ಇತ್ತೀಚೆಗೆ ವಿಶ್ವದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಮದುವೆ ಸಾಕಷ್ಟು ಅದ್ದೂರಿಯಾಗಿ ನೆರವೇರಿದೆ. ಸ್ಯಾಂಡಲ್ ವುಡ್ ನಿಂದ ನಟ ಯಶ್ ದಂಪತಿಗಳು ಭಾಗಿಯಾಗಿದ್ದರು. ಈ ಮದುವೆಗೆ ಸುದೀಪ್ ಯಾಕೆ ಹೋಗಿಲ್ಲ ಎಂಬ ವಿಡಿಯೋ ವೈರಲ್ ಆಗಿತ್ತು. ಆದ್ರೆ ಇದು ಹಳೆಯ ವಿಡಿಯೋವಾಗಿದ್ದು ಇದನ್ನೆ ಅಂಬಾನಿ ಕುಟುಂಬದ ಮದುವೆಗೆ ಲಿಂಕ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡಲಾಗಿತ್ತು.
ವೈರಲ್ ವಿಡಿಯೋದಲ್ಲಿ, ‘ನನಗೆ ಸ್ವಲ್ಪ ಹುಷಾರಿರಲಿಲ್ಲ. ಅಲ್ಲಿ ತುಂಬ ಕಟ್ಟುನಿಟ್ಟಾದ ಪ್ರೋಟೋಕಾಲ್ ಇತ್ತು. ಶೀತ, ಜ್ವರ ಇತ್ಯಾದಿ ಇದ್ದರೆ ಆರ್ಟಿಪಿಸಿಆರ್ ಮಾಡಬೇಕಿತ್ತು. ಅದರಿಂದ ನನಗೆ ಕಂಫರ್ಟ್ ಇರಲಿಲ್ಲ. ನನಗೆ ಸ್ವಲ್ಪ ಟೆಂಪ್ರೇಚರ್ ಇತ್ತು. ಬೇರೆ ಬೇರೆ ಕೆಲಸಗಳಲ್ಲಿ ನಾನು ತೊಡಗಿಕೊಂಡಿದ್ದೆ. ಅಲ್ಲಿ ಹೋಗಿ ಪರೀಕ್ಷೆ ಮಾಡಿದ ಬಳಿಕ ಜ್ವರ ಇದೆ ಅಂತ ಒಳಗೆ ಬಿಡದಿದ್ದರೆ? ಅಲ್ಲಿತನಕ ಹೋಗಿ ವಾಪಸ್ ಬಂದರೆ ತಪ್ಪಾಗುತ್ತದೆ. ಸಂಬಂಧಿಸಿದವರಿಗೆ ಫೋನ್ ಮಾಡಿ ವಿಷಯ ತಿಳಿಸಿದೆ’ ಎಂದು ಸುದೀಪ್ ಹೇಳಿದ್ದರು. ಆದರೆ ಇದು ಅಂಬಾನಿ ಕುಟುಂಭದ ಮದುವೆ ವಿಡಿಯೋವಲ್ಲ.
2023 ಫೆಬ್ರವರಿಯಲ್ಲಿ ಅಶ್ವಿನಿ ಪುನೀತ್ ರಾಜ್ಕುಮಾರ್, ರಿಷಬ್ ಶೆಟ್ಟಿ, ವಿಜಯ್ ಕಿರಗಂದೂರು, ಯಶ್ ಹಾಗೂ ಅಯ್ಯೋ ಶ್ರದ್ಧಾ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ್ದರು. ಈ ವೇಳೆ ಸುದೀಪ್ಗೆ ಆಹ್ವಾನ ನೀಡಲಾಗಿತ್ತು. ಆದರೆ, ಅವರಿಗೆ ಅನಾರೋಗ್ಯ ಕಾರಣದಿಂದ ಹೋಗೋಕೆ ಸಾಧ್ಯ ಆಗಿರಲಿಲ್ಲ. ಆ ಸಂದರ್ಭದಲ್ಲಿ ಸುದೀಪ್ ನೀಡಿದ ಪ್ರತಿಕ್ರಿಯೆ ಇದಾಗಿತ್ತು.