ಇತ್ತೀಚೆಗೆ ನಟಿ ಸ್ವರಾ ಭಾಸ್ಕರ್ ಸಮಾಜವಾದಿ ಪಕ್ಷದ ಫಹಾದ್ ಅಹ್ಮದ್ ಅವರನ್ನು ಮದುವೆ ಆಗಿರುವುದಾಗಿ ಘೋಷಣೆ ಮಾಡಿ ಅಚ್ಚರಿ ವ್ಯಕ್ತಪಡಿಸಿದ್ದರು. ಹಿಂದೂ ಹುಡುಗಿ ಮುಸ್ಲಿಂನನ್ನು ಮದುವೆ ಆಗಿದ್ದರಿಂದ ಸಹಜವಾಗಿಯೇ ಚರ್ಚೆ ಹುಟ್ಟಿಕೊಂಡಿತ್ತು. ಇದೀಗ ಸ್ವರಾ ಭಾಸ್ಕರ್ ವಿರುದ್ಧ ವಿಶ್ವ ಹಿಂದೂ ಪರಿಷತ್ ನಾಯಕಿ ಸಾಧ್ವಿ ಪ್ರಾಚಿ ಕಿಡಿಕಾರಿದ್ದಾರೆ.
ದೆಹಲಿಯಲ್ಲಿ ಲವರ್ನ ಕೊಂದು 35 ಪೀಸ್ಗಳನ್ನು ಮಾಡಿ ಫ್ರಿಡ್ಜ್ನಲ್ಲಿ ಇಟ್ಟ ಘಟನೆಯನ್ನು ಸಾಧ್ವಿ ನೆನಪಿಸಿದ್ದು, ‘ನಿಮಗೂ ಇದೇ ಗತಿ ಬರಬಹುದು’ ಎಂದು ಸ್ವರಾ ಭಾಸ್ಕರ್ಗೆ ಸಾಧ್ವಿ ಎಚ್ಚರಿಕೆ ನೀಡಿದ್ದಾರೆ.
ಶ್ರದ್ಧಾ ವಾಕರ್ ಪ್ರಕರಣ ಸಾಕಷ್ಟು ಸೆನ್ಸೇಷನ್ ಸೃಷ್ಟಿ ಮಾಡಿತ್ತು. ಅಫ್ತಾಬ್ ಪೂನಾವಾಲ ತನ್ನ ಲವರ್ ಶ್ರದ್ಧಾ ದೇಹವನ್ನು ಕತ್ತರಿಸಿ 35 ತುಂಡುಗಳನ್ನಾಗಿ ಮಾಡಿ ಫ್ರಿಡ್ಜ್ನಲ್ಲಿ ಇಟ್ಟಿದ್ದು, ಪ್ರಕರಣ ಬೆಳಕಿಗೆ ಬಂದ ಬಳಿಕ ಹಲವರಿಗೆ ಆಘಾತ ಆಗಿತ್ತು. ಈಗ ಈ ಪ್ರಕರಣಕ್ಕೂ ಸ್ವರಾ ಭಾಸ್ಕರ್ ಮದುವೆಗೂ ಲಿಂಕ್ ಮಾಡಿದ್ದಾರೆ ಸಾಧ್ವಿ.
‘ಶ್ರದ್ಧಾ ಅವರ ದೇಹವನ್ನು 35 ತುಂಡುಗಳನ್ನಾಗಿ ಮಾಡಿದ ಪ್ರಕರಣದ ಬಗ್ಗೆ ಸ್ವರಾ ಅವರು ಹೆಚ್ಚು ಗಮನವಹಿಸಿಲ್ಲ ಅನಿಸುತ್ತದೆ. ಈ ರೀತಿಯ ನಿರ್ಧಾರ ತೆಗೆದುಕೊಳ್ಳುವ ಮೊದಲು ಅವರು ಫ್ರಿಡ್ಜ್ನ ಒಮ್ಮೆ ನೋಡಬೇಕು. ಇದು ಅವರ ವೈಯಕ್ತಿಕ ಆಯ್ಕೆ. ಅದರಿಂದ ನನಗೇನು ಆಗುವುದಿಲ್ಲ. ಆದರೆ, ಶ್ರದ್ಧಾಗೆ ಬಂದ ಗತಿ ಸ್ವರಾಗೂ ಬರಬಹುದು’ ಎಂದಿದ್ದಾರೆ ಸಾಧ್ವಿ.
‘ಸ್ವರಾ ಅವರು ಈ ಮೊದಲಿನಿಂದಲೂ ಹಿಂದೂ ಧರ್ಮದ ವಿರೋಧಿಯೇ ಆಗಿದ್ದರು. ಬೇರೆ ಧರ್ಮದವರನ್ನು ಅವರು ಮದುವೆ ಆಗುತ್ತಾರೆ ಎಂದು ನನಗೆ ಮೊದಲೇ ಅನಿಸಿತ್ತು. ಅದು ಈಗ ಆಗಿದೆ. ಅವರು ಮುಸ್ಲಿಂನನ್ನು ಮದುವೆ ಆಗಿದ್ದಾರೆ’ ಎಂದು ಸಾಧ್ವಿ ಹೇಳಿದ್ದಾರೆ.