ಮಗಳ ಪ್ರೇಮವಿವಾಹಕ್ಕೆ ನೊಂದು ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರು ಗ್ರಾ,ಜಿಲ್ಲೆಯ ನೆಲಮಂಗಲ ಸರ್ಕಾರಿ ಆಸ್ಪತ್ರೆ ಎದುರಿನ ಪಾರ್ಕ್ ನಲ್ಲಿ ಜರುಗಿದೆ
ನೆಲಮಂಗಲ ತಾಲ್ಲೂಕಿನ ಅಂಜನಾನಗರದ 45 ವರ್ಷದ ಮಹಿಳೆ ಲಕ್ಷ್ಮಮ್ಮ ನೇಣಿಗೆ ಶರಣಾದ ಮಹಿಳೆ ಎನ್ನಲಾಗಿದೆ.
ಇತ್ತೀಚೆಗಷ್ಟೇ ತನ್ನ ಮಗಳು ಪ್ರೇಮವಿವಾಹವಾಗಿ ಮನೆ ಬಿಟ್ಟು ಹೋಗಿದಕ್ಕೆ ನೊಂದು ನೇಣಿಗೆ ಶರಣಾಗಿದ್ದಾರೆ.
ನೆಲಮಂಗಲ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.