ನಟಿ ತಮನ್ನಾ ಭಾಟಿಯಾ ನಟನೆಯ ಜೊತೆಗೆ ಮಾಡೆಲಿಂಗ್ ನಲ್ಲೂ ಖ್ಯಾತಿ ಘಳಿಸಿದ್ದಾರೆ. ಬಿಡುವು ಸಕ್ಕಾಗೆಲ್ಲಾ ತಮನ್ನಾ ರ್ಯಾಂಪ್ ಮೇಲೆ ಹೆಚ್ಚು ಹಾಕುತ್ತಿರುತ್ತಾರೆ. ಇದೀಗ ಈ ಮಿಲ್ಕಿ ಬ್ಯೂಟಿ ಚಂದದ ಫೋಟೋ ಶೂಟ್ ಮಾಡಿಸಿದ್ದ ಅಭಿಮಾನಿಗಳು ಕ್ಲೀನ್ ಬೋಲ್ಡ್ ಆಗಿದ್ದಾರೆ.
ನಟಿ ತಮನ್ನಾ ಭಾಟಿಯಾ ರಾಧೆಯಾಗಿದ್ದಾರೆ. ಆದರೆ ಇದು ಯಾವುದೋ ಸಿನಿಮಾ, ವೆಬ್ ಸರಣಿಗಾಗಿ ಅಲ್ಲ ಬದಲಿಗೆ ಜಾಹೀರಾತಿಗಾಗಿ. ತಮನ್ನಾ ಭಾಟಿಯಾರ ಕೆಲ ಸುಂದರ ಚಿತ್ರಗಳು ಇಲ್ಲಿವೆ.
ನಟಿ ತಮನ್ನಾ ಭಾಟಿಯಾ ಜನಪ್ರಿಯ ಬಹುಭಾಷಾ ನಟಿ. ಅವರು ನಟಿಯಾಗಿ ಎಷ್ಟು ಜನಪ್ರಿಯರೊ ಮಾಡೆಲ್ ಆಗಿಯೂ ಅಷ್ಟೆ ಜನಪ್ರಿಯರು. ಹಲವು ಬ್ರ್ಯಾಂಡ್ಗಳಿಗೆ ರಾಯಭಾರಿ ಆಗಿಯೂ ತಮನ್ನಾ ಗಮನ ಸೆಳೆದಿದ್ದಾರೆ.
ಆದರೆ ಇತ್ತೀಚೆಗೆ ತಮನ್ನಾ ಭಿನ್ನ ರೀತಿಯ ವಿಡಿಯೋ, ಚಿತ್ರಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ರಾಧೆ ಮತ್ತು ಗೋಪಿಕೆಯರ ವೇಷದಲ್ಲಿ ಯುವತಿಯರು ಸ್ನಾನ ಮಾಡುತ್ತಿರುವ ಚಿತ್ರಗಳನ್ನು ತಮನ್ನಾ ಹಂಚಿಕೊಂಡಿದ್ದರು.
ಮುಂದುವರೆದು, ಕೃಷ್ಣ-ರಾಧೆ, ಕೃಷ್ಣನ ತುಂಟಾಟ, ಗೋಪಿಕೆಯರೊಟ್ಟಿಗೆ ಕೃಷ್ಣನ ಸರಸ ಇನ್ನಿತರೆ ದೃಶ್ಯಗಳ ವಿಡಿಯೋ ಹಾಗೂ ಚಿತ್ರಗಳನ್ನು ನಟಿ ತಮನ್ನಾ ಹಂಚಿಕೊಂಡಿದ್ದರು. ಚಿತ್ರ ಹಾಗೂ ವಿಡಿಯೋ ಬಹಳ ಸುಂದರವಾಗಿ ಕಾಣುತ್ತಿದ್ದವು.
ಅಸಲಿಗೆ ತಮನ್ನಾ, ತೊರಾನಿ ಹೆಸರಿನ ಬ್ರ್ಯಾಂಡ್ನ ಬಟ್ಟೆಗಳ ರಾಯಭಾರಿ ಆಗಿದ್ದು, ‘ಲೀಲಾ’ ಹೆಸರಿನ ಲೈನ್ನ ಬಟ್ಟೆಗಳ ಪ್ರಚಾರಕ್ಕಾಗಿ ರಾಧೆಯ ವೇಷದಲ್ಲಿ ನಟಿ ತಮನ್ನಾ ಫೋಟೊಶೂಟ್ ಮಾಡಿಸಿದ್ದಾರೆ.
