ಬೆಂಗಳೂರು: 2023ರ ಏಕದಿನ ವಿಶ್ವಕಪ್ (World Cup 2023) ಕ್ರಿಕೆಟ್ ಟೂರ್ನಿಯಲ್ಲಿ ಸೋಲಿಲ್ಲದ ಸರದಾರರಂತೆ ಅಜೇಯ ಓಟದಲ್ಲೇ ಸೆಮಿಫೈನಲ್ಗೆ ಲಗ್ಗೆಯಿಟ್ಟಿರುವ ಟೀಂ ಇಂಡಿಯಾ (Team India) ಪ್ರಸಕ್ತ ವರ್ಷದಲ್ಲಿ ಸೆಮಿಫೈನಲ್ಗೆ ಎಂಟ್ರಿ ಕೊಟ್ಟ ಮೊದಲ ತಂಡವಾಗಿದೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೂಪರ್ ಸಂಡೇ ನಡೆದ ಲೀಗ್ ಸುತ್ತಿನ ಕೊನೆಯ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟರ್ಸ್ಗಳು ಅಬ್ಬರಿಸಿ ಬೊಬ್ಬಿರಿದರು. ನೆದರ್ಲೆಂಡ್ಸ್ (Netherlands) ವಿರುದ್ಧ ಪಂದ್ಯದಲ್ಲಿ 410 ರನ್ ಬಾರಿಸಿದ ಭಾರತ ಎದುರಾಳಿ ತಂಡವನ್ನು 250 ರನ್ಗಳಿಗೆ ಕಟ್ಟಿಹಾಕಿ 160 ರನ್ಗಳ ಜಯ ಸಾಧಿಸಿತು. ಡಚ್ಚರ ವಿರುದ್ಧ ಟೀಂ ಇಂಡಿಯಾ ಭರ್ಜರಿ ಪ್ರದರ್ಶನ ತೋರಿದ ಬಳಿಕ ಸೂರ್ಯಕುಮಾರ್ ಯಾದವ್ (Suryakumar Yadav) ಅವರು, ಫೀಲ್ಡಿಂಗ್ ಕೋಚ್ ಟಿ.ದಿಲೀಪ್ ಅವರಿಂದ ʻಫೀಲ್ಡರ್ ಆಫ್ ದಿ ಮ್ಯಾಚ್ʼ (Fielder of the Match) ಪದಕ ಗಿಟ್ಟಿಸಿಕೊಂಡರು. ಇದೇ ವೇಳೆ ಕೆ.ಎಲ್ ರಾಹುಲ್ ಮತ್ತು ರವೀಂದ್ರ ಜಡೇಜಾ ಅವರ ಫೀಲ್ಡಿಂಗ್ ಪ್ರಯತ್ನಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಆಟಗಾರರಿಗೆ ಉತ್ತೇಜನ ನೀಡಲು ಡ್ರೆಸ್ಸಿಂಗ್ ರೂಮ್ನಲ್ಲಿ ಹೊಸ ಕಾನ್ಸೆಪ್ಟ್ ಮಾಡಿರುವ ತಂಡ ಫೀಲ್ಡಿಂಗ್ನಲ್ಲಿ ಅತ್ಯುತ್ತಮ ಸಾಮರ್ಥ್ಯ ತೋರಿದ ಆಟಗಾರರಿಗೆ ಪದಕಗಳನ್ನು ನೀಡಿ ಹುರಿದುಂಬಿಸುತ್ತಿದೆ. ಆಸ್ಟ್ರೇಲಿಯಾ ವಿರುದ್ಧ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರಿಗೆ ಉತ್ತಮ ಫೀಲ್ಡಿಂಗ್ ಪ್ರದರ್ಶನಕ್ಕಾಗಿ ಡ್ರೆಸ್ಸಿಂಗ್ ರೂಮ್ ಚುಟುಕು ಸಮಾರಂಭದಲ್ಲಿ ಚಿನ್ನದ ಪದಕ ನೀಡಲಾಗಿತ್ತು. ಶ್ರೀಲಂಕಾ ವಿರುದ್ಧ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಅವರಿಗೆ ಉತ್ತಮ ಫೀಲ್ಡಿಂಗ್ಗಾಗಿ ಚಿನ್ನದ ಪದಕ ನೀಡಲಾಗಿತ್ತು. ಆದ್ರೆ ಲೀಗ್ ಸುತ್ತಿನ ಕೊನೆಯ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಪದಕ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾದರು.
ಡ್ರೆಸ್ಸಿಂಗ್ ರೂಮ್ನಲ್ಲಿ ನಡೆಯುತ್ತಿದ್ದ ಚುಟುಕು ಸಮಾರಂಭದಲ್ಲಿ ಪದಕಗಳನ್ನು ನೀಡಲಾಗುತ್ತಿತ್ತು. ಆದ್ರೆ ಕೊನೆಯ ಲೀಗ್ ಪಂದ್ಯದ ಬಳಿಕ ದೊಡ್ಡ ಸ್ಕ್ರೀನ್ನಲ್ಲಿ ಪ್ರಶಸ್ತಿಯನ್ನ ಘೋಷಿಸಲಾಯಿತು. ಕೆ.ಎಲ್ ರಾಹುಲ್ ಜಡೇಜಾ ಹಾಗೂ ಸೂರ್ಯ ‘ಫೀಲ್ಡರ್ ಆಫ್ ದಿ ಮ್ಯಾಚ್’ ಪ್ರಶಸ್ತಿ ರೇಸ್ನಲ್ಲಿದ್ದರು. ಆದ್ರೆ ಪ್ರಶಸ್ತಿ ಸೂರ್ಯನ ಪಾಲಾಯಿತು. ಡಚ್ಚರ ವಿರುದ್ಧ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಸೂರ್ಯಕುಮಾರ್ಗೆ ಬ್ಯಾಟಿಂಗ್ನಲ್ಲಿ ಅವಕಾಶ ಸಿಗಲಿಲ್ಲ. ಕೊನೆಯ ಒಂದೇ ಒಂದು ಎಸೆತವನ್ನು ಎದುರಿಸಿದ ಸ್ಕೈ (SKY) 2 ರನ್ ಗಳಿಸುವಲ್ಲಿ ಯಶಸ್ವಿಯಾದರು. ಆದ್ರೆ ಫೀಲ್ಡಿಂಗ್ನಲ್ಲಿ ಉತ್ತಮ ಪ್ರದರ್ಶನ ತೋರಿದ್ದಕ್ಕಾಗಿ ಪದಕ ತಮ್ಮದಾಗಿಸಿಕೊಂಡರು.