ಶಿಕ್ಷಣ ಹಾಗೂ ವೈದ್ಯಕೀಯ ಸೇವೆ ಒದಗಿಸುವ ಉದ್ದೇಶ ಇಟ್ಟುಕೊಳ್ಳಲಾಗಿದೆ. ಈ ಮೂಲಕ ಅವರು ಮತ್ತಷ್ಟು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ಮುಂದಾಗಿದ್ದಾರೆ.