ಬೆಂಗಳೂರು: ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯ ಕಿಚ್ಚು ಎಲ್ಲೆಡೆ ಜೋರಾಗಿ ವ್ಯಾಪಿಸುತ್ತಿದ್ದು ಒಬ್ಬರಿಗೊಬ್ಬರು ನಾವೇನು ಕಮ್ಮಿ ಇಲ್ಲವೆನ್ನುವಂತೆ ಎಲ್ಲರು ಚುನಾವಣಾ ಪ್ರಚಾರದ ಅಬ್ಬರ ಚೆನ್ನಾಗಿಯೇ ಮಾಡುತ್ತಿದ್ದಾರೆ.
ಚುನಾವಣಾಕ್ಕಾಗಿ ಆಯಾ ಪಕ್ಷದ ಅಭ್ಯರ್ಥಿಗಳಿಗಾಗಿ ಎಲ್ಲರು ಭರ್ಜರಿಯಾಗಿ ಪ್ರಚಾರ ಕಾರ್ಯ ನಡೆಸುತ್ತಿದ್ದು ಹಾಗೆ ಆಯಾ ಕ್ಷೇತ್ರದಲ್ಲಿ ತಮ್ಮ ತಮ್ಮ ಪಕ್ಷದ ಕಚೇರಿಗಳನ್ನು ಸಹ ಉದ್ಗಾಟನೆ ಮಾಡಿಕೊಳ್ಳುವುದನ್ನು ನಾವು ಕಾಣುತ್ತಿದ್ದೇವೆ.
ಅದೇ ರೀತಿ ಇಂದು ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರದದಲ್ಲಿ ಕರ್ನಾಟಕ ಪ್ರದೇಶ ಜನಾತದಳದ ನೂತನ ಕಚೇರಿಯನ್ನು ಸ್ಥಾಪಿಸಲಾಗಿದ್ದು ಜೆಡಿಎಸ್ ಪರಿಷತ್ ಸದಸ್ಯ ಟಿ.ಎ.ಶರವಣ ಅವರು ನೂತನ ಕಚೇರಿಯನ್ನು ಉದ್ಘಾಟಿಸಿದರು.
ನೂತನ ಕಚೇರಿ ಉದ್ಘಾಟನ ಬಳಿಕ ಮಾತನಾಡಿದ ಅವರು, ಈ ಬಾರಿ ನಾವು ಕುಮಾರಣ್ಣನ ಸರ್ಕಾರ ತರಬೇಕೆಂದು ಭಾರಿ ಪ್ರಯತ್ನದಲ್ಲಿದ್ದೇವೆ.ಅವರು ರಾಜ್ಯದ ಜನತೆಗೆ ಒಳ್ಳೊಳ್ಳೆ ಯೋಜನೆಗಳನ್ನು ಜಾರಿಗೆ ತಂದಿದ್ದರು ಇದನ್ನ ಜನ ಯಾರು ಮರೆತಿಲ್ಲ. ಕುಮಾರಣ್ಣನ ಮುಖ್ಯಮಂತ್ರಿಯಾಗಿ ಈ ಬಾರಿ ನೋಡುತ್ತೇವೆ ಹಾಗೆ ಕಾಂಗ್ರೆಸ್, ಬಿಜೆಪಿ ವಿರುದ್ಧ ಶರವಣ ಕಿಡಿ ಕಾರಿದರು. ಹಾಗೆ ನಮ್ಮ ಈ ಕ್ಷೇತ್ರದ ಅಭ್ಯರ್ಥಿ ಪಕ್ಷಕ್ಕೋಸ್ಕರ ಸಾಕಷ್ಟು ಒಳ್ಳೆ ಕಾರ್ಯಗಳನ್ನು ಮಾಡಿದ್ದಾರೆ. ಅವರ ಪರವಾಗಿ ನಾವು ಪ್ರಚಾರ ಮಾಡಬೇಕಿದೆ ಎಂದು ಹೇಳಿದರು.
ಇದೇ ಸಂಧರ್ಭದಲ್ಲಿ JDS ಪಕ್ಷದ ಹಲವಾರು ಕಾರ್ಯಕರ್ತರು, ಮಹಿಳಾಮಣಿಗಳು ಸೇರಿದಂತೆ ಎಲ್ಲರು ಉಪಸ್ಥಿತಿಯಲ್ಲಿದ್ದರು.