ಸೇನಾ ನೆಲೆಯ ಮೇಲೆ ಆತ್ಮಾಹುತಿ ಬಾಂಬರ್ ಗಳು ನಡೆಸಿದ ಆತ್ಮಾಹುತಿ ಬಾಂಬ್ ದಾಳಿಗೆ 8 ಮಂದಿ ಪಾಕಿಸ್ತಾನಿ ಸೈನಿಕರು ಮೃತಪಟ್ಟಿದ್ದಾರೆ.
ಬಂಡುಕೋರರು ಉತ್ತರ ವಜಿರಿಸ್ತಾನದ ಬುಡಕಟ್ಟು ಪ್ರದೇಶದ ಗಡಿಯಲ್ಲಿರುವ ಬನ್ನುನಲ್ಲಿರುವ ಸೇನಾ ಠಾಣೆ ಮೇಲೆ ದಾಳಿ ನಡೆಸಿದರು. ಆತ್ಮಾಹುತಿ ಬಾಂಬರ್ಗಳು ಸ್ಫೋಟಕಗಳನ್ನು ತುಂಬಿದ್ದ ವಾಹನವನ್ನು ಸೇನಾ ನೆಲೆಯಲ್ಲಿ ಸುತ್ತುವರಿದ ಗೋಡೆಗೆ ಡಿಕ್ಕಿ ಹೊಡೆದು ದಾಳಿ ನಡೆಸಿದರು. ಪರಿಣಾಮ 8 ಸೈನಿಕರು ಮೃತಪಟ್ಟಿದ್ದಾರೆ.
ದಾಳಿಯಲ್ಲಿ ಭಾಗಿಯಾಗಿದ್ದ ಎಲ್ಲಾ 10 ಆಕ್ರಮಣಕಾರರನ್ನು ಸೈನಿಕರು ಕೊಂದಿದ್ದಾರೆ ಎಂದು ಮಿಲಿಟರಿ ಹೇಳಿದೆ. ಬಂಡುಕೋರರ ದಾಳಿಗೆ ಮೃತಪಟ್ಟವರಲ್ಲಿ ಏಳು ಸೇನಾ ಸದಸ್ಯರು ಮತ್ತು ಒರ್ವ ಅರೆಸೇನಾ ಯೋಧ ಸೇರಿದ್ದಾರೆ.
ಅಫ್ಘಾನಿಸ್ತಾನದಿಂದ ಬರುತ್ತಿರುವ ಬೆದರಿಕೆಗಳ ವಿರುದ್ಧ ಪಾಕಿಸ್ತಾನ ಸಶಸ್ತ್ರ ಪಡೆಗಳು ಸೂಕ್ತ ಕ್ರಮಗಳನ್ನು ಕೈಗೊಂಡಿವೆ. ಬಂಡುಕೋರರು ವಸತಿ ಪ್ರದೇಶಕ್ಕೆ ನುಸುಳಿ ದಾಳಿ ನಡೆಸಿದ್ದರಿಂದ 100 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.