ತೊರಾನಿಯ ಫೋಟೊಶೂಟ್ ಬಗ್ಗೆ ವೈಯಕ್ತಿಕವಾಗಿ ಬಹಳ ಮೆಚ್ಚುಗೆ ವ್ಯಕ್ತಪಡಿಸಿರುವ ನಟಿ ತಮನ್ನಾ, ಈ ಬ್ರ್ಯಾಂಡ್ ಕೊಲ್ಯಾಬರೇಷನ್ ನನ್ನ ಪಾಲಿಗೆ ಅತ್ಯಂತ ಭಿನ್ನ ಹಾಗೂ ಮಹತ್ವವಾದುದು. ಸೆಟ್ನಲ್ಲಿ ಇದ್ದ ನಮಗೆಲ್ಲರಿಗೂ ನಾವೇನೋ ಅದ್ಭುತವಾದುದನ್ನು ಮಾಡುತ್ತಿರುವ ನಂಬಿಕೆ ಇತ್ತು ಎಂದಿದ್ದಾರೆ.
ರಾಧಾ-ಕೃಷ್ಣರ ಸರಸ, ವಿರಸ ಹೀಗೆ ಹಲವು ಭಾವ, ಭಂಗಿ, ಸನ್ನಿವೇಶಗಳ ಚಿತ್ರಗಳನ್ನು ತೊರಾನಿಯ ಲೀಲಾ ವಿನ್ಯಾಸದ ಉಡುಪುಗಳ ಪ್ರಚಾರಕ್ಕಾಗಿ ಸೆರೆ ಹಿಡಿಯಲಾಗಿದ್ದು ಕೆಲವುಗಳ ಚಿತ್ರ ಇಲ್ಲಿದೆ.
ತಮನ್ನಾ ಭಾಟಿಯಾ ಅವರ ಸರೋಜ್ ಶ್ರೀಜಾ ಲೆಹೆಂಗಾ ಕೆಂಪು ಬಣ್ಣದಿಂದ ಕೂಡಿದ್ದ ಆಕರ್ಷಕವಾಗಿದೆ. TORANI ಸಂಗ್ರಹದ ವಿಶೇಷ ಲೆಹೆಂಗಾದಲ್ಲಿ ಶುದ್ಧ ಜರ್ದೋಸಿ ಮತ್ತು ದೋರಿಯಾ ಕಸೂತಿ ಕೆಲಸವನ್ನು ಮಾಡಲಾಗಿದೆ. ರಾ ಸಿಲ್ಕ್ ಲೆಹೆಂಗಾದಲ್ಲಿ ಗೇರು ಬಣ್ಣದ ಚೋಲಿಯಲ್ಲಿ ಹಕ್ಕಿ ಮತ್ತು ಈಂದ್ ವಿನ್ಯಾಸವನ್ನು ಮಾಡಲಾಗಿದೆ. ಜನ್ಮಾಷ್ಟಮಿಯಲ್ಲಿ ಸಿಂಧೂರಿ ಬಣ್ಣದ ಲೆಹೆಂಗಾದಲ್ಲಿ ಮಹಾರಾಣಿಯಂತೆ ಸುಂದರವಾಗಿ ಕಾಣುತ್ತಿದ್ದಾರೆ.
ರಾಧಾ-ರಾಣಿಯ ಭವ್ಯ ರೂಪ ತಮನ್ನಾ ಭಾಟಿಯಾ ಅವರ ಸಾಂಪ್ರದಾಯಿಕ ಲೆಹೆಂಗಾದಲ್ಲಿ ಮಿಂಚುತ್ತಿದೆ. ಬೇಬಿ ಪಿಂಕ್ ಮತ್ತು ಸ್ಕೈ ಬ್ಲೂ ಬಣ್ಣದ ಲೆಹೆಂಗಾದಲ್ಲಿ ಕಟೌಟ್ ವರ್ಕ್ ಹೊಂದಿರುವ ಎಂಬ್ರಾಯ್ಡರಿ ದುಪಟ್ಟಾವನ್ನು ಬಳಸಲಾಗಿದೆ. ಜೊತೆಗೆ ಗೋಲ್ಡನ್ ಜರಿ ಮತ್ತು ಮುತ್ತುಗಳನ್ನು ಲೆಹೆಂಗಾದಲ್ಲಿ ಪೋಣಿಸಲಾಗಿದೆ.