ಕಾಡಾನೆ ದಾಳಿಯಿಂದ ಗಾಯಗೊಂಡಿದ್ದ ದಸರಾ ಆನೆ ಗೋಪಾಲಸ್ವಾಮಿ ಸಾವು

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದ ಗೋಪಾಲಸ್ವಾಮಿ ಸಾಕಾನೆಯು ಕಾಡಾನೆ ದಾಳಿಗೆ ತುತ್ತಾಗಿ ಮೃತಪಟ್ಟಿದೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಕೊಳುವಿಗೆ ಬಳಿ ಅರಣ್ಯ ಪ್ರದೇಶದಲ್ಲಿ ಗೋಪಾಲಸ್ವಾಮಿ ಸಾಕಾನೆಯು ಮೃತ ಪಟ್ಟಿದ್ದು, ಮಂಗಳವಾರದಂದು ನೇರಳಕುಪ್ಪೆ ಬಿ ಹಾಡಿಯ ಕ್ಯಾಂಪ್​ನಿಂದ ಮೇಯಲು ಅರಣ್ಯಕ್ಕೆ ಬಿಟ್ಟಿದ್ದಾರೆ. ಈ ವೇಳೆ ಕಾಡಾನೆಗಳು ದಾಳಿ ನಡೆಸಿದೆ. ಗೋಪಾಲಸ್ವಾಮಿ ಮೇಲೆ ಕಾಡಾನೆ ಅಯ್ಯಪ್ಪ ದಾಳಿ ಹುಣಸೂರು ತಾಲ್ಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಘಟನೆ ನಡೆದಿದೆ. ಗೋಪಾಲಸ್ವಾಮಿ ಮೇಲೆ ಕಾಡಾನೆ ಅಯ್ಯಪ್ಪ ದಾಳಿ ನಡೆಸಿದೆ. ದಾಳಿಯಲ್ಲಿ ಆನೆ ತೀವ್ರಗಾಗಿ ಗಾಯಗೊಂಡಿದ್ದು, ಗೋಪಾಲಸ್ವಾಮಿ ಆನೆಯ ಚಿರಾಟ […]

Continue Reading