ಮನುಷ್ಯನ ಜೀವನದಲ್ಲಿ ಆರೋಗ್ಯ ಅತಿ ಮುಖ್ಯವಾದ ಭಾಗವಾಗಿದೆ. ಇಂದಿನ ಆರೋಗ್ಯ ಶೈಲಿ ತುಂಬಾ ಹದಗೆಡುತ್ತಿದೆ. ನಮ್ಮ ಪೂರ್ವಜರು ತಮ್ಮ ಮನೆಗಳಲ್ಲಿ, ತೋಟಗಳಲ್ಲಿ, ಗದ್ದೆಗಳಲ್ಲಿ ಸಿಗುವ ಹಲವು ಹಣ್ಣು ತರಕಾರಿಗಳನ್ನು ಬಳಸಿಕೊಂಡು ರುಚಿರುಚಿಯಾದ ಆರೋಗ್ಯಕರವಾದ ಆಹಾರಗಳನ್ನು ತಯಾರಿಸಿಕೊಳ್ಳುತ್ತಿದ್ದರು
ಅದೇ ಇಂದಿನ ನಮ್ಮ ಪಟ್ಟಣದ ಜೀವನವನ್ನು ಒಮ್ಮೆ ನೋಡಿ. ನೈಸರ್ಗಿಕವಾಗಿ ಸಿಗುವ ಹಲವು ಹಣ್ಣು ತರಕಾರಿಗಳ ಬಗ್ಗೆ ಪಟ್ಟಣದ ಜನರಿಗೆ ತಿಳಿದಿರುವುದಿಲ್ಲ. ಪ್ರತಿಯೊಂದಕ್ಕೂ ಸೂಪರ್ ರ್ಮಾರ್ಕೆಟ್ ಗಳ ಮೇಲೆ ಅವಲಂಬಿತವಾಗಿರುವ ಈ ಕಾಲದ ಜನರು ವಾರಕ್ಕೊಮ್ಮೆ ರಜಾದಿನಗಳಲ್ಲಿ ಹೋಗಿ ವಾರಕ್ಕೆ ಬೇಕಾಗುವಷ್ಟು ಹಣ್ಣು-ತರಕಾರಿಗಳನ್ನು ತಂದು ರೆಫ್ರಿಜರೇಟರ್ ನಲ್ಲಿ ತುಂಬಿಸುತ್ತಾರೆ. ಕೆಲವೊಮ್ಮೆ ರವಿವಾರವೇ ಕೂತು ಇಡೀ ವಾರಕ್ಕೆ ಬೇಕಾಗುವಂತಹ ಹಣ್ಣು ತರಕಾರಿಗಳನ್ನು ಕತ್ತರಿಸಿ ಇಟ್ಟುಕೊಳ್ಳುವುದು ಇದೆ. ರೆಫ್ರಿಜರೇಟರ್ ನಲ್ಲಿ ತುಂಬಾ ಕಾಲದವರೆಗೆ ಉಪಯೋಗಿಸುವ ಪದಾರ್ಥಗಳಲ್ಲಿ ಪೋಷಕಾಂಶಗಳು ನಾಶವಾಗುತ್ತವೆ ಎಂದು ನಮಗೆ ಈಗಾಗಲೇ ತಿಳಿದಿದೆ. ಆದರೂ, ಬೇರೆ ವಿಧಿ ಇಲ್ಲದೆ ಪಟ್ಟಣದ ಜನರು ಇದರ ಮೊರೆ ಹೋಗಲೇಬೇಕಿದೆ. ದುರಾದೃಷ್ಟಕ್ಕೆ ಆಹಾರ ಪದ್ಧತಿಯೇ ಸರಿಯಿಲ್ಲದ ನಾವುಗಳು ಉತ್ತಮ ಆರೋಗ್ಯವನ್ನು ಹೊಂದಲು ಬಯಸುತ್ತೇವೆ.
ಹೀಗೆ ಕೂತು ಉಣ್ಣುವವನಿಗೆ ಮೈ ತುಂಬಾ ಕೊಬ್ಬು ಎಂಬ ಆಧುನಿಕ ಗಾದೆಯನ್ನು ನೀವು ಕೇಳಿರಬಹುದು. ದೈಹಿಕವಾಗಿ ದೇಹವನ್ನು ದಂಡಿಸಿದ ನಾವುಗಳು ಅಯ್ಯೋ ನನ್ನ ತೂಕ ಹೆಚ್ಚಾಗಿದೆ ಎಂದು ಜಿಮ್ ಗೆ ಹೋಗುವುದು, ಡಯಟ್ ಮಾಡುವುದು ಮನಸ್ಸಿಗೆ ಆತಂಕ ಮಾಡಿಕೊಳ್ಳುವುದನ್ನು ಮಾಡುತ್ತೇವೆ
ತೂಕ ಹೆಚ್ಚಿಸಿಕೊಂಡು ದೇಹದಲ್ಲಿರುವ ಕೊಬ್ಬನ್ನು ಕರಗಿಸಬೇಕು, ತೂಕ ಕಳೆದುಕೊಳ್ಳಬೇಕು ಎಂಬ ಆಲೋಚನೆಯಲ್ಲಿ ಪ್ರಯತ್ನದಲ್ಲಿ ನೀವಿದ್ದರೆ, ನಿಮಗೊಂದು ಉತ್ತಮ ಆಯ್ಕೆ ಹುಣಸೆಹಣ್ಣಿನ ರಸ. ಎಷ್ಟೊಂದು ಆರೋಗ್ಯ ಗುಣಗಳನ್ನು ಹೊಂದಿರುವಂತಹ ಈ ಹುಣಸೆಹಣ್ಣು ದೇಹದಲ್ಲಿರುವ ಬೇಡದ ಕೊಬ್ಬನ್ನು ಕರಗಿಸುವಲ್ಲಿ ಪರಿಣಾಮಕಾರಿ .