Prajatvkannada
  • Home
  • ಬೆಂಗಳೂರು
  • ಜಿಲ್ಲೆ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಲೈಫ್ ಸ್ಟೈಲ್
  • ಚಲನಚಿತ್ರ
  • ಕ್ರೀಡೆ
  • ಗ್ಯಾಲರಿ
  • ವಿಡಿಯೋ
  • ಜೋತಿಷ್ಯ
Facebook Twitter Instagram
Sunday, January 12
Facebook Instagram YouTube
PrajatvkannadaPrajatvkannada
Demo
  • Home
  • ಬೆಂಗಳೂರು
  • ಜಿಲ್ಲೆ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಲೈಫ್ ಸ್ಟೈಲ್
  • ಚಲನಚಿತ್ರ
  • ಕ್ರೀಡೆ
  • ಗ್ಯಾಲರಿ
  • ವಿಡಿಯೋ
  • ಜೋತಿಷ್ಯ
Prajatvkannada
ರಾಷ್ಟ್ರೀಯ Prajatv KannadaBy Prajatv KannadaJuly 5, 2023

ಅಯ್ಯೋ.. ಕಾರೊಳಗೆ ನಾಯಿಯನ್ನು ಬಿಟ್ಟು ತಾಜ್ʼಮಹಲ್ ವೀಕ್ಷಣೆ: ಉಸಿರುಕಟ್ಟಿ ಪ್ರಾಣ ಬಿಟ್ಟ ಶ್ವಾನ

Share

ಉತ್ತರ ಪ್ರದೇಶ: ಹರ್ಯಾಣ ಮೂಲದ ವ್ಯಕ್ತಿ ಕುಟುಂಬ ಸಮೇತ ಉತ್ತರ ಪ್ರದೇಶ ಪ್ರವಾಸದಲ್ಲಿದ್ದರು. ವಿಶ್ವ ವಿಖ್ಯಾತ ತಾಜ್‌ ಮಹಲ್ ನೋಡುವ ಬಯಕೆಯಲ್ಲಿದ್ದರು. ಜೊತೆಯಲ್ಲೇ ತಮ್ಮ ಮುದ್ದಿನ ನಾಯಿಯನ್ನೂ ಕರೆ ತಂದಿದ್ದರು. ತಾಜ್ ಮಹಲ್ ಬಳಿ ತಮ್ಮ ಕಾರ್ ಪಾರ್ಕ್‌ ಮಾಡಿ, ನಾಯಿಯನ್ನ ಕಾರ್‌ನಲ್ಲೇ ಬಿಟ್ಟು ತಾಜ್‌ ಮಹಲ್‌ನತ್ತ ತೆರಳಿದ್ದಾರೆ. ಆದ್ರೆ, ವಾಪಸ್ ಬಂದು ನೋಡುವ ಹೊತ್ತಿಗೆ ನಾಯಿಯು ಉಸಿರುಗಟ್ಟಿ ಕಾರ್‌ನಲ್ಲೇ ಸತ್ತು ಹೋಗಿದೆ..

ಭಾನುವಾರ ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಆಗ್ರಾದಲ್ಲಿ ವಿಪರೀತ ಬಿಸಿಲು ಇತ್ತು. ಜೊತೆಗೆ ನಾಯಿಯನ್ನು ಕಾರ್‌ನಲ್ಲಿ ಲಾಕ್‌ ಮಾಡಿದ ವೇಳೆ ವಿಂಡೋಗಳನ್ನು ಸಂಪೂರ್ಣವಾಗಿ ಮುಚ್ಚಲಾಗಿತ್ತು. 2 ಗಂಟೆಗಳ ಕಾಲ ಕಾರ್ ಬಂದ್ ಆಗಿತ್ತು. ಹೀಗಾಗಿ, ಕಾರಿನ ಒಳಗೆ ಬಿಸಿಲ ಧಗೆ ಒಂದೆಡೆಯಾದರೆ ಉಸಿರಾಡಲು ಶುದ್ಧ ಗಾಳಿಯೂ ನಾಯಿಗೆ ಸಿಗಲಿಲ್ಲ. ಜೊತೆಗೆ ನಾಯಿಗೆ ಕುಡಿಯಲು ನೀರೂ ಕೂಡಾ ಸಿಗದೆ ಒದ್ದಾಟ ನಡೆಸಿ ದಾರುಣವಾಗಿ ಜೀವ ಬಿಟ್ಟಿದೆ.

