ಆಸ್ಟ್ರೇಲಿಯಾದ ಬಿಷಪ್ ಒಬ್ಬರನ್ನು ದುಷ್ಕರ್ಮಿಯೋರ್ವ ಮನಸೋ ಇಚ್ಚೆ ಚಾಕುವಿನಿಂದ ಇರಿದಿದ್ದಾನೆ. ಸಿಡ್ನಿಯ ವೇಕ್ಲಿಯಲ್ಲಿ ಧರ್ಮೋಪದೇಶ ನೀಡುವಾಗ ಬಿಷಪ್ ಮಾರ್ ಮಾರಿ ಮೇಲೆ ಹಲ್ಲೆ ನಡೆಸಲಾಗಿದ್ದು ಸದ್ಯ ಹಲ್ಲೆಗೊಳಗಾದ ಬಿಷಪ್ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲಾದ ತುಣುಕಿನಲ್ಲಿ ಬಿಷಪ್ ಮಾತನಾಡುತ್ತಿರುವುದನ್ನು ತೋರಿಸುತ್ತದೆ. ಒಬ್ಬ ವ್ಯಕ್ತಿಯು ಅವನ ಬಳಿಗೆ ಬಂದು ಅವನ ಮುಖ ಮತ್ತು ಕುತ್ತಿಗೆಗೆ ಇರಿದು ಕೊಲ್ಲಲು ಪ್ರಾರಂಭಿಸುತ್ತಾನೆ.
ವೀಡಿಯೊ ತುಣುಕಿನಲ್ಲಿ, ಜನಸಮೂಹದಿಂದ ಕಿರುಚಾಟಗಳು ಕೇಳುತ್ತವೆ ಮತ್ತು ಗಾಯಗೊಂಡ ವ್ಯಕ್ತಿಗೆ ಸಹಾಯ ಮಾಡಲು ಅನೇಕರು ಮುಂದೆ ಧಾವಿಸಿದರು.
ಸಿಡ್ನಿಯಲ್ಲಿ 3 ದಿನಗಳಲ್ಲಿ ಇದು 2ನೇ ಘಟನೆ ಎಂದು ಹೇಳಲಾಗಿದ್ದು ಘಟನೆ ಸಂಬಂಧ ಎನ್ಎಸ್ಡಬ್ಲ್ಯೂ ಪೊಲೀಸರು ಓರ್ವನನ್ನ ವಶಕ್ಕೆ ಪಡೆದಿದ್ದಾರೆ. ಎರಡು ದಿನಗಳ ಹಿಂದಷ್ಟೆ ಸಿಡ್ನಿಯ ಮಾಲ್ವೊಂದರಲ್ಲಿ ಚಾಕು ಇರಿತದ ಘಟನೆ ನಡೆದಿತ್ತು . ಚರ್ಚ್ ಘಟನೆಯಲ್ಲೂ ಹಲವರಿಗೆ ಗಾಯಗಳಾಗಿದ್ದು ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.