ಬೆಂಗಳೂರು:- ಮೋದಿ ಸರ್ಕಾರ ಕರ್ನಾಟಕ ಕೊಬ್ಬರಿ ಬೆಳೆಗಾರರಿಗೆ ಸಿಹಿ ಸುದ್ದಿ ಕೊಟ್ಟಿದೆ. 7500 ಮೆಟ್ರಕ್ ಟನ್ ಕೊಬ್ಬರಿ ಖರೀದಿಸಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ
ಈ ವರ್ಷದಲ್ಲಿ 2999 ಮೆಟ್ರಿಕ್ ಟನ್ ಖರೀಸಲಾಗುತ್ತಿತ್ತು.
ಆದ್ರೆ, ಹೆಚ್ಚುವರಿ ಖರೀದಿಸುವಂತೆ ಕೇಂದ್ರ ಸಚಿವ ಸೋಮಣ್ಣ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿರುವ ಕೇಂದ್ರ ಸರ್ಕಾರ ಒಟ್ಟು 10,500 ಮೆಟ್ರಿಕ್ ಟನ್ ಕೊಬ್ಬರಿ ಖರೀದಿಸಲು ಒಪ್ಪಿಗೆ ಸೂಚಿಸಿದೆ. ಇದು ರೈತರಿಗೆ ಗುಡ್ ನ್ಯೂಸ್ ಆಗಿದೆ.
ಕೇಂದ್ರ ಸರ್ಕಾರದಿಂದ ಈ ವರ್ಷದಲ್ಲಿ 2999 ಮೆಟ್ರಿಕ್ ಟನ್ ಖರೀಸಲಾಗುತ್ತಿತ್ತು. ಆದ್ರೆ, ರೈತರಿಗೆ ಅನಾನುಕೂಲವಾಗಲಿದೆ ಎಂದು ಅರಿತ ಕೇಂದ್ರ ರೈಲ್ವೆ ರಾಜ್ಯ ಖಾತೆ ವಿ ಸೋಮಣ್ಣ ಅವರು 10 ಸಾವಿರ ಮೆಟ್ರಿಕ್ ಟನ್ ಕೊಬ್ಬರಿ ಖರೀದಿಸುವಂತೆ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಮನವಿ ಮಾಡಿದ್ದರು. ಇದರಿಂದ 2999 ಮೆಟ್ರಿಕ್ ಟನ್ ಜೊತೆಗೆ ಹೆಚ್ಚುವರಿಯಾಗಿ 7500 ಮೆಟ್ರಕ್ ಟನ್ ಕೊಬ್ಬರಿ ಖರೀದಿಸಲು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಒಪ್ಪಿಗೆ ನೀಡಿದ್ದಾರೆ. ಈ ಮೂಲಕ ಇದೀಗ ಕೇಂದ್ರ ಸರ್ಕಾರ ಒಟ್ಟು 10,500 ಮೆಟ್ರಿಕ್ ಟನ್ ಕೊಬ್ಬರಿ ಖರೀದಸಲಿದೆ. ಇದರಿಂದ ಮಂಡ್ಯ,ಹಾಸನ, ತುಮಕೂರು, ದಕ್ಷಿಣಕನ್ನಡ,ತುಮಕೂರು,ರಾಮನಗರ ಜಿಲ್ಲೆಗಳ ರೈತರಿಗೆ ಅನುಕೂಲವಾಗಲಿದೆ.