ಈ ಘಟನೆಯ ವಿಡಿಯೋ ಕೂಡಾ ವೈರಲ್ ಆಗಿದೆ. ಆಗ್ರಾದ ಸ್ಥಳೀಯ ನಿವಾಸಿಯೊಬ್ಬ ಈ ವಿಡಿಯೋ ಮಾಡಿದ್ದಾನೆ. ಸೋಮವಾರ ಈ ವಿಡಿಯೋವನ್ನು ಆತ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದ. ಈ ವಿಡಿಯೋ ನೋಡಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಲ್ಯಾಬ್ರಡಾರ್ ರಿಟ್ರೈವರ್ ತಳಿಯ ನಾಯಿಯ ಸಾವಿಗೆ ಮರುಕಗೊಂಡು ಸಂತಾಪ ಸೂಚಿಸಿದ್ದಾರೆ. ಈ ವಿಡಿಯೋ ಆಧಾರದ ಮೇಲೆ ಉತ್ತರ ಪ್ರದೇಶ ಪೊಲೀಸರು ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಳ್ಳಲು ಆಗ್ರಾ ಪೊಲೀಸರಿಗೆ ಸೂಚನೆ ನೀಡಿದ್ಧಾರೆ. ಘಟನೆ ಸಂಬಂಧ ತನಿಖೆ ನಡೆಯುತ್ತಿದೆ.

ಈ ಕುರಿತಾಗಿ ಆಗ್ರಾ ಪೊಲೀಸರೂ ಟ್ವೀಟ್ ಮಾಡಿದ್ದು, ಘಟನೆ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವಂತೆ ತಮಗೆ ಸೂಚನೆ ಸಿಕ್ಕಿದೆ ಎಂದು ಹೇಳಿದ್ದಾರೆ. ಈ ಘಟನೆ ಸಂಬಂಧ ಪ್ರಾಣಿಗಳ ವಿರುದ್ಧದ ಕ್ರೌರ್ಯ ತಡೆ ಕಾಯ್ದೆ ಅಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಎಫ್‌ಐಆರ್ ಹಾಕಿದ್ದಾರೆ.


Share
Demo

Related Posts

ಬ್ಯಾಂಕ್ ಆಫ್ ಬರೋಡಾದಲ್ಲಿ ಭರ್ಜರಿ ಉದ್ಯೋಗವಕಾಶ..!

January 10, 2025

ತಿರುಪತಿ ತಿಮ್ಮಪ್ಪನ ದರ್ಶನ ಪಡೆದು 1 ಲಕ್ಷ ಲಡ್ಡು ಪ್ರಸಾದವನ್ನು ಭಕ್ತಾದಿಗಳಿಗೆ ವಿತರಣೆ : ಶಾಸಕ ಟಿಎ ಶರವಣ..

January 10, 2025

ದೇಶಾದ್ಯಂತ ವೈಕುಂಠ ಏಕಾದಶಿ ಸಂಭ್ರಮ: ತಿಮ್ಮಪ್ಪನ ದೇವಾಲಯಕ್ಕೆ ಭೇಟಿ ನೀಡಿದ ಪರಿಷತ್ ಶಾಸಕ ಟಿಎ ಶರವಣ

January 10, 2025

ಹಲಸು ಕೃಷಿ ಮಾಡಿ ಎಕರೆಗೆ 2.5 ಲಕ್ಷ ಆದಾಯ ಪಡೆಯಿರಿ! ವಿಧಾನಗಳೇನು..?

January 2, 2025

ಮಲೇಷ್ಯಾ ಮೂಲದ ಪೌಷ್ಟಿಕಯುಕ್ತ ರಂಬುಟಾನ್ ಹಣ್ಣು ಕರ್ನಾಟಕದಲ್ಲಿಯೂ ಬೆಳೆಯಬಹುದು ತಿಳಿದುಕೊಳ್ಳಿ..

January 1, 2025

ನೀವು ಹೊಸ ಸಿಮ್ ಖರೀದಿಸೋ ಪ್ಲಾನ್ʼನಲ್ಲಿದ್ದೀರಾ..? ಹಾಗಿದ್ರೆ ಈ ರೂಲ್ಸ್ ಓದಿ ತಿಳಿದುಕೊಳ್ಳಿ..

January 1, 2025
© 2025 Prajatvkannada . Designed by Prajatvkannada .
  • Home
  • ಬೆಂಗಳೂರು
  • ಜಿಲ್ಲೆ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಲೈಫ್ ಸ್ಟೈಲ್
  • ಚಲನಚಿತ್ರ
  • ಕ್ರೀಡೆ
  • ಗ್ಯಾಲರಿ
  • ವಿಡಿಯೋ
  • ಜೋತಿಷ್ಯ

Type above and press Enter to search. Press Esc to cancel.