ಬಾಲಿವುಡ್ ಬ್ಯೂಟಿಸ್ ಗಳು ಒಬ್ಬರ ಹಿಂದೊಬ್ಬರಂತೆ ಹಸೆಮಣೆ ಏರುತ್ತಿದ್ದಾರೆ. ಕಳೆದ ವಾರವಷ್ಟೇ ನಟಿ ರಕುಲ್ ಪ್ರೀತ್ ಸಿಂಗ್ ಮತ್ತು ಜಾಕಿ ಭಗ್ನಾನಿ ಗೋವಾದಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದರು. ಜೊತೆಗೆ ನಟಿ ಕೃತಿ ಕರಬಂಧ ಮಾರ್ಚ್ನಲ್ಲಿ ಮದುವೆ ಆಗೋದಾಗಿ ಘೋಷಿಸಿದ್ದಾರೆ. ಈ ಬೆನ್ನಲ್ಲೇ ಬಾಲಿವುಡ್ ನಟಿ ತಾಪ್ಸಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.
ಬ್ಯಾಡ್ಮಿಂಟನ್ ಆಟಗಾರ ಮಥಿಯಾಸ್ ಬೋ ಜೊತೆ ತಾಪ್ಸಿ 10 ವರ್ಷಗಳಿಂದ ಡೇಟಿಂಗ್ ಮಾಡ್ತಿದ್ದಾರೆ. ಗುರುಹಿರಿಯರ ಸಮ್ಮತಿಯ ಮೇರೆಗೆ ಹಸೆಮಣೆ ಏರಲು ಸಜ್ಜಾಗಿದ್ದು 2 ಕುಟುಂಬದವರು ಮತ್ತು ಆಪ್ತರಷ್ಟೇ ಮದುವೆಯಲ್ಲಿ.
ಫೆ.21ರಂದು ರಕುಲ್ ಹಾಗೂ ಜಾಕಿ ಹಸೆಮಣೆ ಏರಿದ್ದಾರೆ. ಕೃತಿ ಇದೇ ಮಾರ್ಚ್ 13ಕ್ಕೆ ಹೊಸ ಬಾಳಿಗೆ ಕಾಲಿಡಲಿದ್ದಾರೆ. ಈ ಬೆನ್ನಲ್ಲೇ ತಾಪ್ಸಿ ತಮ್ಮ ಬಹುಕಾಲದ ಗೆಳೆಯನ ಜೊತೆ ಮದುವೆಗೆ ರೆಡಿಯಾಗಿದ್ದು, ಮಾರ್ಚ್ ಅಂತ್ಯದಲ್ಲಿ ಉದಯಪುರದಲ್ಲಿ ಮದುವೆ ನಡೆಯಲಿದೆ. ತಾಪ್ಸಿ ಮದುವೆಯ ಸುದ್ದಿ ಪಡ್ಡೆ ಹುಡುಗರ ಹೃದಯ ವಿಲ ವಿಲ ಒದ್ದಾಡ್ತಿದೆ.