ಬೆಂಗಳೂರು: ಬಜೆಟ್ ಅಧಿವೇಶನ ಶುರುವಾಗಿಯಾಗಿದೆ ಈ ಮಧ್ಯೆ ವಿಧಾನ ಪರಿಷತ್ನ ಪ್ರಶ್ನೋತ್ತರ ಅವಧಿಯಲ್ಲಿ ಬೆಳೆನಾಶದಿಂದಾಗಿ ರೈತರು ಎದುರಿಸುತ್ತಿರುವ ಸಮಸ್ಯೆಯ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಮಾಡಿದೆ ಎಂದು ಪರಿಷತ್ ಸದಸ್ಯ ಟಿ.ಎ.ಶರವಣ ಅವರು ಹೇಳಿದರು.
ರಾಜ್ಯದಲ್ಲಿನ ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಸರ್ಕಾರ ನೀಡಿದ ಉತ್ತರ ಸೂಕ್ತವಾಗಿ ಇರದ ಕಾರಣ,ರೈತರ ಕುಟುಂಬಗಳ ಹಿತಾಶಕ್ತಿ ಕಾಪಾಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕೆಂದು ಸಲಹೆ ನೀಡಿದರು.
ಪ್ರತಿ ಬಾರಿ ತಮ್ಮ ವೈಫಲ್ಯಕ್ಕೆ ಕೇಂದ್ರಕ್ಕೆ ಬೆಟ್ಟು ಮಾಡಿ ತೋರಿಸುತ್ತಿದ್ದಾರೆ. ರೈತರಿಗಾಗಿ ಮೀಸಲಿಟ್ಟ ಹಣವನ್ನು ಗ್ಯಾರಂಟಿ ಯೋಜನೆಗೆ ಬಳಸಿಕೊಳ್ಳಲು ಸಿದ್ಧತೆ ನಡೆಸಿದ್ದಾರೆ.
ಎಲ್ಲಾ ಅನ್ಯಾಯದ ನಡುವೆ ರೈತ ನರಳುತ್ತಿದ್ದಾನೆ. ನೀರಾವರಿ ಸಮಸ್ಯೆ ಕೂಡ ಎದುರಾಗಿದೆ. ಇದರಿಂದ ರೈತರ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಸಭೆ ಸೇರಿ ಬೆಳೆ ನಾಶವಾಗಿ ಕಂಗೆಟ್ಟ ರೈತರಿಗೆ ನ್ಯಾಯ ಬದಗಿಸಲು ಸರಿಯಾದ ಮಾನದಂಡ ರೂಪಿಸಿ,ಸೂಕ್ತ ಕ್ರಮವನ್ನು ಕೈಗೊಳ್ಳಬೇಕೆಂದು ಸಚಿವರನ್ನು ಒತ್ತಾಯಿಸಿದ್ದಾರೆ