ಬಿಗ್ ಬಾಸ್ ಅಂದರೆ ಅದು ಸುದೀಪ್ ಅನ್ನೋ ಅಷ್ಟರ ಮಟ್ಟಿಗೆ ಆಗಿಬಿಟ್ಟಿದೆ. ಸುದೀಪ್ ಹೊರತಾಗಿ ಆ ಜಾಗವನ್ನು ತುಂಬಲು ಯಾರಿಂದಲೂ ಸಾಧ್ಯವಿಲ್ಲ ಅನ್ನೋ ಮಾತು ಕೇಳಿ ಬರ್ತಿದೆ. ಕನ್ನಡದ ಬಿಗ್ ರಿಯಾಲಿಟಿ ಶೋ ಆರಂಭವಾದಾಗಿನಿಂದಲೂ ಸುದೀಪ್ ನಿರೂಪಣೆ ಮಾಡುತ್ತಿದ್ದಾರೆ. ಸೀಸನ್ 1ರಿಂದ 10ರವೆರೆಗೂ ಕಿಚ್ಚ ಸುದೀಪ್ ಅವರ ಸಾರಥ್ಯದಲ್ಲಿ ಬಿಗ್ಬಾಸ್ ಮೂಡಿ ಬರುತ್ತಿತ್ತು. ಆದ್ರೆ ಈ ವಾರ ಬಿಗ್ಬಾಸ್ ಶೋನಲ್ಲಿ ನಿರೂಪಕರು ಬದಲಾಗಿದ್ದಾರೆ.
ಯೆಸ್. ಇದೇ ಮೊದಲ ಬಾರಿಗೆ ಬಿಗ್ಬಾಸ್ ಸೀಸನ್ 11ರಲ್ಲಿ ಇಬ್ಬರು ಶೋ ನಿರೂಪಣೆ ಮಾಡಲಿದ್ದಾರೆ. ಪ್ರತಿ ವಿಕೇಂಡ್ನಲ್ಲೂ ಬಿಗ್ಬಾಸ್ ಶೋ ನಡೆಸಿಕೊಡಲು ಕಿಚ್ಚ ಸುದೀಪ್ ಅವರು ಬರುತ್ತಿದ್ದರು. ಆದರೆ ಮೂಲಗಳು ಪ್ರಕಾರ ಶನಿವಾರ ಎಪಿಸೋಡ್ ಅನ್ನು ನಿರ್ದೇಶಕ ಯೋಗರಾಜ್ ಭಟ್, ಹಾಗೂ ಭಾನುವಾರ ಎಪಿಸೋಡ್ ಅನ್ನು ನಟ ಸೃಜನ್ ಲೋಕೇಶ್ ನಡೆಸಿಕೊಡಲಿದ್ದಾರಂತೆ.
ಇತ್ತೀಚೆಗಷ್ಟೇ ಸ್ಯಾಂಡಲ್ವುಡ್ ನಟ ಕಿಚ್ಚ ಸುದೀಪ್ ಅವರ ತಾಯಿ ನಿಧನರಾಗಿದ್ದರು. ಸದ್ಯ ಕಿಚ್ಚ ಸುದೀಪ್ ಅವರು ಅನುಪಸ್ಥಿತಿಯಲ್ಲಿದ್ದಾರೆ. ಹೀಗಾಗಿ ಅವರ ಜಾಗಕ್ಕೆ ಈ ಇಬ್ಬರು ಸೆಲೆಬ್ರೆಟಿಗಳಿಂದ ವೀಕೆಂಡ್ ಶೋವನ್ನು ನಡೆಸಿಕೊಡಲಾಗುತ್ತಿದೆ. ಶನಿವಾರ ನಿರ್ದೇಶಕ ಯೋಗರಾಜ್ ಭಟ್ ಮತ್ತು ಭಾನುವಾರ ಸೃಜನ್ ಶೋ ನಿರೂಪಣೆ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.