ಕಳೆದ ಕೆಲವು ದಿನಗಳ ಹಿಂದೆ ಬಾಲಿವುಡ್ ನಟಿ ತಾಪ್ಸಿ ಪನ್ನು ಮದುವೆಯಾಗಿದ್ದಾರೆ ಎಂದು ಸಾಕಷ್ಟು ಸುದ್ದಿಯಾಗಿತ್ತು. ಆದರೆ ನಟಿಯ ಮದುವೆಯ ಫೋಟೋ ಅಥವಾ ವಿಡಿಯೋವಾಗಲಿ ಸಿಕ್ಕಿರಲಿಲ್ಲ. ಿದೀಗ ತಾಪ್ಸಿ ಮದುವೆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಲೀಕ್ ಆಗಿದ್ದು, ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.
ತಾಪ್ಸಿ ಪನ್ನು ಮಾರ್ಚ್ 25 ರಂದು ಗುಟ್ಟಾಗಿ ಮದುವೆ ಆಗಿದ್ದಾರೆ. ತಾಪ್ಸಿ ತನ್ನ ಬಹುಕಾಲದ ಗೆಳೆಯ ಮಥಿಯಾಸ್ ಜೊತೆ ಹಸೆ ಮಣೆ ಏರಿದ್ದಾರೆ. 10 ವರ್ಷಗಳ ಡೇಟಿಂಗ್ ಬಳಿಕ ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದಾರೆ. ನಟಿ ,ಮದುವೆಯ ಬಗ್ಗೆ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ. ಇದೀಗ ತಾಪ್ಸಿ ಮದುವೆಯ ಮೊದಲ ವಿಡಿಯೋ ಹೊರಬಿದ್ದಿದೆ. ಇಬ್ಬರ ಮದುವೆಗೆ ಆಪ್ತರು ಮತ್ತು ಕುಟುಂಬದವರು ಸಾಕ್ಷಿಯಾಗಿದ್ರು.
ತಾಪ್ಸಿ, ಮಥಿಯಾಸ್ ಮದುವೆ ಉದಯಪುರದ ಪರಿಣಯ ಸೂತ್ರದಲ್ಲಿ ನಡೆದಿದೆ. ತಾಪ್ಸಿ ಅವರ ಪತಿ ಒಲಿಂಪಿಕ್ ಪದಕ ವಿಜೇತರಾಗಿದ್ದಾರೆ. ಮದುವೆಯ ಕುರಿತು ಇವರಿಬ್ಬರೂ ಇನ್ನೂ ಅಧಿಕೃತವಾಗಿ ಅನೌನ್ಸ್ ಮಾಡಿಲ್ಲ. ತಾಪ್ಸಿಯ ಮದುವೆಯ ಫೋಟೋಗಳನ್ನು ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.