ನಕಲಿ ಖಾತೆಗಳ ಮೂಲಕ ಹೆಣ್ಣು ಮಕ್ಕಳ ಮತ್ತು ಸೆಲೆಬ್ರಿಟಿಗಳ ಮಾನ ಹರಾಜು ಮಾಡಿದವರ ವಿರುದ್ಧ ‘ಬಿಗ್ ಬಾಸ್’ ಖ್ಯಾತಿಯ ಸುಷ್ಮಾ ವೀರ್ ದೂರು ದಾಖಲಿಸಿದ್ದಾರೆ. ತಾವು ಆಡದ ಮಾತನ್ನು ತಿರುಚಿ ಟ್ರೋಲ್ ಮಾಡಿದ್ದಕ್ಕೆ ಸೈಬರ್ ಠಾಣೆಗೆ ಮತ್ತು ಮಹಿಳಾ ಆಯೋಗಕ್ಕೆ ಸುಷ್ಮಾ ವೀರ್ ದೂರು ನೀಡಿದ್ದಾರೆ.
ಇತ್ತೀಚೆಗೆ ಸುಷ್ಮಾ ವೀರ್ ಯೂಟ್ಯೂಬ್ ವೊಂದಕ್ಕೆ ಸಂದರ್ಶನ ನೀಡಿದ್ದರು. ಈವೇಳೆ ತಾವು ಆಡದ ಮಾತನ್ನು ತಿರುಚಿ ಟ್ರೋಲ್ ಮಾಡಿದ್ದಾರೆ. ಅವರವರ ಪೇಜ್ಗಳ ಲೈಕ್ ಹಾಗೂ ಲಾಭಕ್ಕಾಗಿ ಮಾನಹಾನಿ ಮಾಡಿದ್ದಾರೆ ಎಂದು ಸೈಬರ್ ಠಾಣೆ ಮತ್ತು ಮಹಿಳಾ ಆಯೋಗಕ್ಕೆ ನಟಿ ದೂರು ದಾಖಲಿಸಿದ್ದಾರೆ. ಈ ಮೂಲಕ ಟ್ರೋಲಿಗರ ವಿರುದ್ಧ ಕಾನೂನು ಸಮರಕ್ಕೆ ಮುಂದಾಗಿದ್ದಾರೆ.