ನವದೆಹಲಿ: ತನ್ನ ಸೆಲ್ನ ಸಿಸಿಟಿವಿ ದೃಶ್ಯಾವಳಿಗಳು ಸೋರಿಕೆಯಾದ ಕೆಲವೇ ದಿನಗಳಲ್ಲಿ, ವಂಚಕ ಸುಕೇಶ್ ಚಂದ್ರಶೇಖರ್ ಮತ್ತೊಮ್ಮೆ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರಿಗೆ ಪತ್ರ ಬರೆದಿದ್ದಾರೆ ಮತ್ತು ಈ ಹಿಂದೆ ರಕ್ಷಣೆ ಹಣವನ್ನು ಪಡೆದಿದ್ದ ಇಬ್ಬರು ಜೈಲು ಅಧಿಕಾರಿಗಳಿಂದ ವಿಡಿಯೋ ಕ್ಲಿಪ್ ಸೋರಿಕೆಯಾಗಿದೆ ಎಂದು ಹೇಳಿದ್ದಾರೆ.
ಸುಕೇಶ್ ಅವರು ತಮ್ಮ ಪತ್ರದಲ್ಲಿ, ‘4 ದಿನಗಳ ಹಿಂದೆ ನನ್ನ ಸೆಲ್ನ ಸಿಸಿಟಿವಿ ದೃಶ್ಯಾವಳಿಯನ್ನು ಬಿಡುಗಡೆ ಮಾಡಲಾಗಿದ್ದು, ಇದು ಭದ್ರತಾ ಲೋಪವಾಗಿದೆ. ಸಹಾಯಕ ಅಧೀಕ್ಷಕ ದೀಪಕ್ ಶರ್ಮಾ ಮತ್ತು ಉಪ ಅಧೀಕ್ಷಕ ಜಯ್ ಸಿಂಗ್ ಅವರಿಂದ ಸೋರಿಕೆಯಾಗಿದೆ ಎಂದು ನಿಮ್ಮ ತುರ್ತು ಗಮನಕ್ಕೆ ತರುತ್ತಿದ್ದೇನೆ’ ಎಂದಿದ್ದಾರೆ.’ಅವರಿಬ್ಬರೂ ಈ ಹಿಂದೆ ಜೈಲು ರಕ್ಷಣೆಯ ಹಣವಾಗಿ ಒಟ್ಟು 5.5 ಲಕ್ಷ ರೂಪಾಯಿಗಳನ್ನು ಪಡೆದಿದ್ದಾರೆ ಮತ್ತು ಆ ವಿಚಾರವನ್ನು ನಿಮ್ಮ ಗೌರವಾನ್ವಿತ ಕಚೇರಿಗೆ ದೂರಾಗಿ ಕಳುಹಿಸಲಾಗಿದೆ’ ಎಂದು ಪತ್ರದಲ್ಲಿ ಬರೆಯಲಾಗಿದೆ.
ಜೈಲು ಅಧಿಕಾರಿಗಳು ಮಂಡೋಲಿ ಜೈಲಿನಲ್ಲಿರುವ ಸುಕೇಶ್ ಚಂದ್ರಶೇಖರ್ ಸೆಲ್ ಮೇಲೆ ದಾಳಿ ನಡೆಸಿ ಅವರ ಕೆಲವು ಅತ್ಯಮೂಲ್ಯ ಆಸ್ತಿಯನ್ನು ವಶಪಡಿಸಿಕೊಂಡಾದ ಸುಕೇಶ್ ಕಣ್ಣೀರಿಟ್ಟಿದ್ದರು. ಸುಕೇಶ್ ಅವರ ಸೆಲ್ನಿಂದ 1.5 ಲಕ್ಷ ರೂಪಾಯಿ ಮೌಲ್ಯದ ಗುಸ್ಸಿ ಚಪ್ಪಲಿ ಮತ್ತು 80,000 ರೂಪಾಯಿ ಮೌಲ್ಯದ ಎರಡು ಜೀನ್ಸ್ಗಳನ್ನು ವಶಪಡಿಸಿಕೊಳ್ಳಲಾಗಿತ್ತು.